ದೇಹದ ಉಷ್ಣತೆ ನಿವಾರಣೆಗೆ ಟಿಪ್ಸ್

ನಾವು ಸೇವಿಸುವ ಆಹಾರಗಳಲ್ಲಿ ಅತಿಯಾಗಿ ಮಸಾಲೆ ಪದಾರ್ಥಗಳ ಬಳಕೆ, ಜಂಕ್ ಪುಡ್ಗಳ ಸೇವನೆ, ಅಲ್ಕೋಹಾಲ್ ಮತ್ತು ಕೆಫಿನ್ ಅಂಶವನ್ನು ಹೊಂದಿರುವ ಚಹಾ ಕಾಫಿಗಳಂತಹ ಪದಾರ್ಥಗಳ ಸೇವನೆಯು ಹೆಚ್ಚಿನ ಉಷ್ಣತೆಯನ್ನು ಉಂಟುಮಾಡುತ್ತದೆ. ಇಂತಹ ಸಮಸ್ಯೆ ಉಂಟಾದಾಗ ಕೆಲವು ಮನೆ ಮದ್ದುಗಳ ಮೂಲಕ ದೇಹದ ಶಾಖವನ್ನು ಕಡಿಮೆ ಮಾಡಿಕೊಳ್ಳಬಹುದು.

ಮಸಾಲೆಯುಕ್ತ ಆಹಾರ ಪದಾರ್ಥಗಳಿಂದ ದೂರವಿರಿ.
ಬಿಸಿಲು/ಬಿಸಿ ಪ್ರದೇಶಗಳಿಂದ ದುರವಿರುವುದು ಉತ್ತಮ.
ಹಸಿರು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸಿ.
ಮಾಂಸವನ್ನು ಕಡಿಮೆ ಬಳಸಿ.
ಆಹಾರ ತಯಾರಿಕೆಯಲ್ಲಿ ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗಳನ್ನು ಬಳಸಿ.
ಕಡಿಮೆ ಸೋಡಿಯಂ ಹೊಂದಿರುವ ಆಹಾರ ಸೇವಿಸಿ.

ಜೀರಿಗೆ ಅಥಾವ ಧನಿಯಾ ಬೀಜವನ್ನು ಚೆನ್ನಾಗಿ ಅರೆದು ನೀರಿಗೆ ಹಾಕಿ ಕುದಿಸಿಕೊಳ್ಳಿ. ಅದಕ್ಕೆ ಕೆಂಪು ಕಲ್ಲುಸಕ್ಕರೆ ಬೆರೆಸಿ ದಿನಕ್ಕೆ ಎರಡು ಬಾರಿಯಂತೆ ಕುಡಿಯುತ್ತ ಬನ್ನಿರಿ. ಇದು ನಿಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಎಳನೀರು ಸೇವನೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಅಲ್ಲದೇ ದೇಹದ ಉಷ್ಣತೆಯ ಶಮನಕ್ಕೆ ಉತ್ತಮ ಔಷಧವೂ ಆಗಿದೆ.

ಸ್ವಲ್ಪ ಬಾರ್ಲಿ ಅಕ್ಕಿಯನ್ನು ತೆಗೆದುಕೊಂಡು ನೀರಿನಲ್ಲಿ ಹಾಕಿ ಅನ್ನವಾಗುವ ವರೆಗೆ ಬೇಯಿಸಿ. ಅನ್ನವಾದ ನಂತರ ಆ ನೀರನ್ನು ಸೇವಿಸಿ. ಈ ರೀತಿಯಾಗಿ ದಿನಕ್ಕೆ ಎರಡು ಬಾರಿಯಂತೆ ಕುಡಿಯಿರಿ. ಸಿಹಿಯ ಅವಶ್ಯಕತೆಯಿದ್ದರೆ ಕೆಂಪು ಕಲ್ಲುಸಕ್ಕರೆಯನ್ನು ಬಳಸಿರಿ.

ದೇಹದ ಉಷ್ಣತೆಯು ನಿಯಂತ್ರಣದಲ್ಲಿ ಇರಲು ನೀರಿನ ಸೇವನೆ ಅತೀ ಮುಖ್ಯವಾಗಿದೆ. ದಿನದಲ್ಲಿ ನಾಲ್ಕರಿಂದ ಐದು ಬಾರಿ ನೀರನ್ನು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅತಿಯಾದ ದೇಹದ ಉಷ್ಣತೆಯನ್ನು ನಿಯಂತ್ರಿಸಲು ತಿಳಿ ಮಜ್ಜಿಗೆಯನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಲಿಂಬು ಜೀರಿಗೆ ಪೌಡರ್ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಮಾಡಿ. ಈ ಮಿಶ್ರಿತ ಮಜ್ಜಿಗೆಯನ್ನು ಪ್ರತಿದಿನವೂ ತಯಾರಿಸಿಕೊಂಡು ಕುಡಿಯಿರಿ.

ಸಬ್ಜಿ ಬೀಜಗಳು ಎರಡು ಚಮಚಗಷ್ಟನ್ನು ತೆಗೆದುಕೊಂಡು ೪ ರಿಂದ ೫ ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಬೇಕು. ಚೆನ್ನಾಗಿ ನೆನೆದ ನಂತರ ಸಿಹಿಗಾಗಿ ಕೆಂಪು ಸಕ್ಕರೆ ಬೆರೆಸಿ ಸೇವಿಸುವುದರಿಂದ ಕ್ರಮೇಣ ಉಷ್ಣತೆ ಕಡಿಮೆಯಾಗುತ್ತ ಬರುತ್ತದೆ. ಈ ಮೇಲೆ ತಿಳಿಸಿದ ಯಾವುದಾದರೂ ಕ್ರಮಗಳನ್ನು ಅನುಸರಿಸಿ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದುದು.

ಸುಸ್ತು, ತೆಲೆನೋವು, ಮೈ ಕೈ ಗಳಲ್ಲಿ ನೋವು, ಕಾಲುಪಾದ ಮತ್ತು ಕೈ ಗಳಲ್ಲಿ ಅತಿಯಾದ ಉಷ್ಣತೆಯ ಅನುಭವ ಹೀಗೆ ಅನೇಕ ತೊಂದರೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು.