ದೇಶ ಮತ್ತು ಧರ್ಮ ರಕ್ಷಣೆಗೆ ಒಂದೇ ಒಂದು ಸೂತ್ರಬೇಕಾಗಿದೆ:ಕು.ಹಾರಿಕಾ

ತಾಳಿಕೋಟೆ:ಸೆ.27: ದೇಶ ಮತ್ತು ಧರ್ಮ ರಕ್ಷಣೆಗೆ ಒಂದೇ ಒಂದು ಸೂತ್ರಬೇಕಾಗಿದೆ ಅದುವೇ ಸಂಘಟಿತರಾಗುವಂತಹ ಶಕ್ತಿ ಆ ಸಂಘಟನೆಯಿಂದಲೇ ಭಲ ಬರುವದರಲ್ಲಿ ಯಾವ ಸಂಶಯವಿಲ್ಲಾ ಸಂಘಟನೆಯ ಭಲವೆಂಬುದು ಯಾವ ರೀತಿ ಬೇರೂರಬೇಕೆಂದರೆ ಹಿಂದೂಗಳು ಹಿಂದೂ ಅನ್ನುವಂತಹ ಅಂಶವನ್ನು ಗುರುತಿಸಿಕೊಂಡು ಗೌರವಿಸಬೇಕೆಂದು ಪ್ರಖರ ವಾಗ್ಮೀ ಕುಮಾರಿ ಹಾರಿಕ ಮಂಜುನಾಥ ಅವರು ನುಡಿದರು.

      ಸೋಮವಾರರಂದು ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸಲಾದ ಗಣೇಶ ಮೂರ್ತಿಯ ಸ್ಥಳದಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಎಂಬ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸಿ ಮಾತನಾಡುತ್ತಿದ್ದ ಅವರು ಒಬ್ಬ ಹಿಂದೂಗಳಲ್ಲಿ ಸಹೋದರತ್ವ ಸಾಮರಸ್ಯ ಭಾವನೆ ಯಾವಾಗ ಬರುತ್ತದೆ ಆವಾಗ ಅವತ್ತೇ ಹಿಂದೂ ಧರ್ಮದ ರಕ್ಷಣೆಯಾಗುತ್ತದೆ ಎಂದರು. ಜಾತಿ ಉಪಜಾತಿ ಮತ ಪಂಗಡ ರಾಜಕೀಯ ಆಸಕ್ತಿಯನ್ನು ಬಿಟ್ಟು ಮೊದಲು ಹೆಗಲ ಮೇಲೆ ಎಲ್ಲರೂ ಕೇಸರಿಯ ಶಾಲುಗಳನ್ನು ಹೊದಿಸಿಕೊಳ್ಳಿ ನಾವೇಲ್ಲರೂ ಹಿಂದೂ ಎಂಬುದನ್ನು ಆಗಲಿ ಆವಾಗ ದೇಶ ಜಾಗೃತವಾಗಲಿದೆ ಎಂದರು. ಹಿಂದೂ ಸಮಾಜದ ರಕ್ಷಣೆಗೆ ಸಂಘಟಿತ ಭಲ ಬರಬೇಕು ಶ್ರೀಕೃಷ್ಣ ಪರಮಾತ್ಮ ಹೇಳಿದಂತೆ ಅರ್ಜುನನಿಗೆ ತಿಳಿಸಿದ ದೇಶ ಧರ್ಮದ ಅಂಚಿನಲ್ಲಿ ನಾಶಕ್ಕೆ ಬಂದಾಗ ಆಗ ದುಷ್ಟರ ನಾಶ ಮಾಡಲಿಕ್ಕೆ ಧರ್ಮದ ರಕ್ಷಣೆಗೆ ಮತ್ತೇ ಮತ್ತೇ ಅವತರಿಸಿ ಬರುತ್ತೇನೆಂದು ಶ್ರೀ ಕೃಷ್ಣ ಪರಮಾತ್ಮ ಹೇಳಿದನ್ನು ಪ್ರಸ್ಥಾಪಿಸಿದ ಹಾರಿಕಾ ಅವರು ಧರ್ಮ ರಕ್ಷಣೆ ತ್ರೇತಾಯುಗ ದ್ವಾಪಾರ ಯುಗದಲ್ಲಿ ಅವತರಿಸಿದ ಶ್ರೀ ಕೃಷ್ಣ ಪರಮಾತ್ಮ ಕಲಿಯುಗದಲ್ಲಿ ಮತ್ತೇ ಅವತರಿಸಿ ಬರುತ್ತೇನೆಂದು ಹೇಳಿದ್ದಾನೆಂದರು. ಹಿಂದೂಗಳನ್ನು ಮತ್ತೊಂದು ಧರ್ಮಕ್ಕೆ ಮತಾಂತರ ಮಾಡಬಹುದು ಆದರೆ ಹಿಂದೂ ಹಿಂದೂ ಆಗುವುದು ಯಾವಾಗ ಎಂದು ಪ್ರಶ್ನೀಸಿದ ಅವರು ಇದನ್ನು ಅರ್ಥೈಸಿಕೊಳ್ಳಬೇಕೆಂದರು. ಹಿಂದೂ ಸಂಘಟನೆ ಎಂಬ ಭಾವನೆ ಎಲ್ಲರಲ್ಲಿ ಬರಬೇಕು ಇಂತಹ ಉದ್ದೇಶದಿಂದಲೇ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಮುಂದಾಗಿ ಎಲ್ಲರನ್ನು ಒಂದುಗೂಡಿಸುವ ಕಾರ್ಯಕ್ಕೆ ಮುಂದಾಗಲಾಯಿತ್ತೆಂದರು. ಭಾರತಕ್ಕೆ ಸ್ವಾತಂತ್ರ್ಯದ ನಂತರವೂ ವಿಭಜನೆ ಮಾಡಲಾಯಿತು. ಗಡಿ ಭಾಗದಲ್ಲಿ ಹಿಂದೂಗಳನ್ನು ನರಮೇದ ಮಾಡಲಾಯಿತು 75 ವರ್ಷದ ಹಿಂದೆ ಭಾರತ ವಿಭಜನೆಯಾಗಿ ಗಡಿ ಭಾಗದಲ್ಲಿ 20 ಲಕ್ಷ ಜನ ಹಿಂದೂಗಳ ನರಮೇಧವಾಯಿತು ನರ ಸಂಹಾರವಾಗಿದ್ದನ್ನು ಲಕ್ಷೀಸಿದ ಕುವೇಂಪು ಅವರು ಕವಿತೆಯನ್ನು ರಚಿಸಿ ಹಿಂದೂಗಳು ಸುಮ್ಮನೇ ಕೂಡುವದಿಲ್ಲಾ ಭಜರಂಗ ಬಲಿ ಅವತಾರವಾಗಬೇಕು ಹಣಮಂತನಾಗಬೇಕು ಹಣಮಂತನಿಗೆ ಅವತರಿಸಿ ಭಾ ಎಂದು ಕವಿತೆ ರಚನೆ ಮಾಡಿ ಕರೆ ಕೊಟ್ಟಿದ್ದನ್ನು ತಿಳಿ ಹೇಳಿದ ಅವರು ಹಿಂದೂಗಳು ಒಗ್ಗೂಡಬೇಕು ಯಾಕೆಂದರೆ ನಮ್ಮ ಸಮಾಜದಲ್ಲಿ ಸಮಾಜ ಘಾತುಕ ಶಕ್ತಿಗಳ ಕಾರ್ಯ ನಡೆಯುತ್ತಾ ಸಾಗಿದೆ ದೇಶದಲ್ಲಿ ಲವ್ ಜೀಹಾದ್ ನಡೆಯುತ್ತಿದೆ ಲವ್ ಜೀಹಾದ್ ಅಂದರೆ ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಗೆ ಬಿಳ್ಳಿಸಿ ಮತಾಂತರ ಮಾಡುವ ಕಾರ್ಯ ನಡೆಯುತ್ತಿದೆ ಲವ್ ಜೀಹಾದ್ ಪದ ಹುಟ್ಟಿದ್ದು ಹಿಂದೂ ಸಂಘಟನೆಗಳಿಂದ ಅಲ್ಲಾ ಕೇರಳದ ಪಾದ್ರಿಗಳು ಹೇಳಿದ್ದಾಗಿದೆ 2009ರಲ್ಲಿ ಕೇರಳದ ಹೈಕೋರ್ಟ ಜಡ್ಜ ಜಸ್ಟಿಸ್ ಕೆ.ಟಿ.ಶಂಕರನೆಂಬವರು ಘಂಟಾಘೋಷವಾಗಿ ಪತ್ರಕರ್ತರ ಮುಂದೆ ಹೇಳುತ್ತಾ ಇಡೀ ದೇಶದಾಧ್ಯಂತ ಲವ್ ಜೀಹಾದ್ ನಡೆಯುತ್ತಿದೆ ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಗೆ ಹಾಕಿಕೊಂಡು ಮತಾಂತರ ಮಾಡುವ ಕಾರ್ಯ ನಡೆಯುತ್ತಿದೆ ಕಾರಣ ಪೋಷಕರು ಜಾಗೃತರಾಗಿ ಎಂದು ಹೇಳಿಕೆ ನೀಡಿದ್ದರೆಂದರು. 2017ರಲ್ಲಿ ಕೇರಳದಾಧ್ಯಂತ ಲವ್ ಜೀಹಾದ್ ನಡೆಯುತ್ತಿದೆ ಎಂಬುದನ್ನು ಪೋಲೀಸ್ ಡಿಪಾರ್ಟಮೆಂಟ್ ಯೋಚನೆ ಮಾಡುತ್ತು ಇದನ್ನು ಅರ್ಥೈಸಿಕೊಂಡು ಪಾಲಕರು ತಮ್ಮ ತಮ್ಮ ಮಕ್ಕಳ ಬಗ್ಗೆ ಲಕ್ಷ ವಹಿಸಿ ನಮ್ಮ ಹಿಂದೂ ಧರ್ಮದ ಸಂಸ್ಕøತಿಯ ಬಗ್ಗೆ ತಿಳಿಸುತ್ತಾ ಸಾಗಬೇಕೆಂದು ಸಲಹೆ ನೀಡಿದ ಅವರು ಮಂಗಳೂರಿನಲ್ಲಿ ಲವ್ ಜೀಹಾದ್ ಸಂಬಂದಿಸಿ ಯುವತಿಯೊಬ್ಬಳು ಆತ್ಮಹತ್ಯ ಮಾಡಿಕೊಂಡಿದ್ದರ ಕುರಿತು ಮರಳಿ ಮಾತಾಪಿತರ ಮನೆಗೆ ಬಂದಿದ್ದರ ಕುರಿತು ವಿವರಿಸಿದ ಹಾರಿಕಾ ಮಂಜುನಾಥ ಅವರು ಆ ಮನೆಯವರು ಪತ್ರಕರ್ತರ ಮುಂದೆ ಪ್ರಸ್ಥಾಪಿಸಿದ್ದರ ಬಗ್ಗೆ ಹೇಳಿದ ಅವರು ಅಲ್ಲಿ ಆ ಮಾತನ್ನು ಕೇಳಿದ ಅಲ್ಲಿನಿಂತವರಲ್ಲಿ ಕಣ್ಣು ತುಂಭಾ ನೀರು ಬಂದಿದ್ದರ ಕುರಿತು ವಿವರಿಸಿದ ಅವರು ಸನಾತನ ಧರ್ಮ ನಾಶವಾಗಬೇಕೆಂದು ಉದಯನಿಧಿ ಸ್ಟಾಲಿನ್ ಅವರು ಹೇಳಿರುವದು ಖಂಡನೀಯವಾಗಿದೆ ಹಿಂದೂ ಧರ್ಮದ ಪರಂಪರೆಯ ಬಗ್ಗೆ ಹಾಳು ಮಾಡಲು ಅನೇಕರು ಪ್ರಯತ್ನಿಸಿದ್ದು ಸಾವಿರಾರು ವರ್ಷಗಳಾದವು ಯಾರಿಂದಲೂ ಈ ಕಾರ್ಯ ಯಶಸ್ವಿಯಾಗಲಿಲ್ಲಾ ಇಜಿಪ್ಟ್ ಜನಾಂಗದ ಮೇಲೆ ದಾಳಿಯಿಂದ ದೇಶವು ಮಣ್ಣಲ್ಲಿ ಮಣ್ಣಾಯಿತು ಫರ್ಶಿಯಾ ದೇಶದಲ್ಲಿ 40 ಸಾವಿರ ಮುಸ್ಲಿಂರಿಗೆ ಸ್ಥಾನ ಮಾನ ನೀಡಿದ್ದರು ಇಡೀ ಫರ್ಶಿಯನ್ ನಾಶವಾಗಿ ಹೋಯಿತು ಈ ಕಾರ್ಯ ನಮ್ಮ ದೇಶದಲ್ಲಿಯೂ ಮುಂದುವರೆಯಲು ಮುಂದಾದಾಗ ದೇಶಕ್ಕಾಗಿ ಪ್ರಾಣ ಕೊಡುವದಾಯಿತು ಪ್ರಾಣ ಕೊಡುತ್ತೇವೆ ದೈರ್ಯ ಬಿಡುವದಿಲ್ಲಾವೆಂದು ಮುಂದಾಗಿದ್ದರಿಂದಲೇ ಹಿಂದೂಗಳಾಗಿಯೇ ಉಳಿದಿದ್ದೇವೆಂದರು.

ಮೋಘಲರ ಆಳ್ವಿಕೆಯಲ್ಲಿಯೂ ವಿಚಾರ ಮಾಡಿದ ನಮ್ಮ ಪೂರ್ವಜರು ಕಂದಾಯ ಕಟ್ಟಿದರೂ ಧರ್ಮ ಉಳಿಸಿಕೊಂಡಿದ್ದಾರೆ ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಧರ್ಮ ಜಾಗೃತಿಯಾದಾಗ ಮಾತ್ರ ಧರ್ಮ ರಕ್ಷಣೆಯಾಗುವದು ಎಂದ ಅವರು ಧರ್ಮದಲ್ಲಿ ಹಿಂದೂಗಳು ಜಾಗೃತರಾಗಬೇಕೆಂದರು. ಧರ್ಮದಲ್ಲಿ ಹಿಂದೂಗಳ ಸಾಮರಾಸ್ಯ ಎಂಬುದು ಬೇಕಿದೆ ಧರ್ಮದ ಏಳಿಗೆಗೆ ಶ್ರಮಿಸಿದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮಾಡುತ್ತೇವೆ ಅದರಂತೆ ಬಸವಣ್ಣನವರ ಜಯಂತಿ ಮಾಡುತ್ತೇವೆ ಆದರೆ ಈ ಕುರಿತು ಯೋಚನೆ ಮಾಡಬೇಕಿದೆ ಎಂದರು. ಶಿವಾಜಿ ಮಹಾರಾಜರು ಹೋರಾಡಿದ್ದು ಹಿಂದೂಗಳ ರಕ್ಷಣೆಗೆ ಮತ್ತು ಹಿಂದೂವೀ ಸಾಮ್ರಾಜ್ಯ ಸ್ಥಾಪನೆಗೆ ಹೋರತು ತಮ್ಮ ಹಿತಕ್ಕಾಗಿ ಅಲ್ಲಾ ಅದೇ ರೀತಿ ಡಾ. ಅಂಬೇಡ್ಕರ್ ಅವರು ಸಂವಿದಾನ ರಚಿಸಿದ್ದು ಸಮಸ್ತ ಭಾರತೀಯರಿಗೋಸ್ಕರ ಸಂವಿದಾನ ರಚಿಸಿದ್ದಾರೆ ಬಸವಣ್ಣನವರೂ ಕೂಡಾ ವಚನಗಳನ್ನು ಜಗತ್ತಿಗೆ ಸಾರಬೇಕಾದರೆ ಕೇವಲ ಲಿಂಗಾಯತರಿಗಲ್ಲಾ ಇಡೀ ಹಿಂದೂ ಸಮಾಜದ ಏಳಿಗೆ ಆಗಬೇಕೆಂಬ ವಿಚಾರ ಅವರಲ್ಲಿತ್ತು ಎಂದರು. ನಮ್ಮ ಧರ್ಮದ ಬಗ್ಗೆ ಎಲ್ಲರೂ ಶ್ರಮ ಪಟ್ಟಿರುವದು ಏಕೆ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು ನಮ್ಮ ನಮ್ಮ ಜಾತಿಯ ವಿಚಾರ ರಾಜಕೀಯ ವಿಚಾರ ನಮ್ಮ ಮನೆಯಲ್ಲಿಯೇ ಇರಬೇಕು ಹೊರಗೆ ಬರುವಾಗ ಕೇಸರಿಯ ಶಾಲು ಇರಬೇಕೆ ಹೋರತು ನಾವು ಹಿಂದೂಗಳು ಎಲ್ಲರೂ ಒಂದೇ ಎಂಬ ತತ್ವದೊಂದಿಗೆ ಸಾಗಬೇಕೆಂದು ಗಣಪತಿ ಪ್ರತಿಷ್ಠಾಪಿಸುವ ಉದ್ದೇಶ ಕಾರ್ಯ ವೈಖರ್ಯಗಳ ಬಗ್ಗೆ ಹಾಗೂ ವಿದೇಶಿಯರೂ ಸಹ ನಮ್ಮ ಭಾರತೀಯ ಸಂಸ್ಕøತಿಯನ್ನು ಅನುಸರಿಸುತ್ತಾ ಸಾಗಿರುವದನ್ನು ಕೆಲವು ಉದಾಹರಣೆಗಳನ್ನು ನೀಡಿ ಹಿಂದೂತ್ವ ಹಿಂದೂ ಸಮಾಜ ಹಿಂದೂ ಸಂಸ್ಕøತಿ ಇವೇಲ್ಲವನ್ನು ಉಳಿಸಿ ಬೆಳೆಸಿಕೊಂಡು ನಡೆಯಲು ಎಲ್ಲರೂ ಸಿದ್ದರಾಗಬೇಕೆಂದು ಭಹು ಮಾರ್ಮಿಕವಾಗಿ ವಿವರಿಸಿದರು.

ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಗಣೇಶ ಉತ್ಸವ ಆಚರಿಸುವ ಕುರಿತು ಮಾತನಾಡಿದರು.

ವೇದಿಕೆಯ ಮೇಲೆ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಗೌರವ ಅಧ್ಯಕ್ಷ ಗುಂಡಕನಾಳ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಉಪಾಧ್ಯಕ್ಷ ಕೆಸರಟ್ಟಿಯ ಶ್ರೀ ಸೋಮಲಿಂಗ ಮಹಾ ಸ್ವಾಮಿಗಳು, ಕಾರ್ಯದರ್ಶಿ ವೇ.ಸಂತೋಷಬಟ್ ಜೋಶಿ, ಹಾಗೂ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ಕಾರ್ಯಕರ್ತರು ಉಪಸ್ಥಿತರಿದ್ದರು.