ದೇಹಾಭಿಮಾನಕ್ಕಿಂತ ದೇಶಾಭಿಮಾನ ದೊಡ್ಡದು:ಶ್ರೀಶೈಲ ಜಗದ್ಗುರು

ತಾಳಿಕೋಟೆ:ಜು.28: ದೇಶ ಉಳಿದರೆ ದೇಹ ಉಳಿಯುತ್ತದೆ ಧರ್ಮ ಉಳಿದರೆ ಧನ ಉಳಿಯುತ್ತದೆ ದೇಹ ಧನಗಳನ್ನು ಸುರಕ್ಷೀತವಾಗಿರಲು ದೇಶ ಮತ್ತು ಧರ್ಮಾಭಿಮಾನ ಬೆಳೆಸಿಕೊಳ್ಳಬೇಕೆಂದು ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ಬುಧವಾರರಂದು ತಮ್ಮ ಜನ್ಮ ಸುವರ್ಣ ಮಹೋತ್ಸವ ಹಾಗೂ ದ್ವಾದಶ ಪೀಠಾರೋಹಣ ಮಹೋತ್ಸವ ಅಂಗವಾಗಿ ಶ್ರೀಶೈಲ ಪೀಠದಲ್ಲಿ ಜನೇವರಿ 10-2023ರಿಂದ ಜನೇವರಿ 15 ರವರೆಗೆ ಜರುಗಲಿರುವ ವಿಶೇಷ ಕಾರ್ಯಕ್ರಮಗಳ ಕುರಿತು ತಾಳಿಕೋಟೆ ಪಟ್ಟಣದ ಪೀಠಾರೋಹಣ ಸದ್ಭಕ್ತ ಸಮಿತಿಯ ವತಿಯಿಂದ ಸ್ಥಳೀಯ ಶ್ರೀ ಸಂಗಮೇಶ್ವರ ಸಭಾಭವನದಲ್ಲಿ ಏರ್ಪಡಿಸಲಾದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಶ್ರೀಗಳು ದೇಶದಲ್ಲಿ ಅನೇಕ ಧರ್ಮಗಳಿವೆ ಧರ್ಮದ ಬಗ್ಗೆ ಏಷ್ಟು ಅಭಿಮಾನವಿದೆ ಅದರಂತೆ ದೇಶದ ಅಭಿಮಾನ ಹೆಚ್ಚಿಗೆ ಬೆಳೆಸಿಕೊಳ್ಳಬೇಕೆಂದರು. ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುವ ಕುರಿತು ಹಮ್ಮಿಕೊಂಡಂತಹ ಕಾರ್ಯಕ್ರಮಗಳಿಗೆ ಭಾವನಾತ್ಮಕವಾಗಿ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು. ದೇಶಾಭಿಮಾನ ಹೆಚ್ಚಿಸುವ ಕಾರ್ಯವಾಗಲಿ ಎಂದು ಶುಭ ಹಾರೈಸಿದ ಶ್ರೀಗಳು ಶ್ರೀಶೈಲದಲ್ಲಿ ನಡೆಯುವ ಕಾರ್ಯಕ್ರಮ ಕುರಿತು ಕೇಳಿದ್ದೀರಿ ಶ್ರೀಶೈಲ ಎಂದರೆ ಭಕ್ತಿ, ಶ್ರದ್ದೆ ಎಂಬುದು ಈ ಭಾಗದಲ್ಲಿ ಎದ್ದುಕಾಣುತ್ತಲಿದೆ ಎಂದರು. ಲೋಹ ಚುಂಬಕದಂತೆ ಎಲ್ಲ ಭಕ್ತರನ್ನು