ದೇಸೀಯ ವಿಮಾನ ಪ್ರಯಾಣಿಕರ ಸಂಖ್ಯೆ ಶೇ. 65 ಕ್ಕೂ ಹೆಚ್ಚು ಇಳಿಕೆ

ನವದೆಹಲಿ, ಜೂ.3- ದೇಶದಲ್ಲಿ ಎರಡನೇ ಅಲೆ ಕೊರೋನಾ ಸೋಂಕು ಗಣನೀಯವಾಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ವಿಮಾನಯಾನ ಪ್ರಯಾಣಿಕರ ಸಂಖ್ಯೆ ಶೇ.65 ಕ್ಕೂ ಕುಸಿತ ಕಂಡಿದೆ .

ಏಪ್ರಿಲ್ ನಲ್ಲಿ ಪ್ರತಿದಿನ ಸರಾಸರಿ ಎರಡು ಸಾವಿರದ ವಿಮಾನಗಳು ದೇಶಾದ್ಯಂತ ಸಂಚಾರ ಮಾಡಿದರೆ ಮೇ ತಿಂಗಳಲ್ಲಿ ಈ ಪ್ರಮಾಣ 900 ವಿಮಾನಗಳು ಸಂಚಾರ ಮಾಡಿದೆ ಇದರಿಂದಾಗಿ ವಿಮಾನ ಪ್ರಯಾಣಿಕರ ಸಂಖ್ಯೆಯೂ ಇಳಿಕೆಯಾಗಿದೆ ಎಂದು ಐಸಿಆರ್ ಎ ತಿಳಿಸಿದೆ.

ದೇಶದಲ್ಲಿ ಎರಡನೇ ಹಂತದ ಸೋಂಕುಗಳು ವ್ಯಾಪಕವಾದ ಹಿನ್ನೆಲೆಯಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ ಶೇಕಡಾ 65 ರಿಂದ 67ರಷ್ಟು ಎಂದು ತಿಳಿಸಿದೆ.

ಕಳೆದ ವರ್ಷ ಜೂನ್-ಜುಲೈನಲ್ಲಿ ವಿಮಾನ ಪ್ರಯಾಣ ಇಂಥ ಏಪ್ರಿಲ್-ಮೇನಲ್ಲಿ ಅತ್ಯಂತ ಕಡಿಮೆಯಾಗಿದೆ ಎಂದು ಎಸಿಆರ್ ಎ ಉಪಾಧ್ಯಕ್ಷ ಕಿಂಜಾಲ್ ಶಾ ತಿಳಿಸಿದ್ದಾರೆ

ಮೇ ತಿಂಗಳಲ್ಲಿ 27700 ವಿಮಾನಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚಾರ ಮಾಡಿದೆ ಮನೆಗಳಲ್ಲಿ ಈ ಪ್ರಮಾಣ 60300 ಮಾನಗಳು ದೇಶದ ಮೂಲೆಮೂಲೆಗೆ ಸಂಚಾರ ಮಾಡಿದರು ಎಂದು ಅವರು ತಿಳಿಸಿದ್ದಾರೆ.

ಕಳೆದ ವರ್ಷ ದೇಶೀಯ ವಿಮಾನಯಾನ ಸಂಚಾರ ತೆರವಾದ ಬಳಿಕ ಮೇ ನಿಂದ ಡಿಸೆಂಬರ್ 3 ತ ವರೆಗೆ ದೇಶಿಯ ವಿಮಾನಗಳಲ್ಲಿ ಶೇಕಡ 80ರಷ್ಟು ಸಾಮರ್ಥ್ಯದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಗಿತ್ತು.

ಎರಡನೇ ಅಲೆ ವ್ಯಾಪಕವಾಗಿ ಕಾಣಿಸಿಕೊಂಡ ನಂತರ ಈ ಪ್ರಮಾಣವನ್ನು ಶೇಕಡಾ 50 ಕ್ಕೆ ತಿಳಿಸಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಆದೇಶ ಹೊರಡಿಸಿತ್ತು ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿತ ಕಂಡಿದೆ