ದೇಹ, ಮನಸ್ಸು ಮತ್ತು ಆತ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಅವಶ್ಯಕ:ಬಿ.ಕೆ ಸುಮನ್

ಬೀದರ:ಜೂ.21:ಜೂನ್ 21 ರಂದು ಯೋಗ ದಿನವನ್ನು ಆಚರಿಸಲು ಪ್ರಪಂಚದಾದ್ಯಂತ ಪ್ರತಿ ವರ್ಷ ಲಕ್ಷಾಂತರ ಜನರು ಒಟ್ಟಾಗಿ ಸೇರುತ್ತಾರೆ. ಯೋಗದ ಕಲ್ಪನೆ, ಅದರ ಪ್ರಯೋಜನಗಳನ್ನು ಪ್ರಚಾರ ಮಾಡಲು ನಾವು ನಿಬರ್ಂಧಿತರಾಗಿದ್ದೇವೆ ಮತ್ತು ಅದರ ಗುರಿಗಳನ್ನು ಸಾಧಿಸಲು ಬಾಧ್ಯರಾಗಿದ್ದೇವೆ. ಯೋಗದ ಅಭ್ಯಾಸವು ದೂರದ ಗತಕಾಲದಿಂದಲೂ ಇದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ.

“ಆಧುನಿಕ ಕಾಲದಲ್ಲಿ, ದೇಹ, ಮನಸ್ಸು ಮತ್ತು ಆತ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವನ್ನು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳಾಗಿ ವ್ಯಾಪಕವಾಗಿ ಸ್ವೀಕರಿಸಲಾಗಿದೆ. ಯೋಗವು ಬಹುಮುಖಿ ವಜ್ರದಂತೆ ಮತ್ತು ಅದು ಜೀವನಕ್ಕೆ ಅರ್ಥವನ್ನು ನೀಡುತ್ತದೆ. ಯೋಗದ ಉತ್ತಮ ಅಭ್ಯಾಸವು ಸಾಧಕರಿಗೆ ಬಹು ಪ್ರಯೋಜನಗಳನ್ನು ತರುತ್ತದೆ. ಮನುಷ್ಯನು ತನ್ನ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಶುದ್ಧ ಮತ್ತು ಪರಿಪೂರ್ಣವಾಗಿಸುವ ಗುರಿಯನ್ನು ಇಟ್ಟುಕೊಂಡರೆ, ಯೋಗವು ಸಹಾಯ ಮಾಡುತ್ತದೆ ಎಂದು ಹುಮನಾಬಾದ ತಾಲೂಕಿನ ಹಳ್ಳಿಖೇಡ(ಬಿ) ಗ್ರಾಮದಲ್ಲಿ ಪ್ರಜಾಪಿತಾ ಬ್ರಹ್ಮಾಕುಮರಿ ಈಶ್ವರೀಯ ವಿದ್ಯಾಲಯದ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಹಳ್ಳಿಖೇಡ(ಬಿ) ಪ್ರಜಾಪಿತಾ ಬ್ರಹ್ಮಾಕುಮರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿಯರಾದ ಬಿ.ಕೆ. ಸುಮನ್ ಬಹೆನಜಿ ಅವರು ಮತನಾಡಿದ್ದರು.

ಈ ಸಂದರ್ಭದಲ್ಲಿ ಮಾತೋಶ್ರೀ ಕಸ್ತೂರಬಾಯಿ ತಾಳಂಪಳ್ಳಿ ಪ್ರೌಢ ಶಾಲೆಯ ಅಧ್ಯಕ್ಷರಾದ ಶ್ರೀಮತಿ ಮಂಜುಳಾ ಸುಭಾಷ ಗಂಗಾ, ಹುಮ್ನಾಬಾದ ತಾಲೂಕಿನ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಣಘದ ರಾಜ್ಯ ಪರಿಷತ್ ಸದಸ್ಯರಾದ ಸುಭಾಷ ಗಂಗಾ, ನಿವೃತ್ ಮುಖ್ಯಗುರುಗಳು ಬಸವರಾಜ, ಶಾಲಾ ಶಿಕ್ಷಕರು, ಸಿಬ್ಬಂಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.