ದೇಶ ವಿದೇಶಗಳಲ್ಲಿಯೂ ರೋಟರಿ ಸಂಸ್ಥೆ ಹೆಸರುಗಳಿಸಿದೆ:ಡಾ.ನಾಲಬಂದ

ತಾಳಿಕೋಟೆ:ಆ.21: ದೇಶ ವಿದೇಶಗಳಲ್ಲಿ ಅನೇಕ ಕಾರ್ಯ ಚಟುವಟಿಕೆಗಳೊಂದಿಗೆ ಮುನ್ನಡೆಯುತ್ತಾ ಸಾಗಿದ ರೋಟರಿ ಸಂಸ್ಥೆಯು ತನ್ನದೇ ಆದ ಗೌರವ ಗಳಿಸುತ್ತಾ ಮುಂದೆ ಸಾಗಿದೆ ಈ ಸಂಸ್ಥೆಯನ್ನು ಎಲ್ಲರೂ ಗೌರವಿಸುತ್ತಾ ಸಾಗಿದ್ದಾರೆಂದು ಸ್ಥಳೀಯ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವಿಕರಿಸಿದ ಖ್ಯಾತ ತಜ್ಞವೈಧ್ಯರಾದ ಡಾ.ಎ.ಎ.ನಾಲಬಂದ ಅವರು ನುಡಿದರು.

ಶನಿವಾರರಂದು ಸ್ಥಳೀಯ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಕುರಿತು ಶ್ರೀ ವಿಠ್ಠಲ ಮಂದಿರದಲ್ಲಿ ಏರ್ಪಡಿಸಲಾದ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಆಯ್ಕೆಗೊಂಡು ಸನ್ಮಾನ ಸ್ವಿಕರಿಸಿ ಮಾತನಾಡುತ್ತಿದ್ದ ಅವರು ತಾಳಿಕೋಟೆ ಪಟ್ಟಣದಲ್ಲಿ ಕಳೆದ 22 ವರ್ಷಗಳಿಂದ ಈ ಸಂಸ್ಥೆ ಸೇವೆಯಲ್ಲಿ ಮುಂದುವರೆದಿದೆ ರಕ್ತದಾನ ಶಿಬಿರ, ಕಣ್ಣಿನ ಶಸ್ತ್ರ ಚಿಕೀತ್ಸೆ ಕಾರ್ಯ ಹಲ್ಲುಗಳ ತಪಾಸಣೆ ಶಿಬಿರ ಇಂತಹ ಅನೇಕ ಶಿಬಿರಗಳನ್ನು ಏರ್ಪಡಿಸಿ ಮುಂದೆ ಸಾಗಿದ ಈ ಸಂಸ್ಥೆಯಲ್ಲಿ ಎರಡನೇ ಸಲ ಅಧ್ಯಕ್ಷ ಸ್ಥಾನ ನನಗೆ ದೊರೆತಿರುವದು ನನಗೆ ಹರ್ಷ ತಂದಿದೆ ಎಂದರು. ಈ ಹಿಂದೆ ಬೆಳಗಾವಿ, ಹುಬ್ಬಳ್ಳಿ, ಗೋವಾ ಅಂತಹ ಪ್ರಮುಖ ನಗರಗಳಲ್ಲಿ ನಡೆದ ಸಂಸ್ಥೆಯ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೆ ಅಲ್ಲಿ ಅನೇಕ ನಡೆದಂತಹ ಕಾರ್ಯ ಚಟುವಟಿಕೆಗಳನ್ನು ಗಮನಿಸಿದ ನಾವು ಕೆಲವೇ ದಿವಸಗಳಲ್ಲಿ ರೋಟರಿ ಸಂಸ್ಥೆಯ ವತಿಯಿಂದ ನಮ್ಮ ಅಪೇಕ್ಷೆಗೆ ಅನುಗುಣವಾಗಿ ತಾಳಿಕೋಟೆಯಲ್ಲಿಯ ಸರ್ಕಾರಿ ಶಾಲೆ ಕಾಲೇಜುಗಳಲ್ಲಿಯ ಸುಮಾರು 100 ಗ್ರೀನ್ ಬೋರ್ಡಗಳನ್ನು ನೀಡಲು ಮುಂದಾಗಲಿದ್ದೇವೆ ಹಾಗೂ ಇದರೊಂದಿಗೆ ನ್ಯಾಪಕೀನ್ ಡಿಸ್ಟ್ರಾಯರ್(ಸುಮಾರು 25 ಸಾವಿರ) ಕಿಮ್ಮತ್ತಿನ ಯಂತ್ರವನ್ನು ಸ್ಥಳೀಯ ಬ್ರೀಲಿಯಂಟ್ ಶಾಲೆಗೆ ಕೆಲವೇ ದಿವಸಗಳಲ್ಲಿ ನೀಡಲಾಗುವದೆಂದು ಹತ್ತು ಹಲವಾರು ಜನಪರ ಕಾರ್ಯಗಳನ್ನು ಮಾಡಲು ಮುಂದಾಗುತ್ತೇವೆಂದರು.

