ದೈವೀಗುಣದಿಂದ ಉತ್ತಮ ಮಾನವರಾಗಬೇಕು

.ಚಿತ್ರದುರ್ಗ. ಅ.೧೯; ದೇವಿಯ ಉಡುಪುಗಳನ್ನು ಧರಿಸುವುದು ಸುಲಭ, ಆದರೆ ದೇವಿಯೇ ಆಗುವುದು ಕಷ್ಟ. ದೇವಿ ಒಳಗಿರುವ ಗುಣಗಳನ್ನು ನಾವು ಅಳವಡಿಸಿಕೊಂಡು  ಅವಳ ಧೈರ್ಯ, ಸಾಹಸ, ಕರುಣೆ, ಪ್ರೀತಿ, ಶಾಂತಿ, ತ್ಯಾಗ, ಬಲಿದಾನಗಳನ್ನು ನಾವು ಅಳವಡಿಸಿಕೊಂಡು, ನಮ್ಮ ಸುತ್ತಮುತ್ತಲಿನ ಸಮಾಜವನ್ನು ಶಾಂತಿ,  ನೆಮ್ಮದಿಯಿಂದ ಇರುವಂತೆ ಮಾಡಿಕೊಳ್ಳಬೇಕು ಎಂದು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ರಶ್ಮಿ ಅಕ್ಕ ಮಾತನಾಡಿದರು.ಅವರು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನಡೆದ ದಸರಾ ಮಹೋತ್ಸವದ ಅಂಗವಾಗಿ “ದೇವಿ ಮಹಾತ್ಮೆ” ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮನುಷ್ಯನ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ ಕೆಡಕುಗಳನ್ನು ದುರ್ಗಾಮಾತೆ ನಿವಾರಣೆ ಮಾಡಿ, ಅಲ್ಲಿ ಪ್ರೀತಿ, ಕರುಣೆ, ಅನುಕಂಪವೆಂಬ, ಅಮೃತವನ್ನು ತುಂಬುತ್ತಾಳೆ. ಭಕ್ತಿಯೆಂಬುದ, ಮನದಲ್ಲಿದ್ದರೆ, ಅಹಂಕಾರ, ಮತ್ಸರ, ಹಗೆತನ ಮತ್ತು ಕೆಟ್ಟ ಶಕ್ತಿಗಳನ್ನು ಅವಳು ಬಡಿದು ಓಡಿಸುತ್ತಾಳೆ. ನವರಾತ್ರಿಯ ಸಮಯದಲ್ಲಿ, ಭಕ್ತರು ದುರ್ಗಾಮಾತೆಯ ९ ಅವತಾರಗಳನ್ನು ಪೂಜಿಸುತ್ತಾರೆ. ಮನುಷ್ಯನ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ, ಕೆಡಕುಗಳನ್ನು ನಿವಾರಣೆ ಮಾಡಿಕೊಂಡು, ಅಲ್ಲಿ ಪ್ರೀತಿ, ಕರುಣೆ, ಅನುಕಂಪ, ತುಂಬಿಕೊಳ್ಳಬೇಕು, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ದೈವೀ ಸ್ಥಾನ ನೀಡಿದ್ದೇವೆ. ಅವಳನ್ನ ನಾವು ನೆನದುಕೊಂಡು, ಹೆಣ್ಣು ಮಕ್ಕಳ ಸಂರಕ್ಷಣೆ ಬಗ್ಗೆ ಜಾಗೃತರಾಗಬೇಕಾಗಿದೆ ಎಂದರು.ರಾವಣನ ದುರ್ಗುಣಗಳು ನಮ್ಮಲ್ಲೂ ಇರುತ್ತವೆ. ಅವುಗಳನ್ನ ನಾವು ಸ್ವತಃ ನಿಗ್ರಹಿಸಿಕೊಂಡು, ಉತ್ತಮ ನಾಗರೀಕರಾಗಬೇಕು. ವಿಶ್ವ ಶಾಂತಿಗಾಗಿ ಆಹಿಂಸೆ, ಕರುಣೆ, ತ್ಯಾಗ ಹೆಚ್ಚು ಕೆಲಸ ಮಾಡಬೇಕು. ನಾಗರೀಕತೆ ಹೆಚ್ಚಾದಂತೆ ಮನುಷ್ಯ ಸ್ವಾರ್ಥಿಯಾಗುತ್ತಿದ್ದಾನೆ. ಅವನನ್ನ ಬದಲಾಹಿಸುವ ದಾರಿಗಳು ಕಠಿಣವಾಗುತ್ತಿವೆ. ೯ ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ ಕೊನೆಯ ದಿನವೇ, ದಶಮಿ. ವಿಜಯ ದಶಮಿ ಎಂದು ಕರೆಯಲಾಗುತ್ತದೆ. ರಾವಣನನ್ನು ಸಂಹಾರ ಮಾಡುವ ಮೊದಲು, ನಾರದರು ರಾಮನಿಗೆ ಶರವನ್ನರಾತ್ರಿ ವ್ರತವನ್ನು ಮಾಡಲು ಹೇಳಿದ್ದರು. ಈ ವ್ರತವನ್ನು ಪೂರ್ಣಗೊಳಿಸಿದ ನಂತರ, ರಾಮನು ಲಂಕೆಯ ಮೇಲೆ ಆಕ್ರಮಣ ಮಾಡಿ, ಯುದ್ಧದಲ್ಲಿ ರಾವಣನನ್ನು ವಧಿಸಿದ. ಹೀಗೇ ವಿಜಯದಶಮಿಯಂದೇ ರಾವಣನ ಸೋಲಾಯಿತು. ದಸರದಂದು ದಶಕಂಠ ರಾವಣನನ್ನು ಶ್ರೀರಾಮನು ಸಂಹರಿಸಿದ ಬಳಿಕ, ವಿಜಯೋತ್ಸವ ನಡೆಯಿತು ಎನ್ನುವ ಪ್ರತೀತಿ ಇದೆ ಎಂದರು.ಶಕ್ತಿ ದೇವತೆ ದುರ್ಗಾದೇವಿ, ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ. ಸಾಕಷ್ಟು ಕಾರಣಗಳಿಂದ ಜಗದ ಮಹಿಮೆಗಳಿಂದಾಗಿ ದುರ್ಗೆ ಬಹಳ ಬಲಶಾಲಿ, ಪ್ರಭಾವಶಾಲಿ ದೇವತೆ, ಒಂದು ರೀತಿಯಲ್ಲಿ ಅವಳು ಕರುಣಾಳು ತಾಯಿಯೆಂದು ಕರೆಯಲ್ಪಡುತ್ತಿದ್ದಾಳೆ. ಇನ್ನೊಂದು ರೀತಿಯಲ್ಲಿ ಅವಳು ತನ್ನ ಕೈಯಲ್ಲಿ ಶಸ್ತ್ರಾಸ್ತ್ರ ಗಳನ್ನು ಹೊತ್ತುಕೊಂಡು,  ಈ ಜೀವಿಗಳು ವಿರುದ್ಧ ಹೋರಾಡಲು ಸಿದ್ಧ  ನಾಶಮಾಡುವ ಸಂಹಾರಕ್ಕೆ ಎಂದೂ ಕರೆಯುತ್ತಾರೆ, ಶಕ್ತಿ ದೇವತೆ ದುರ್ಗಾದೇವಿ ಎಂದರು.ಇನ್ನೊಂದು ರೀತಿಯಲ್ಲಿ ಅವಳು ತನ್ನ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು,  ಈ ಜೀವಿಗಳು ವಿರುದ್ಧ ಹೋರಾಡಲು ಸಿದ್ಧ  ನಾಶಮಾಡುವ ಸಂಹಾರಕ್ಕೆ ಎಂದೂ ಕರೆಯುತ್ತಾರೆ, ಮನುಷ್ಯನ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ ಕೆಡಕುಗಳನ್ನು ದುರ್ಗಾಮಾತೆ ನಿವಾರಣೆ ಮಾಡಿ, ಅಲ್ಲಿ ಪ್ರೀತಿ, ಕರುಣೆ, ಅನುಕಂಪವೆಂಬ, ಅಮೃತವನ್ನು ತುಂಬುತ್ತಾಳೆ. ಭಕ್ತಿಯೆಂಬುದ ಮನದಲ್ಲಿದ್ದರೆ, ಅಹಂಕಾರ, ಮತ್ಸರ, ಹಗೆತನ ಮತ್ತು ಕೆಟ್ಟ ಶಕ್ತಿಗಳನ್ನು ಅವಳು ಬಡಿದು ಓಡಿಸುತ್ತಾಳೆ ಎಂದರು.ಕಾರ್ಯಕ್ರಮದಲ್ಲಿ ರಾವಣನ ಹತ್ತುತಲೆಯ ಮಾದರಿಗೆ ಬಲೂನಗಳನ್ನು ಕಟ್ಟಿ, ನಮ್ಮಲ್ಲಿರುವ ದುಷ್ಟಗುಣಗಳನ್ನು ಸಾಂಕೇತಿಕವಾಗಿ ಒಡೆದು ಹಾಕುವಂತೆ ಏರ್ಪಾಡು ಮಾಡಲಾಗಿತ್ತು.