ಕಾಳಗಿ :ಎ.6: ಸತ್ಯಮಾರ್ಗದ ರಾಜಕೀಯಕ್ಕೆ ಹೆಚ್ಚು ಒತ್ತುನೀಡಿರುವ ಕ್ರಾಂತಿ ಪುರುಷ ಡಾ.ಬಾಬು ಜಗಜೀವನರಾಮ್ ಭಾರತ ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮೂಡಿಪಾಗಿಟ್ಟಿರುವ ಎಕೈಕ ನಾಯಕ ಬಾಬೂಜೀ ಅವರಾಗಿದ್ದರು ಎಂದು ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಸೂರ್ಯಕಾಂತ ಕಟ್ಟಿಮನಿ ತಿಳಿಸಿದರು.
ಸ್ಥಳೀಯ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಬುಧವಾರ ಏರ್ಪಡಿಸಿರುವ ಹಸಿರು ಕ್ರಾಂತಿಯ ಹರಿಕಾರ ಭಾರತದ ಮಾಜಿ ಉಪಪ್ರಧಾನಿಗಳಾದ ಡಾ.ಬಾಬು ಜಗಜೀವನರಾಮ್ ಅವರ 116ನೇ ಜಯಂತೋತ್ಸವ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಭಾರತ ದೇಶದ ಸುಭದ್ರವಾಗಿ ಹಾಗೂ ಹಸಿವು ಮುಕ್ತವಾದ ರಾಷ್ಟ್ರವಾಗಿ ಮುನ್ನಡೆಸಿಕೊಂಡು ಹೊಗುವ ಅಪಾರವಾದ ಶಕ್ತಿ ಈ ದೇಶದ ರೈತನಿಗೆ ಮಾತ್ರ ಎಂದರಿತ ಬಾಬೂಜೀ ಅವರು, ತಮ್ಮ ಅಧೀಕಾರದವಧಿಯಲ್ಲಿ ಹಸಿರುಕ್ರಾಂತಿಯನ್ನೆ ಮಾಡಿ ದೇಶ ಅಭಿವೃದ್ಧಿಪಡಿಸುವ ಸಾಹಸ ಮಾಡಿದರು.
ದೇಶದ ಪ್ರತಿಯೊಬ್ಬ ಸಾಮಾನ್ಯವ್ಯಕ್ತಿಗಳಿಗೂ ಸಾಮಾಜಿಕ ನ್ಯಾಯವನ್ನು ಸಿಗಬೇಕು. ಆರ್ಥಿಕವಾಗಿ ಮುನ್ನುಗ್ಗಬೇಕು. ದೇಶ ಬಡತನ ಮುಕ್ತವಾಗಬೇಕು. ದೀನ-ದಲಿತ, ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿ ಕಾಣಬೇಕು. ಅಂಧಕಾರ, ಮಾಢ್ಯ, ಅಸ್ಪøಶ್ಯ ನಿವಾರಣೆ, ಬಡವರಿಗೆ ನ್ಯಾಯ, ಅನ್ನದಾತರಿಗೆ ಅನುಕೂಲ ವದಗಿಸುವಲ್ಲಿ ತಮ್ಮ ಹೊರಾಟದ ಗುರಿಯಾಗಿತ್ತು ಎಂದ ಅವರು, ಮಹಾನ್ ನಾಯಕರುಗಳ ಜಯಂತೋತ್ಸವಗಳು ಬರಿ ಆಚರಣೆಗೆ ಮಾತ್ರ ಸೀಮಿತವಾಗದೇ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರರ ಹಾಗೂ ಸಾಮಾಜೀಕ ಕಳಕಳಿಯುಳ್ಳ ರಾಜಕಾರಣಿಗಳ, ಸದಾ ದೇಶದ ಚಿಂತನೆಗಾಗಿ ಶ್ರಮಿಸುತ್ತಿರುವ ಸಂತರ ಆದರ್ಶಗಳನ್ನು ನಾವುಗಳು ನಮ್ಮ ನಿಜ ಬದುಕಿನಲ್ಲಿ ಕಾರ್ಯಗತವಾಗಿ ಆಚರಣೆಗೆ ತರುವುದರಿಂದ ಸಮಾಜದಲ್ಲಿ ಶಾಂತಿ ನೆಲೆಯೂರಿ ನಿಲ್ಲುವುದರೊಂದಿಗೆ, ಸುಂದರ ಬದುಕು ನಡೆಸಲು ಸಾಧ್ಯವಾಗುತ್ತದೆ ಎಂದರು.
ಪಟ್ಟಣದ ಸರ್ಕಾರಿ ಕಛೇರಿಗಳು, ಬಿಜೆಪಿ-ಕಾಂಗ್ರೇಸ್ ಕಾರ್ಯಾಲಯ, ಶಾಲಾ-ಕಾಲೇಜುಗಳು, ಪದವಿ ಕಾಲೇಜು, ಸಂಘ-ಸಂಸ್ಥೇಗಳು ಸೇರಿದಂತೆ ತಾಲೂಕಿನ ವಿವಿದೆಡೆಗಳಲ್ಲಿ ಡಾ.ಬಾಬೂಜೀ…ಅವರ ಸ್ಮರಣೆ ಮಾಡಲಾಯಿತು.
ಪಟ್ಟಣ ಪಂಚಾಯತಿ ಮುಖ್ಯಾಧೀಕಾರಿ ವೆಂಕಟೇಶ ತೆಲಾಂಗ, ಗ್ರಾಪಂ.ಮಾಜಿ ಅಧ್ಯಕ್ಷ ರಾಘವೇಂದ್ರ ಡಿ.ಗುತ್ತೇದಾರ, ಶಿವಶರಣಪ್ಪ ಮಾಕಪನೋರ, ಸಾಬಣ್ಣ ಚಿಮ್ಮನಚೋಡ, ಸಂತೋಷ ನರನಾಳ, ಶಿವಕುಮಾರ ಚಿಂತಕೋಟಿ, ಚಂದ್ರಕಾಂತ ಕಾಳೇರ, ರಾಹುಲ್ ಚಿತ್ತಾಪೂರ, ಸಂಜುಕುಮಾರ ಮೋಘಾ, ಮಹೇಶ ರಾಜಾಪೂರ, ದಯಾನಂದ ಹೊಸಮನಿ, ದೇವಜಿ ಜಾಧವ, ಯುವರಾಜ ಜಾಧವ, ತಾರಚಂದ ಜಾಧವ, ಆನಂದ ಕಾಶಿ, ಕಾಳೇಶ್ವರ ಮಡಿವಾಳ, ಉದಯಕುಮಾರ ಸಿಂಗಶೇಟ್ಟಿ, ಚಂದ್ರಕಾಂತ ಮಂತಾನೋರ, ನಾಗ ದಂಡೋತಿ, ಸಾಯಿಪ್ರಸಾದ ರಟಕಲ್, ಸಂಜು ಮ್ಯಾದಾರ ಸೇರಿದಂತೆ ಅನೇಕರಿದ್ದರು.