ವಿಜಯಪುರದ ರೋಟರಿ ಸಂಸ್ಥೆಯ ಅನುಸ್ಥಾಪನಾ ಅಧಿಕಾರಿಯಾದ ನ್ಯಾಯವಾದಿ ಶ್ರೀಕಾಂತ ಶಿಲಡೋಣ ಅವರು ನೂತನ ಅಧ್ಯಕ್ಷರಾದ ಡಾ.ನಾಲಬಂದ ಅವರಿಗೆ ಸಂಸ್ಥೆಯ ಕೊರಳ ಪಟ್ಟಿ ಹಾಕುವ ಮೂಲಕ ಅಧಿಕಾರ ನೀಡಿ ರೋಟರಿ ಸಂಸ್ಥೆ ನಡೆದು ಬಂದ ದಾರಿ ಅದರ ಬೆಳವಣಿಗೆಯ ಅದರ ದೇಯೋದೇಶಗಳ ಕುರಿತು ಮಾತನಾಡಿದರು.

  ಇಲಕಲ್ಲದ ರೋಟರಿಯನ್ ಅಸಿಸ್ಟಂಟ್ ಗೌರನರ್‍ರಾದ ಕೆ.ಎಸ್.ಕೂಡಲೆಪ್ಪನವರು ರೋಟರಿಯನ್ ಕಾರ್ಯದರ್ಶಿಯಾಗಿ ನೇಮಕಗೊಂಡ ಎಂ.ಎಸ್.ಸರಶೆಟ್ಟಿ ಅವರಿಗೆ ಕೊರಳಪಟ್ಟಿ ಹಾಕುವ ಮೂಲಕ ಅಧಿಕಾರ ನೀಡಿದರು.

ಇನ್ನೋರ್ವ ವಿಜಯಪುರದ ರೋಟರಿ ಸಂಸ್ಥೆಯ ಬಿ.ಎಸ್.ಪಾಟೀಲ ಅವರು ರೋಟರಿ ಸಂಸ್ಥೆಯ ಕುರಿತು ಹಾಗೂ ತಾಳಿಕೋಟೆ ರೋಟರಿ ಸಂಸ್ಥೆಯ ಕಾರ್ಯ ವೈಖರ್ಯಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಮಯದಲ್ಲಿ ರೋಟರಿಯನ್‍ರಾದ ಅಶೋಕ ಬಳಗಾನೂರ, ಡಾ.ಶ್ರೀಶೈಲ ಹುಕ್ಕೇರಿ, ಡಾ.ವ್ಹಿ.ಎಸ್.ಕಾರ್ಚಿ, ಡಾ.ಆನಂದ ಬಟ್, ಸುಭಾಸ ಬಬಲೇಶ್ವರ, ಪ್ರಭುಗೌಡ ಮದರಕಲ್ಲ, ಎಂ.ಆರ್.ಕತ್ತಿ, ಎಂ.ಎಸ್.ಮಾಳಿ, ಘನಶಾಮ ಚವ್ಹಾಣ, ನಾಗರಾಳ, ಬಸವರಾಜ ಕುಂಭಾರ, ಡಾ.ಶ್ರೀಮತಿ ಫಮಿದಾ ನಾಲಬಂದ, ಡಾ.ಶ್ರೀಮತಿ ಎನ್.ಆರ್.ಕೋಳ್ಯಾಳ, ಡಾ.ಶ್ರೀಮತಿ ಬಟ್, ಪ್ರಭಾ ಕತ್ತಿ, ಡಾ.ನಜೀರ ಕೋಳ್ಯಾಳ, ಡಾ.ಆರ್.ಎಂ.ಕೋಳ್ಯಾಳ, ಹಾಗೂ ವ್ಹಿ.ಸಿ.ಹಿರೇಮಠ, ಬಿ.ಎನ್.ಹಿಪ್ಪರಗಿ, ಸಿ.ಆರ್.ಕತ್ತಿ, ಬಿ.ಎಸ್.ಗಬಸಾವಳಗಿ, ಅಣ್ಣು ವಾಲಿ, ಆರೀಫ್ ಮುರಾಳ, ಶರೀಫ್ ಮುಲ್ಲಾ, ಮುದಸರ್ ಜಮಾದಾರ, ಮೊದಲಾದವರು ಉಪಸ್ಥಿತರಿದ್ದರು.

ರೋಟರಿಯನ್ ಶಾಮ ಹಂಚಾಟೆ ಸ್ವಾಗತಿಸಿದರು. ದಿನಕರ ಜೋಶಿ ನಿರೂಪಿಸಿದರು. ರೋಟರಿಯನ್ ಮುರುಗೆಪ್ಪ ಸರಶೆಟ್ಟಿ ವಂದಿಸಿದರು.