ಪ್ರತಿ ವರ್ಷ ಆಕರ್ಷಿಸುತ್ತಿರುವ ಶ್ರೀಶೈಲ ಪೀಠ ಆದಿ ಶಂಕರಾಚಾರ್ಯರು 12 ನೇ ಶತಮಾನದಲ್ಲಿ ವಚನಕಾರರಲ್ಲಿ 11 ನೇ ದೇವದಾಸಿಮಯ್ಯನವರು ಬಾಲ್ಯದಲ್ಲಿ ಕಲಿತಿದ್ದು ಶ್ರೀಶೈಲದಲ್ಲಿಯೇ ಎಂಬುದು ಕುರುವುಗಳು ದೊರೆಯುತ್ತವೆ ಎಂದರು. ಬಸವಾದಿ ಶರಣರು, ಅಕ್ಕಮಹಾದೇವಿ, ಮಲ್ಲಿಕಾರ್ಜುನ 14 ನೇ ಶತಮಾನದಲ್ಲಿ ಹೇಮರಡ್ಡಿ ಮಲ್ಲಮ್ಮಳು ತನ್ನ ಬಧುಕನ್ನು ರಚಿಸಿಕೊಂಡು ಮಲ್ಲಯ್ಯನಿಂದ ಅನುಗ್ರಹ ಪಡೆದುಕೊಂಡಿದ್ದಾಳೆ ತ್ರೇತಾ ಯುಗದಿಂದಲೂ ಇಲ್ಲಿಯವರೆಗೆ ಲಕ್ಷಾಂತರ ಭಕ್ತರು ಬರುತ್ತಿದ್ದಾರೆಂದರು. ಮೈಸೂರ ಮಹಾರಾಜರು ಅನೇಕ ದಾನ ನೀಡಿದ್ದಾರೆ ಅನೇಕ ರಾಜ ಮಹಾರಾಜರು ಕರ್ನಾಟಕಕ್ಕೆ ಸಂಬಂದ ಪಟ್ಟವರೆಂದು ಹೇಳಿದ ಅವರು ಮರಗಾಲ ಕಟ್ಟಿಕೊಂಡು ಅನೇಕ ಭಕ್ತಾಧಿಗಳು ಪಾದಯಾತ್ರೆ ಮಾಡುತ್ತಾರೆ ಇದು ಅಲ್ಲದೇ ತಾಯಿಯನ್ನು ಹೊತ್ತುಕೊಂಡು ಭಕ್ತನೋರ್ವ ಪಾದಯಾತ್ರೆ ಗೈದಿದ್ದಲ್ಲದೇ ಮಹಿಳೆಯೊಬ್ಬಳು 5 ವರ್ಷ ದೂರದಿಂದ ದೀಡ ನಮಸ್ಕಾರ ಹಾಕುತ್ತಾ ಬಂದಿದ್ದಾಳೆ ಇವೇಲ್ಲವನ್ನು ಕಳೆದ 12 ವರ್ಷಗಳಿಂದ ನೋಡುತ್ತಾ ಬಂದಿದ್ದೇವೆಂದರು. ಇವರ ಶಕ್ತಿ ಮಲ್ಲಯ್ಯನ ಶಕ್ತಿ ಎಂದು ಹೇಳಿದ ಶ್ರೀಗಳು ಪಂಚಪೀಠಗಳು ಸಮಾಜದ ಸಲುವಾಗಿ ಪಾದಯಾತ್ರೆಗಳನ್ನು ಮಾಡುತ್ತದೆ ಅದನ್ನು ಪಾದಯಾತ್ರೆಗಳು ಬರುವ ತೊಂದರೆಗಳನ್ನು ಕಂಡು ಹಿಡಿಯುವ ನಾವು ಮಾಡುವ ಪಾದ ಯಾತ್ರೆಯಾಗಿದೆ ಎಂದರಲ್ಲದೇ ಪಾದಯಾತ್ರೆ ನಡೆಸುವ ಸಮಯದಲ್ಲಿ ಯಡಭಲದಲ್ಲಿ ಸಸಿಗಳನ್ನು ನೆಡುತ್ತಾ ಪಾದಯಾತ್ರೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದರು.
