ದೇಹದಾರ್ಢ್ಯ ಸ್ಪರ್ಧೆಯಲ್ಲಿ ಸೈಯದ್ ನವಾಜ್ ಮಿಸ್ಟರ್ ಚಿತ್ರದುರ್ಗ 

ಹಿರಿಯೂರು ನ. 8-ಕನ್ನಡ ರಾಜ್ಯೋತ್ಸವ ಪ್ರಯುಕ್ತ ಚಿತ್ರದುರ್ಗದ ಚಿಕ್ಕಪೇಟೆಯ ಹಳೆಯ ಮಾದ್ಯಮಿಕ ಶಾಲೆಯ ಮೈದಾನದಲ್ಲಿ ಟೀಮ್ ವಾರಿಯರ್ಸ್ ಚಿತ್ರದುರ್ಗ ವತಿಯಿಂದ  ಡಾ ಪುನಿತ್ ರಾಜ್ ಕುಮಾರ್ ಕ್ಲಾಸಿಕ್ ಅವಾರ್ಡ್- ೨೦೨೨ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ  ಸ್ಪರ್ಧೆಯ ನಾಲ್ಕು  ಎತ್ತರ ವಿಭಾಗದಲ್ಲಿ  ಜಿಲ್ಲಾಮಟ್ಟದ ಪ್ರಥಮ ಸ್ಥಾನವನ್ನು ಪಡೆದು ಮಿಸ್ಟರ್ ಚಿತ್ರದುರ್ಗ ಬಿರುದನ್ನು  ಹಿರಿಯೂರು ತಾಲ್ಲೂಕಿನ ಸೈಯದ್  ನವಾಜ್ (ಚಾಂದ್)  ರವರು ಪಡೆದಿರುತ್ತಾರೆ. ಇವರಿಗೆ ಹಿರಿಯೂರು ಸ್ನೇಹ ಬಳಗ ಪದಾಧಿಕಾರಿಗಳು ಮತ್ತು ಬಂದು ಮಿತ್ರರು ಶುಭ ಕೋರಿದ್ದಾರೆ.