ದೇಶ ಪ್ರೇಮ ಪಾರ್ಟಿ ಅಸ್ತಿತ್ವಕ್ಕೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ಮಾಜಿ ಪ್ರಧಾನಿ ನರಳ ಸಜ್ಜನಿಕೆಯ ಲಾಲ್ ಬಹದ್ದೂರ್  ಶಾಸ್ತ್ರಿ ಅವರ ಚಿಂತನೆಗಳೊಂದಿಗೆ ದೇಶ ಪ್ರೇಮ ಎಂಬ ಹೊಸ ಪಾರ್ಟಿ ಅಸ್ತಿತ್ವಕ್ಕೆ ಬಂದಿದೆ.
ಬಳ್ಳಾರಿಯ ಹಳೇ ಬಸ್ ನಿಲ್ದಾಣದ ಎದುರಿನ ಜಂತಕಲ್ ಬಿಲ್ಡಿಂಗ್ ನಲ್ಲಿ  ಪ್ರಧಾನ ಕಚೇರಿಯನ್ನು ಹೊಂದಿದ್ದು. ಎಸ್.ಷಣ್ಮುಖಪ್ಪ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ. ಪ್ರಧಾನ ಕಾರ್ಯದರ್ಶಿ ವಿ.ರಾಕೇಶ್, ಉಪಾಧ್ಯಕ್ಷ ವಿರೂಪಾಕ್ಷಿ ಅವರಾಗಿದ್ದಾರೆ.
ಭಾರತದ ಸಂವಿಧಾನದ  ಆಶಯಗಳನ್ನು ಪೂರೈಸುವುದು. ರೈತರ ಸಾಲಕ್ಕೆ ಬಡ್ಡಿ ವಿನಾಯ್ತಿ,  ಸಕಲರಿಗೆ ಶಿಕ್ಷಣ ಸೌಲಭ್ಯ ಮತ್ತು ಪ್ರೋತ್ಸಾಹ, ಹೆಚ್ಚು ಉತ್ಪಾದನೆ ಯೋಜನೆ ಮತ್ತು ಬಹು ಉದ್ಯೋಗ ಸೃಷ್ಟಿ‌ ವಿಕಲಚೇತನರಿಗೆ ಪ್ರೋತ್ಸಹ ಧನ ಮತ್ತು ಉದ್ಯೋಗ.  ಸ್ತ್ರೀ ಶಕ್ತಿಗಳಗೆ ಪ್ರೋತ್ಸಾಹ ಧನ, ಆರ್ಥಿಕ ವಿಕೇಂದ್ರೀಕರಣ ದತ್ತ ಉಪಗಾಲು.  ಲಿಂಗ ಸಮಾನತೆ
ಸಾಮಾಜಿಕ ನ್ಯಾಯಕ್ಕೆ ಬದ್ದತೆ. ಯುವ ಸಂಪನ್ಮೂಲಗಳ ಸದ್ಬಳಕೆ.  ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಚಿಂತನೆ.  ಸ್ತ್ರೀ ಸಬಲೀಕರಣಕ್ಕೆ ವಿವಿಧ ಯೋಜನೆಗಳು. ಹಸಿವು ಮುಕ್ತ ಭಾರತಕ್ಕಾಗಿ ಹಲವು ರಚನಾತ್ಮಕ ಕಾರ್ಯಕ್ರಮಗಳು ನಿರಾವರಿ ಯೋಜನೆಗಳು ಮತ್ತು ಕೆರೆ, ಕೊಳಗಳ ಪುನಃ ಚೇತನ‌  ದೇಶದ ಸುರಕ್ಷತೆ ಗಡಿ ಭಾಗದ ಭದ್ರತೆ, ಸೈನಿಕರಿಗೆ ಪ್ರೋತ್ಸಾಹ. ದೇಶದ ರಕ್ಷಣೆಗೆ, ಭದ್ರತೆಗೆ ಆದ್ಯತೆ,ಸರ್ವರಿಗೂ ಸಮಬಾಳು, ಸಮಪಾಲು, ಅಖಂಡ ಸಮೃದ್ಧ ಭಾರತ ಕಟ್ಟುವ ಉದ್ದೇಶ ಈ ಪಕ್ಷದ್ಧಾಗಿದೆಯಂತೆ.