ದೇಹದಾರ್ಡ್ಯ ಸ್ಪರ್ಧೆಯಲ್ಲಿ” ಭಾರತಶ್ರೀ”ಗೆ ಭಾಜನರಾದ ಹೊಸಪಟೆಯ ಮಾರುತೇಶ್.


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.07: ಇಂಡಿಯನ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಆಯೋಜಿಸಿದ್ದ ರಾಷ್ಟ್ರೀಯ ದೇಹರ್ದಾಡ್ಯ ಪ್ರಶಸ್ತಿಗೆ ಹೊಸಪೇಟೆಯ ಮಾರುತೇಶ್ ಭಾಜನರಾಗಿದ್ದಾರೆ.
ಹೊಸಪೇಟೆಯ ಪತ್ರಿಕಾಭವನದಲ್ಲಿ ಬುಧುವಾರ ಹಮ್ಮಿಕೊಂಡಿದ್ದ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಲತಃ ಹಗರಿಬೊಮ್ಮನಹಳ್ಳಿ ತಾಲೂಕು ಬನ್ನಿಗೋಳದವರಾದ ಮಾರುತೇಶ್ ಬೆಂಗಳೂರಿನ ಟೌನ್ ಹಾಲ್ ನಲ್ಲಿ  ಇತ್ತೀಜೆಗೆ ನಡೆದ ಸ್ಪರ್ಧೆಯಲ್ಲಿ ಅತ್ಯಂತ ಸ್ವಬಲದಿಂದ ಪೋಷಕರಿಲ್ಲದೆ ಇಂತಹ ಸಾಧನೆಗೆ ಹೆಮ್ಮೆಯಿದೆ, ಈಗಾಗಲೆ ಅನೇಕ ಬಾರಿ ಇಂತಹ ಸಾಧನೆ ಮಾಡಿದ್ದರು ಕೋವಿಡ್ ನಂತರ ಈ ಸಾಧನೆ‌ ತೃಪ್ತಿ ತಂದಿದೆ.
ಮುಂದಿನ ನವಂಬರ್ ನಲ್ಲಿ  ಜರ್ಮನಿಯಲ್ಲಿ ನಡೆಯುವ ಮಿಸ್ಟರ್ ಯುನಿವರ್ಸ್ ಸ್ಪರ್ಧೆ ನಡೆಯಲಿದ್ದು ಅಲ್ಲಿಯೂ ಪಾಲ್ಗೊಂಡು ಪ್ರಶಸ್ತಿ ಮುಡಿಗೆರಿಸುವ ಇರಾದೆ ಇದೆ ಎಂದರು.
ಹೊಸಪೇಟೆಯ ಡ್ಯಾಮ್ ರಸ್ತೆಯಲ್ಲಿ ಭಜರಂಗಿ ಫಿಟ್ನೆಸ್ ಸೆಂಟರನಲ್ಲಿ ಅನೇಕ ಆಕಾಂಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಸ್ಥಳೀಯ ದಾನಿಗಳು ಗಣ್ಯರು ಸಹಾಯ ಮಾಡಿದಲ್ಲಿ ಜಿಲ್ಲಾ ಮತ್ತ ರಾಜ್ಯ ಮಟ್ಟದ ಸ್ಪರ್ಧೆಗಳನ್ನು ಹೊಸಪೇಟೆಯಲ್ಲಿ ಆಯೋಜಿಸಲು ಉತ್ಸುಕವಾಗಿರುವುದಾಗಿ ತಿಳಿಸಿದರು.
ಜೀವನದುದ್ದಕ್ಕೂ ಎಷ್ಟೇ ಸಾಧನೆ ಮಾಡಿದರು ವಿಶ್ವ ಚಾಂಪಿಯನ್ ಶೀಫ್ನಲ್ಲಿ ಪಾಲ್ಗೊಂಡು ಯಶಸ್ವಿಯಾಗಬೇಕು ಎನ್ನುವುದು ನನ್ನ ಜೀವನದ ಗುರಿ ಎಂದು ಮಾರುತೇಶ ಹೇಳಿದರು.
ಗೋಷ್ಠಿಯಲ್ಲಿ ಗುಜ್ಜಲ್ ಉಮೇಶ್, ಹೇಮಂತ ಎನ್. ಪ್ರಕಾಶ, ಮಂಜುನಾಥ ಹಾಗೂ ಕೃಷ್ಣ ಪಾಲ್ಗೊಂಡಿದ್ದರು.

Attachments area