ದೇಸಾಯಿ ಕಾಲೇಜಿನಲ್ಲಿ ಹಸಿರು ಕ್ರಾಂತಿ ಹರಿಕಾರರ ಜಯಂತಿ

ಕಲಬುರಗಿ.ಏ.5: ನಗರದ ಎಂಎನ್ ದೇಸಾಯಿ ಪದವಿ ಮಹಾವಿದ್ಯಾಲಯದಲ್ಲಿ ಹಸಿರು ಕ್ರಾಂತಿ ಹರಿಕಾರರ ಜಯಂತಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ವ್ಹಿ ಎಂ ಹಿರೇಮಠ ಅವರು ಮಾತನಾಡಿ ಡಾ. ಬಾಬು ಜಗಜೀವನ್ ರಾಮ್ ರವರು 5ನೇ ಏಪ್ರಿಲ್ 1908 ರಂದು ಬಿಹಾರದ ಚಾಂದ್ವದಲ್ಲಿ ಜನಿಸಿದರು ತಂದೆ ಸುಬಿ ರಾಮ್ ತಾಯಿ ವಸಂತಿ ದೇವಿ ರವರ ಮಗನಾಗಿ ಜನಿಸಿದರು ಇವರಿಗೆ ಜನರೆಲ್ಲರೂ ಪ್ರೀತಿಯಿಂದ ಬಾಬು ಜಿ ಎಂದು ಕರೆಯುತ್ತಿದ್ದರು ಸತತ 30 ವರ್ಷಗಳ ಕಾಲ ಕೇಂದ್ರ ಮತ್ತು ವಿಧಾನ ಸಭೆಯ ಸದಸ್ಯರಾಗಿ ಭರತದೇಶಕ್ಕೆ ಧೀರ್ಘ ಕಾಲ ಸೇವೆ ಸಲ್ಲಿಸಿದರು ಎಂದು ಮಾತನಾಡಿದರು ವಿದ್ಯಾರ್ಥಿಗಳಿಂದ ಬಾಬು ಜಗಜೀವನ್ ರಾಮರವರ ಭಾವಚಿತ್ರಕ್ಕೆ ಪುಷ್ಪ ಮಾಲೆ ಹಾಕಿ ದೀಪ ನಮನ ಸಲ್ಲಿಸಲಾಯಿತು.
ಕಾಲೇಜಿನ ಅಧ್ಯಕ್ಷರಾದ ಸಂದೀಪ್ ದೇಸಾಯಿ, ಕಾರ್ಯದರ್ಶಿಗಳಾದ ಜಗನ್ನಾಥ ನಾಗೂರ್, ಎಸ್ ಎಸ್ ಎಸ್ ಅಧಿಕಾರಿಗಳಾದ ಮಂಜುನಾಥ ಬನ್ನೂರ್, ಕಾಲೇಜಿನ ಆಡಳಿತ ಅಧಿಕಾರಿಗಳಾದ ರಾಧಿಕಾ ಗುತ್ತೇದಾರ್, ಆಂಗ್ಲ ಭಾಷೆಯ ಪ್ರಾಧ್ಯಾಪಕರಾದ ಅಮರ್ ಹಾಗರಗಿ, ಕನ್ನಡ ಭಾಷಾ ಪ್ರಾಧ್ಯಾಪಕರಾದ ಪ್ರಿಯಾಂಕ ಕರಣಿಕ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಕುಮಾರಿ ಅನ್ನಪೂರ್ಣ ರೆಡ್ಡಿ, ಗ್ರಂಥಪಾಲಕರಾದ ಅನ್ನಪೂರ್ಣ ಪಸಾರ, ಅಂಬಿಕಾ ಕೊಬಾಳ, ಕಾಶಿಬಾಯಿ ವಗ್ಗೆನೂರ, ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ನಾಗರಾಜ್ ಪಟ್ಟನಕರ, ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಮಹೇಶ್ ತೆಗ್ಗಳ್ಳಿ ವಂದಿಸಿದರು. ರಾಜ್ಯಶಾಸ್ತ್ರ ಪ್ರಾಧ್ಯಾಪಕರಾದ ಆನಂದತೀರ್ಥ ಜೋಶಿ ಪ್ರಾಸ್ತಾವಿಕ ಭಾಷಣ ಮಾಡಿ ಸ್ವಾಗತಿಸಿದರು. ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.