ಇನ್ನೋರ್ವ ಕರಭಂಟನಾಳ ಹಿರೇಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಅಲ್ಲಮ ಪ್ರಭುಗಳು ಹಾಗೂ ಸೋನ್ನಲಗಿ ಸಿದ್ದರಾಮ, ಹೇಮರಡ್ಡಿ ಮಲ್ಲಮ್ಮ ಅಕ್ಕ ಮಹಾದೇವಿ, ಛತ್ರಪತಿ ಶಿವಾಜಿ ಮಹಾರಾಜರು ಇವೇರಲ್ಲರೂ ಚೇತನಗೊಂಡಂತಹ ಕ್ಷೇತ್ರ ಶ್ರೀಶೈಲ ಕ್ಷೇತ್ರವಾಗಿದೆ ಹೇಮರಡ್ಡಿ ಮಲ್ಲಮ್ಮಳಿಗೆ ಬೆನ್ನೇಲುಬಾಗಿ ನಿಂತ ಕ್ಷೇತ್ರ ಇದಾಗಿದೆ ಶ್ರೀಶೈಲ ಪೀಠಕ್ಕೂ ಮಲ್ಲಮ್ಮಳ ಮನೆತನದವರು ಭೂದಾನ ಮಾಡಿದವರಾಗಿದ್ದಾರೆ ಈ ಕುರಿತು ಕೆಲವು ಕುರುವುಗಳು ಅಲ್ಲಿ 2 ಏಕರೆ ಭೂಮಿ ಇದೆ ಎಂದು ಹೇಳಿದ ಶ್ರೀಗಳು ಶ್ರೀಶೈಲ ಪೀಠ ಇಡೀ ಮಾನವ ಕುಲಕ್ಕೆ ಹಾಗೂ ಎಲ್ಲ ರಾಜ್ಯಗಳಿಗೂ ವಿಸ್ತಾರ ಗೊಂಡು ಎಲ್ಲ ಭಕ್ತ ಸಮೂಹಕ್ಕೂ ಆಕರ್ಷ ದಾಯವಾಗಿದೆ ಎಂದರು. ಅಕ್ಕಮಹಾದೇವಿ, ಹೇಮರಡ್ಡಿ ಮಲ್ಲಮ್ಮ ಅವರ ಮೂರ್ತಿಗಳು ವಾಗೀಶ ಪಾಂಡಿತ್ಯ ಶ್ರೀಗಳಿಂದ ಇಡಲಾಗಿದೆ 12 ವರ್ಷಗಳಿಂದ ಜಾಗೆಗಾಗಿ ಈಗೀನ ಜಗದ್ಗುರುಗಳು ಪ್ರಯತ್ನ ಪಟ್ಟಿದ್ದರಿಂದ 10 ಏಕರೆ ಜಾಗೆಯನ್ನು ಆಂದ್ರ ಸರ್ಕಾರ ನೀಡಿದೆ ಅದರಲ್ಲಿ 5 ಏಕರೆ ಜಾಗೆಗಳಲ್ಲಿ ಭಕ್ತರ ವಾಸಕ್ಕಾಗಿ 500 ಕ್ಕೂ ಮೇಲ್ಪಟ್ಟು ಕೋಣೆಗಳನ್ನು ನಿರ್ಮಿಸಲು ಹಾಗೂ ಸಭಾ ಭವನಗಳನ್ನೂ ಸಹ ನಿರ್ಮಿಸುವ ಕಾರ್ಯಕ್ಕೆ ಶ್ರೀಗಳು ಮುಂದಾಗಿದ್ದು ಈ ಕೊಟ್ಟಡಿಗಳ ನಿರ್ಮಾಣಕ್ಕಾಗಿ ಭಕ್ತಾಧಿಗಳು ಸಹಾಯ ಹಸ್ತ ಕಲ್ಪಿಸಲು ಮುಂದಾಗಬೇಕೆಂದರು.
ಇನ್ನೋರ್ವ ಹಿರೂರ ಅನ್ನದಾನೇಶ್ವರ ಮಠದ ಶ್ರೀ ಜಯಸಿದ್ದೇಶ್ವರ ಮಹಾ ಸ್ವಾಮಿಗಳು ಮಾತನಾಡಿ ಅಕ್ಟೋಬರ್ 29 ರಿಂದ ಶ್ರೀಶೈಲ ಜಗದ್ಗುರುಗಳಿಂದ ಪಾದಯಾತ್ರೆ ಯಡಿಯೂರದಿಂದ ಪ್ರಾರಂಭವಾದ ಈ ಪಾದ ಯಾತ್ರೆ ಎಡ ಭಲದಲ್ಲಿ ಸಸಿಗಳನ್ನು ನೆಡುತ್ತಾ ಸಾಗಲಾಗುತ್ತದೆ ಇದು ಅಲ್ಲದೇ ದುಶ್ಚಟಕ್ಕೆ ಅಂಟಿಕೊಂಡವರಿಗೆ ದೀಕ್ಷೆ ನೀಡಲಾಗುತ್ತದೆ ಅಲ್ಲದೇ ಲಿಂಗದಾರಣ ಮಾಡಿ ಧರ್ಮ ರಕ್ಷೀಸುವ ಕಾರ್ಯ ನಡೆಯುತ್ತದೆ ಎಂದರು. ಶ್ರೀಶೈಲದಲ್ಲಿ 5 ಸಾವಿರ ಕಂಬಿಗಳು ಒಂದೇ ಸ್ಥಳದಲ್ಲಿ ಇಡಲು ಮಂಟಪ ನಿರ್ಮಾಣ ಮಾಡಲಾಗುತ್ತಿದೆ ಭಕ್ತರಿಗಾಗಿ 500 ಕೋಣೆಗಳು ಎಸಿ ರೂಂಗಳನ್ನಾಗಿ ನಿರ್ಮಿಸಲಾಗುತ್ತದೆ ಇದು ಅಲ್ಲದೇ ಯಾತ್ರಿ ನಿವಾಸ ವೈಧ್ಯಕೀಯ ವ್ಯವಸ್ಥೆಗಾಗಿ 100 ಹಾಸಿಗೆ ಆಸ್ಪತ್ರೆ ಮತ್ತು 1 ಗುರುಕುಲ ಕಟ್ಟಿಸಬೇಕೆಂಬ ಶ್ರೀಗಳ ಸಂಕಲ್ಪವಿದೆ ಎಂದರು. ಶ್ರೀಗಳ ಜನ್ಮ ಪೀಠೋತ್ಸವ ಕಾರ್ಯಕ್ರಮ ಮಾಡಲು ನಿಶ್ಚಯಿಸಲಾಗಿದೆ ಇದು ಫಲ್ಲಕ್ಕಿ ಬಿಟ್ಟು ಪಾದಯಾತ್ರೆಯ ಮೂಲಕ ಜಗದ್ಗುರುಗಳು ನಡೆಯುತ್ತಿರುವದು ದೇಶದಲ್ಲಿಯೇ ಮೊದಲನೇಯದಾಗಿದೆ ಎಂದರು. 1 ರಿಂದ 15 ರವರೆಗೆ ಹೋಮ ಹವನಗಳೂ ಸಹ ಜರುಗಲಿವೆ ಶ್ರೀಗಳ ತುಲಾಬಾರವೂ ಕೂಡಾ ನಡೆಯಲಿದ್ದು ಭಕ್ತಾಧಿಗಳು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಹಾಯ ಹಸ್ತ ಕಲ್ಪಿಸಲು ಮುಂದಾಗಬೇಕೆಂದರು.
ಇನ್ನೋರ್ವ ಕಾರ್ಯಕ್ರಮದ ನೇತೃತ್ವ ವಹಿಸಿದ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಮಾತನಾಡಿ ದಾನ ಮಾಡಿದ್ದು ದಾರಿಯ ಬುತ್ತಿಯಾಗಿ ಮುಂದಿನ ಭಕ್ತಿಗಾಗುತ್ತದೆ ತಾಳಿಕೋಟೆಯಲ್ಲಿ ದಾನಿಗಳಿದ್ದಾರೆ ಈ ಕಾರಣಕ್ಕಾಗಿಯೇ ಪೂರ್ವಭಾವಿ ಸಭೆ ಕರೆಯಲಾಗಿದ್ದು ಕಾರಣ ತಾಳಿಕೋಟೆಯಲ್ಲಿರುವಂತಹ 54 ಸರ್ವ ಸಮಾಜ ಬಾಂದವರು ಶ್ರೀಶೈಲ ಜಗದ್ಗುರುಗಳು ಪ್ರಾರಂಬಿಸಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತನುಮನ ಧನದಿಂದ ಸಹಕರಿಸಿ ಶ್ರೀಗಳ ಆಶಿರ್ವಾದ ಪಡೆದು ಪುನಿತರಾಗಬೇಕೆಂದರು.
ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ ಧರ್ಮದ ಕಾರ್ಯಗಳನ್ನು ದೈವದಿಂದಲೇ ಮಾಡಿದರೆ ಅದಕ್ಕೆ ಶೋಭೆ ಬರುತ್ತದೆ ಅದು ತನ್ನದೇ ಆದ ಸ್ಥಾನ ಮಾನ ಕಾಯ್ದುಕೊಳ್ಳುತ್ತದೆ ಆದರೆ ವ್ಯಕ್ತಿಯಿಂದ ಇಂತಹ ಕಾರ್ಯ ಮಾಡಲು ಅಸಾದ್ಯವೆಂದರು. ಕಂಡಿತವಾಗಿಯೂ ಶ್ರೀಗಳ ಪಾತ್ರೆಗೆ ಶಕ್ಯವಾದಷ್ಟು ಅರ್ಪಣೆ ಮಾಡುತ್ತೇನೆ ಶ್ರೀಗಳ ಆದೇಶ ಪಾಲಿಸುತ್ತೇನೆ ಗೆಸ್ಟಹೌಸಿಗೆ ಸಂಬಂದಿಸಿ ನನ್ನ ಸಹಾಯವನ್ನು ಅರ್ಪಿಸುತ್ತೇನೆಂದರು. ಪಾದಯಾತ್ರೆ ಸಮಯದಲ್ಲಿ ಕರ್ನಾಟಕ ಗಡಿ ದಾಟುವವರೆಗೂ ದಾಸೋಹ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ್ದೇನೆ ಆಂದ್ರದಲ್ಲಿ ಕೆಲವು ಕಡೆ ಈ ವ್ಯವಸ್ಥೆ ಕುರಿತು ತೊಂದರೆಯಾಗುತ್ತದೆ ಎಂಬ ಶ್ರೀಗಳು ಹೇಳಿದ್ದಾರೆ ಅಲ್ಲಿಯೂ ಶಕ್ಯವಾದಷ್ಟು ದಾಸೋಹ ವ್ಯವಸ್ಥೆ ಮಾಡಿ ದಾಸೋಹ ಪರಂಪರೆ ಉಳಿಸಲು ಮುಂದಾಗುತ್ತೇನೆಂದು ಹೇಳಿದ ಅವರು ಪ್ರತಿಯೊಬ್ಬ ಭಕ್ತರ ಮನೆಯಿಂದ 101 ರೊಟ್ಟಿಯನ್ನು ನೀಡಿದರೆ ಶ್ರೀಶೈಲ ಮಠಕ್ಕೆ ಮುಟ್ಟುತ್ತದೆ ಎಂದ ಶಾಸಕರು ಹೇಮರಡ್ಡಿ ಮಲ್ಲಮ್ಮಳ 5 ಸಾವಿರ ಪೋಟೋಗಳನ್ನು ಅಲ್ಲದೇ 5 ಸಾವಿರ ಪುಸ್ತಕಗಳನ್ನು ಉಚಿತವಾಗಿ ನೀಡುತ್ತೇನೆ ಸಾಂಸ್ಕøತಿಕ ಸಮಾಜದ ಜಾಗೃತಿ ಮಾಡುವ ಕಾರ್ಯ ಎಲ್ಲರು ಮಾಡುತ್ತಾರೆ ಈ ಭಾಗದ ನೇತೃತ್ವವನ್ನು ತಾಳಿಕೋಟೆ ಗಣ್ಯರೆಲ್ಲರೂ ವಹಿಸಿಕೊಳ್ಳಬೇಕೆಂದರು.
ಕಾರ್ಯಕ್ರಮಕ್ಕೂ ಮುಂಚೆ ಜಗದ್ಗುರುಗಳು ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಸಸಿಗಳನ್ನು ನೆಟ್ಟು ವೃಕ್ಷ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ವಡವಡಗಿ ಹಿರೇಮಠದ ಶ್ರೀ ವೀರಸಿದ್ದ ಮಹಾಸ್ವಾಮಿಗಳು, ಚಬನೂರ ಜ್ಯೋತಿಷ್ಯ ರತ್ನ ಶ್ರೀ ಶ್ರೀ ರಾಮಲಿಂಗಯ್ಯ ಮಹಾಸ್ವಾಮಿಗಳು, ಕಲಕೇರಿ ಗದ್ದಗಿ ಮಠದ ಶ್ರೀ ಮಡಿವಾಳೇಶ್ವರ ಮಹಾಸ್ವಾಮಿಗಳು, ಜೈನಾಪೂರಶ್ರೀಗಳು, ಎಚ್.ಎಸ್.ಪಾಟೀಲ, ಬಿ.ಎಸ್.ಪಾಟೀಲ(ಯಾಳಗಿ), ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಕಾಶಿಬಾಯಿ ರಾಂಪೂರ, ಸಿದ್ದನಗೌಡ ಪಾಟೀಲ, ಜಿ.ಎಸ್.ಕಶೆಟ್ಟಿ, ಬಿ.ಎಸ್.ಗಬಸಾವಳಗಿ, ಬಸನಗೌಡ ವಣಕ್ಯಾಳ, ಪ್ರಭುಗೌಡ ಮದರಕಲ್ಲ, ಚಿಂತಪ್ಪಗೌಡ ಯಾಳಗಿ, ಬಿ.ಎನ್.ಹಿಪ್ಪರಗಿ, ರಾಜಶೇಖರ ಹಿರೇಮಠ, ಬಿ.ಎಸ್.ಇಸಾಂಪೂರ, ಬಾಬು ಹಜೇರಿ, ಮೊದಲಾದವರು ಉಪಸ್ಥಿತರಿದ್ದರು.ಸುಮಂಗಲಾ ಕೊಳೂರ ನಿರೂಪಿಸಿದರು.