ದೇಶ ಸ್ವಾವಲಂಬಿಗೆ ಕಾರಿಡಾರ್ ಕೊಡುಗೆ ಅಪಾರ, ಮೋದಿ

ನವದೆಹಲಿ, ಡಿ. ೨೯-ಭಾರತವನ್ನು ಸ್ವಾವಲಂಬಿಯನ್ನಾಗಿಸುವಲ್ಲಿ ನೂತನ ಕಾರಿಡಾರ್‌ಗಳು ಹೆಚ್ಚು ಸಹಕಾರಿಯಾಗಲಿವೆ. ದೇಶದ ವ್ಯಾಪಾರಿಗಳು, ರೈತರು, ಗ್ರಾಹಕರಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಅವರು ಭೂಪುರ್ -ನ್ಯೂ ಖುರ್ಜಾ ಈಸ್ಟರ್ನ್ ಡೆಡಿಕೇಟೆಡ್ ಪ್ರೈಟ್ ಕಾರಿಡಾರ್ (ಇಡಿಎಫ್‌ಸಿ) ನ್ನು ಇಂದು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಭಾರತಕ್ಕೆ ಅಗತ್ಯ ಸಾಮಾಗ್ರಿಗಳ ಸಾಗಾಣಿಕೆಗೆ ಈ ಎರಡು ಹೊಸ ಕಾರಿಡಾರ್‌ಗಳು ಪ್ರಮುಖ ಪಾತ್ರ ವಹಿಸಲಿದೆ. ವಿಡೀಯೋ ಕಾನ್ಫರೆನ್ಸ್ ಮೂಲಕ ಹೇಳಿದರು.
ಸ್ವಾತಂತ್ರದ ನಂತರ ಅತೀ ದೊಡ್ಡ ಹಾಗೂ ಆಧುನಿಕ ರೈಲ್ವೆ ಮೂಲಸೌಕರ್ಯ ಯೋಜನೆಯನ್ನು ನಾವು ಇಂದು ನೋಡುತ್ತಿದ್ದೇವೆ. ಖರ್ಜಾ-ಭೂಪುರ್ ಸರಕು ಕಾರಿಡಾರ್‌ನಲ್ಲಿ ರೈಲು ಸಂಚಾರ ಆರಂಭವಾದಾಗ ಹೊಸ ಮತ್ತು ಸ್ವಾಲಂಭಿ ಭಾರತದ ಘರ್ಜನೆಯನ್ನು ಕೇಳುತ್ತಿದ್ದೇವೆ ಎಂದು ಅವರು ಹೇಳಿದರು.
ಪ್ರಯಾಗ್ ರಾಜ್‌ನಲ್ಲಿರುವ ಆಪರೇಷನ್ ಕಂಟ್ರೋಲ್ ಕೇಂದ್ರ ಸಹ ಹೊಸ ಭಾರತದ ಹೊಸ ಶಕ್ತಿ ಸಂಕೇತವಾಗಿದೆ. ಇದು ವಿಶ್ವದ ಅತ್ಯುತ್ತಮ ಹಾಗೂ ಆಧುನಿಕ ನಿಯಂತ್ರಣ ಕೇಂದ್ರಗಳಲ್ಲಿ ಹೊಂದಾಗಿದೆ. ನಿರ್ವಹಣೆ ಮತ್ತು ದತ್ತಾಂಶಕ್ಕೆ ಸಂಬಂಧಿಸಿದ ಈ ತಂತ್ರಜ್ಞನವನ್ನು ಭಾರತದಲ್ಲೇ ತಯಾರಿಸಿರುವುದು ನಮಗೆ ಹೆಮ್ಮೆ ವಿಷಯವಾಗಿದೆ. ಯಾವುದೇ ರಾಷ್ಟ್ರದಲ್ಲಿ ಆ ದೇಶದ ಮೂಲಸೌಕರ್ಯ ಅತೀ ದೊಡ್ಡ ಶಕ್ತಿಯೆಂದು ಮೋದಿ ಹೇಳಿದರು.
ಮೂಲಸೌಕರ್ಯದ ಭಾಗವಾಗಿ ಕಲ್ಪಸುವ ಸಂಪರ್ಕ ವ್ಯವಸ್ಥೆ ರಾಷ್ಟ್ರದ ನರನಾಡಿ ಇದ್ದಂತೆ ಇವು ದೇಹಕ್ಕೆ ಅಗತ್ಯವಿರುವ ಉತ್ತಮವಾದ ರಕ್ತನಾಳಗಳ ರೀತಿಯಲ್ಲಿ ಕೆಲಸ ನಿರ್ವಹಿಸಲಿದ್ದು,ಈ ಮೂಲಕ ರಾಷ್ಟ್ರ ಆರೋಗ್ಯಕರ ಮತ್ತು ಬಲಿಶಾಲಿಗಳಿದೆ ಎಂಬುದನ್ನು ಮೋದಿ ಹೇಳಿದರು.
ಇಂದು ಭಾರತ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಮಾರ್ಪಟ್ಟಿದೆ. ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಉತ್ತಮ ಸಂಪರ್ಕ ವ್ಯವಸ್ಥೆ ದೇಶದ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಭಾರತದ ಆಧುನಿಕ ಸಂಪರ್ಕದ ಪ್ರತಿಯೊಂದು ಅಂಶಗಳ ಕುರಿತಂತೆ ಕಳೆದ ೬ ವರ್ಷದ ಹಿಂದಿ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದರು.
೩೫೧ ಕಿ.ಮೀ ಉದ್ದದ ಭೂಪುರ್ -ಖರ್ಜಾ ಕಾರಿಡಾರ್ ಇಡಿಎಫ್‌ಸಿ ಉತ್ತರ ಪ್ರದೇಶದಲ್ಲಿಂದು ೫,೭೫೦ ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಥಳೀಯ ಕೈಗಾರಿಕೆಗಳಾದ ಅಲ್ಯೂಮಿನಿಯಂ ಉದ್ಯಮ ಡೈರಿ ವಲಯ, ಜವಳಿ ಉತ್ಪಾದನೆ, ಬ್ಲಾಕ್ ಮುದ್ರಣ, ಗಾಜಿನ ಸಾಮಾನು ಉದ್ಯಮ ಹಾಗೂ ಕುಂಬಾರಿಕೆ ವಿಭಾಗದ ಉದ್ಯಮಿಗಳಿಗೆ ಹೊಸ ಅವಕಾಶ ದೊರೆಯಲಿದೆ. ಉತ್ಪನ್ನಗಳು ಕಾನ್ಪುರ್ ದೆಹಲಿ ಮುಖ್ಯ ಮಾರ್ಗವನ್ನು ಸಂಪರ್ಕಿಸಲಿವೆ.
ಭಾರತೀಯ ರೈಲ್ವೆ ವೇಗವಾಗಿ ರೈಲುಗಳನ್ನು ಓಡಿಸಲು ಸಾಧ್ಯವಾಗಲಿದೆ.
ಪಂಜಾಬ್ ಲೂಧಿಯಾನ ಬಳಿ ಆರಂಭವಾಗಿ ಪಶ್ಚಿಮ ಬಂಗಾಲದಲ್ಲಿ ಕೊನೆಗೊಂಡಿದೆ. ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಬಿಹಾರ್, ಜಾರ್ಖಂಡ್ ಮೂಲಕ ಈ ಮಾರ್ಗ ಹಾದುಹೋಗಲಿದೆ ಎಂದರು.