ದೇಶ ರಕ್ಷಣೆಯಲ್ಲಿ ವಾಯುಸೇನೆ ಪಾತ್ರ ಹಿರಿದು

ಭಾಲ್ಕಿ:ಅ.9:ದೇಶದ ರಕ್ಷಣೆಯಲ್ಲಿ, ನೈಸರ್ಗಿಕ ವಿಕೋಪದ ಸಂದರ್ಭಗಳಲ್ಲಿ ನಾಗರಿಕರನ್ನು ರಕ್ಷಿಸುವಲ್ಲಿ ವಾಯುಸೇನೆಯ ಪಾತ್ರ ವರ್ಣನಾತೀತ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಾಯುಪಡೆ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ವಿಶ್ವದ ಅತೀ ಬಲಿಷ್ಠ ವಾಯುಪಡೆಗಳಲ್ಲಿ ಒಂದಾಗಿರುವ ಭಾರತೀಯ ವಾಯು ಪಡೆ ಅನೇಕ ಯುದ್ಧಗಳಲ್ಲಿ, ರಕ್ಷಣಾ ಕಾರ್ಯಾಚರಣೆಗಳಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯ ನಿರ್ವಹಿಸಿದೆ ಎಂದು ತಿಳಿಸಿದರು.
ವಾಯುಪಡೆ ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಆಪರೇಶನ್ ವಿಜಯ್, ಆಪರೇಶನ್ ಮೇಘಧೂತ್, ಆಪರೇಶನ್ ರಾಹತ್, ಆಪರೇಶನ್ ಪೂಮಲೈ, ಆಪರೇಶನ್ ಕ್ಯಾಕ್ಟಸ್ ಪ್ರಮುಖವಾಗಿವೆ.
28/11ರ ಮುಂಬಯಿ ದಾಳಿ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಪರಾಕ್ರಮ ಅದ್ವಿತೀಯವಾಗಿತ್ತು ಎಂದು ವಿವರಿಸಿದರು.
ವಿದ್ಯಾರ್ಥಿಗಳು ದೇಶ ಸೇವೆಗೆ ಸನ್ನದ್ಧರಾಗಬೇಕು. ದೇಶ ಸೇವೆಯ ಈಶ ಸೇವೆ ಎಂದು ಮಾರ್ಮಿಕ ಉದಾಹರಣೆ ಸಹಿತ ತಿಳಿಸಿದರು.
ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯರಾದ ಬಸವರಾಜ ಮೊಳಕೀರೆ, ಶ್ರೀಧರರೆಡ್ಡಿ, ಶಶಿಕಾಂತ ಸೇರಿದಂತೆ ಇತರರು ಇದ್ದರು.