ದೇಹ ತಂಪಾಗಿರಲು ದ್ರವ ಆಹಾರ ಸೇವಿಸಿ

oplus_131074


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಏ.೧೬; ತಾಪಮಾನ ಹೆಚ್ಚುತ್ತಿರುವುದರಿಂದ ನಮ್ಮ ದೇಹ ತಂಪಾಗಿರಲು ಸರಾಗವಾಗಿ ಜೀರ್ಣವಾಗುವಂತಹ ದ್ರವ ಆಹಾರ ಸೇವಿಸುವುದು ಬಹು ಮುಖ್ಯ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು. ಚಿತ್ರದುರ್ಗ ತಾಲ್ಲೂಕಿನ ದೊಡ್ಡ ಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಜೆ.ಎನ್.ಕೋಟೆ ಉಪ ಕೇಂದ್ರದ ಹೊರವಲಯದಲ್ಲಿ ಇರುವ ಶ್ರೀ ಕೃಷ್ಣ ಪೌಲ್ಟ್ರಿ ಫಾರಂನಲ್ಲಿ ಹೊರ ರಾಜ್ಯ ಬಿಹಾರ, ಮಧ್ಯಪ್ರದೇಶದಿಂದ ಬಂದು ಫಾರಂನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಆರೋಗ್ಯ ರಕ್ಷಣೆ ಕುರಿತು ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗಲೀಜುನಲ್ಲಿ ಕೆಲಸ ಮಾಡುವ ತಾವು ನಿತ್ಯ ಸ್ನಾನ ಮಾಡುವುದು, ಊಟಕ್ಕೂ ಮುನ್ನ ಕೈಗಳ ಸ್ವಚ್ಛತೆ ಕಾಪಾಡಿಕೊಳ್ಳುವುದು, ತೆಳುವಾದ ಶುಭ್ರ ಕಾಟನ್ ಬಟ್ಟೆಗಳನ್ನು ಧರಿಸಿಕೊಂಡು, ಆಗಿಂದಾಗ್ಗೆ ನೀರು ಸೇವನೆ ಮಾಡುತ್ತಾ, ರಾಗಿ ಗಂಜಿ, ಮಜ್ಜಿಗೆ, ಬೇಳೆ ನೀರು ಜೀರ್ಣವಾಗುವಂತಹ ಆಹಾರ ಸೇವಿಸುತ್ತಾ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.