ದೈವಜ್ಞ ವಿದ್ಯಾ ಸಂಸ್ಥೆಯಲ್ಲಿ ಕಳೆಗಟ್ಟಿದ ವಿಶ್ವ ಯೋಗ ದಿನಾಚರಣೆ

ದಾವಣಗೆರೆ.ಜೂ.೨೩: ನಗರದ ದೇವರಾಜು ಅರಸು ಬಡವಾಣೆಯಲ್ಲಿರುವ ದೈವಜ್ಞ ವಿದ್ಯಾ ಸಂಸ್ಥೆಯ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಾಲೆಯ ಹಿರಿಯ ಶಿಕ್ಷಕಿ ಆಶಾ ಬಂಡಿಗೇರಿ ಯವರು  ಮಕ್ಕಳಿಗೆ ಯೋಗಾಭ್ಯಾಸದ ಜೊತೆ ಯೋಗದ ಮಹತ್ವವನ್ನು ವಿವರಿಸಿದರು.ಸೂರ್ಯನಮಸ್ಕಾರ, ಪ್ರಾಣಾಯಾಮ  ಹಾಗೂ ಯೋಗಾಸನ ಬಂಗಿಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಿದರು. ಶಾಲೆಯ ಬೋಧಕ ಮತ್ತು ಬೋಧಕೇತರ ವರ್ಗದವರು ಯೋಗಾಭ್ಯಾಸದಲ್ಲಿ ತೊಡಗಿಕೊಳ್ಳುವ ಮೂಲಕ ಯೋಗದ ಮಹತ್ವವನ್ನು ಮಕ್ಕಳಿಗೆ ಮನವರಿಕೆ ಮಾಡಿದರು. ಹಾಗೆಯೇ ಪ್ರತಿ ಶನಿವಾರ ಬೆಳಿಗ್ಗೆ ಮಕ್ಕಳಿಗೆ  ಯೋಗಾಸನ  ತರಬೇತಿಯನ್ನು  ನೀಡುವ  ಬಗ್ಗೆಯೂ  ಪ್ರಸ್ತಾಪಿಸಲಾಯಿತು. ಕಾರ್ಯದರ್ಶಿಯವರಾದ  ಯೋಗರಾಜ್ ಆರ್  ಅಣ್ವೇಕರ್  ಮಾತನಾಡಿ  ಬೇಕರಿ ಪದಾರ್ಥಗಳು ಹಾಗೂ ತಂಪು ಪಾನೀಯಗಳಿಂದ ದೂರ ಇರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಮತ್ತು ಉತ್ತಮ ಪೌಷ್ಠಿಕ ಆಹಾರದ ಬಗ್ಗೆ ತಿಳಿಹೇಳಿದರು. ಮುಖ್ಯೋಪಾದ್ಯಾಯಿನಿ  ಪದ್ಮಾವತಿ ವೆರ್ಣೇಕರ್ ಯೋಗಾಸನ ಶಿಬಿರದಲ್ಲಿ ಪಾಲ್ಗೊಂಡ  ಶಿಕ್ಷಕ-ಶಿಕ್ಷಕಿಯರನ್ನು ಮಕ್ಕಳನ್ನು ಅಭಿನಂದಿಸಿದರು.