ದೇಶ ಪ್ರೇಮ ಸಾರುವ `ಯಂಗ್ ಮ್ಯಾನ್’

ಕನ್ನಡದಲ್ಲಿ ಹೊಸ ಪ್ರಯತ್ನಗಳು ಆಗಾಗ ನಡೆಯುತ್ತಿವೆ. ಆ ಸಾಲಿಗೆ ಮತ್ತೊಂದು ಸೇರ್ಪಡೆ “ ಯಂಗ್ ಮ್ಯಾನ್”. 2 ಗಂಟೆ 38 ನಿಮಿಷದ ಅವಧಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣವಾಗಿರುವುದು ವಿಶೇಷ. 

ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ಮುತ್ತುರಾಜ್, ಚೊಚ್ಚಲ ನಿರ್ದೇಶನದಲ್ಲೇ ವಿಶೇಷತೆ ಇರಬೇಕು ಎನ್ನುವ ಹಂಬಲದಿಂದ ಸಿಂಗಲ್ ಟೇಕ್‍ನಲ್ಲಿ ಮಾಡಿದ್ದೇವೆ. ಸುಮಾರು ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಂಡಿದ್ದೇನೆ. ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೆ ನಟಿಸಿರುವ ಕಾರಣ ಅವರಿಗೆಲ್ಲಾ ತರಬೇತಿ ನೀಡಲಾಗಿದೆ, ದೇಶ ಪ್ರೇಮ ಆಧರಿಸಿದ ಕಥೆಯಿದೆ. ಯಾರು ಊಹಿಸಲಾಗದ್ದ ಕ್ಲೈಮ್ಯಾಕ್ಸ್ ಸಹ ಇದೆ. ತಾಯಿ ವಿಜಯಲಕ್ಷ್ಮಿ – ತಂದೆ ರಾಮೇಗೌಡ, ಹರೀಶ್ ಹೆಚ್ ಎಸ್ ಮತ್ತಿತರು ಬೆನ್ನೆಲುಬಾಗಿದ್ದರಿಂದ ಚಿತ್ರ ಸಾಧ್ಯವಾಗಿದೆ ಎಂದರು.

ಛಾಯಾಗ್ರಾಹಕ ವೀನಸ್ ನಾಗರಾಜ್ ಮೂರ್ತಿ ಮಾತನಾಡಿ,  ಎಲ್ಲಾ ಕಲಾವಿದರ ಸಹಕಾರವಿದ್ದರಿಂದ ಸಿಂಗಲ್ ಟೇಕ್ ನಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಾಯಿತು. ಕನಕಪುರದ ಬಳಿಯ ಮನೆಯೊಂದರಲ್ಲಿ ವಿಶೇಷ ಕ್ಯಾಮೆರಾ ಬಳಸಿ ಚಿತ್ರೀಕರಣ ಮಾಡಲಾಗಿದೆ ಎಂದರು.

ಕ್ರಿಯೇಟಿವ್ ಹೆಡ್ ಮುರಳಿ ಮಾತನಾಡಿ, ಚಿತ್ರವನ್ನು ಲಿಮ್ಕಾ ದಾಖಲೆಗೆ ಹಾಗೂ ಕೆಲವು ಚಿತ್ರೋತ್ಸವಗಳಿಗೆ ಕಳುಹಿಸುತ್ತಿರುವುದಾಗಿ ಹೇಳಿದರು.

ನಿರ್ಮಾಪಕರಾದ ವಿಜಯಲಕ್ಷ್ಮಿ ರಾಮೇಗೌಡ, ಹರೀಶ್ ಹೆಚ್ ಎಸ್ ಹಾಗೂ ಕಲಾವಿದರಾದ ಸುನೀಲ್ ಗೌಡ, ನಯನ ಪುಟ್ಟಸ್ವಾಮಿ, ಹರೀಶ್ ಆಚಾರ್ಯ, ಆನಂದ್ ಕೆಂಗೇರಿ, ರಾಶಿಕ ಪುಟ್ಟಸ್ವಾಮಿ, ತನುಜಾ, ಶೃತಿ ಗೌಡ ಸೇರಿದಂತೆ ಹಲವರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಹೊಸ ಪ್ರಯತ್ನ

ಹೊಸ ಪ್ರತಿಭೆಗಳು ಹೊಸ ಕನಸು ಆಲೋಚನೆಯೊಂದಿಗೆ ಸಿನಿಮಾ ಮಾಡುತ್ತಿದ್ದಾರೆ. ಅದರ ಸಾಲಿಗೆ ಹೊಸ ಸೇರ್ಪಡೆ ಯಂಗ್ ಮ್ಯಾನ್.ದೇಶ ಪ್ರೇಮ ಸೇರಿದಂತೆ ಮತ್ತಿತರ ವಿಷಯಗಳನ್ನು ತೆರೆಯ ಮೇಲೆ ಕಟ್ಟಿಕೊಡಲು ತಂಡ ಮುಂದಾಗಿದೆ