ದೇಹದಾಢ್ರ್ಯ ಸ್ಪರ್ಧೆ : ಪ್ರಶಸ್ತಿ ಬಾಚಿದ ಬೆಳಗಾವಿ ಸ್ಪರ್ಧಿಗಳು


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಫೆ.02: ಪಟ್ಟಣದ ಜಿಪಿಜಿ ಕಾಲೇಜು ಆವರಣದಲ್ಲಿ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ ಅಭಿಮಾನಿ ಬಳಗ ಮತ್ತು ಪ್ರೀಡಂ ಪೈಟರ್ಸ್ ಸಹಯೋಗದಲ್ಲಿ ಉತ್ತರ ಕರ್ನಾಟಕ ಮಟ್ಟದ ದೇಹದಾಢ್ರ್ಯ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ಜಿಲ್ಲೆಯ ವಿಕಾಸ್ ಸೂರ್ಯವಂಶಿ ಮೊದಲ ಸ್ಥಾನ ಗಳಿಸಿ 15000 ರೂಪಾಯಿ ನಗದು ಸ್ಮರಣಿಕೆ ಪಡೆದರು. ಬೆಳಗಾವಿಯ ಪ್ರತಾಪ್ ಕಲ್ಕುಂದ್ರಿಕರ್ ದ್ವಿತೀಯ, ಉಮೇಶ ಗಂಗಾನೆ ತೃಯೀಯ ಸ್ಥಾನ ಗಳಿಸಿ, ಕ್ರಮವಾಗಿ 10 ಸಾವಿರ, 5 ಸಾವಿರ ನಗದು ಸ್ಮರಣಿಕೆಯನ್ನು ತಮ್ಮದಾಗಿಸಿಕೊಂಡರು. ಬಳ್ಳಾರಿ, ವಿಜಯನಗರ ಸೇರಿದಂತೆ ಉತ್ತರ ಕರ್ನಾಟಕ ಭಾಗದ ವಿವಿಧ ಜಿಲ್ಲೆಗಳ ಸ್ಪರ್ಧಾಳುಗಳು ಪ್ರದರ್ಶನ ನೀಡಿದರು.
ಸ್ಪರ್ಧೆ ಆಯೋಜಕರಾದ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಹೆಚ್.ಹನುಮಂತಪ್ಪ ಮಾತನಾಡಿ, ಗ್ರಾಮಾಂತರ ಯುವಕರು ದುಶ್ಚಟಗಳನ್ನು ತೊರೆದು, ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಈ ತರಹದ ಸ್ಪರ್ಧಾವಳಿ ಪ್ರಯೋಜನ ಪಡೆದು ರಾಜ್ಯ, ರಾಷ್ಟ್ರ ಮಟ್ಟದ ಪ್ರತಿಭೆಗಳಾಗಿ ಹೊರ ಹೊಮ್ಮಬೇಕು ಎಂದು ತಿಳಿಸಿದರು.
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಸಿರಾಜ್ ಬಾವಿಹಳ್ಳಿ, ಪುರಸಭೆ ಮಾಜಿ ಉಪಾಧ್ಯಕ್ಷ ಪಿ.ಎಂ.ವಿಲ್ಸನ್ ಸ್ವಾಮಿ ಮಾಜಿ ಸದಸ್ಯ ಪಿ.ನಿಂಗಪ್ಪ, ವಿಜಯನಗರ ಜಿಲ್ಲೆಯ ದೇಹದಾಢ್ರ್ಯ ಒಕ್ಕೂಟದ ಅಧ್ಯಕ್ಷ ಮೆಹಬೂಬ್, ಹೂವಿನಹಡಗಲಿಯ  ಫ್ರೀಡಂ ಫೈಟರ್ ತಂಡದ ಸದಸ್ಯ ನಿಸಾರ್ ಸಾಧಿಕ್, ರೋಶನ್, ರಾಜು, ಸುಭಾನ್, ಜಮೀರ್, ಕೆ.ದಾದು ಇತರರು ಇದ್ದರು.

One attachment • Scanned by Gmail