ದೇಶ ಪ್ರೆಮ, ದೇಶ ಭಕ್ತಿ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು: ನಾಗಶೆಟ್ಟಿ ಧರಮಪೂರ್

ಬೀದರ್, ಜು. 24ಃ ಆಜಾದ್ ಎಂದೇ ಗುರುತಿಸ್ಪಟ್ಟಿದ್ದ ಭಾರತದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಚಂದ್ರಶೇಖರ್ ಆಜಾದ ಅವರ ದೇಶ ಪ್ರೇಮ, ದೇಶ ಭಕ್ತಿಯನ್ನು ದೇಶದ ಪ್ರತಿಯೋಬ್ಬ ಪ್ರಜೆ ಅಳವಡಿಸಿಕೊಂಡು ಪಾಲಿಸಬೇಕೆಂದು ಪ್ರಭುರಾವ್ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಮಪೂರ್ ಅವರು ನುಡಿದರು.

ಅವರು ಇಂದು ಬೀದರ ನಗರದಲ್ಲಿ ಚಂದ್ರಶೇಖರ್ ಆಜಾದ ಯುವಕ ಸಂಘದಿಂದ ಏರ್ಪಡಿಸಿದ ಆಜಾದ್‍ರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.

ಚಂದ್ರಶೇಖರ್ ಆಜಾದ್ ಅವರು 1906ರ ಜುಲೈ 23ರಂದು ಅಲಾಹಾಬಾದನಲ್ಲಿ ಜನಿಸಿದ್ದರು. ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ಅವರು ಜಲಿಯನವಾಲಾಬಾಗ್ ಹತ್ಯಾಕಾಂಡದಲ್ಲಿ ಬ್ರಿಟೀಷ ಪೊಲೀಸರ ಕೈಗೆ ಸಿಗದ ಅವರು ಮದ್ದು ಗುಂಡುಗಳ ಹೊರಾಟದ ಮದ್ಯೆ ತಮ್ಮನ್ನು ತಾವೂ ಗುಂಡು ಹಾರಿಸಿಕೊಂಡು ದೇಶಕ್ಕಾಗಿ ಪ್ರಾಣ ತೆತ್ತರು ಎಂದು ವಿವರಿಸಿದರು.

“ಕದಂಬ” ನ್ಯೂಸ್ ಕನ್ನಡ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕರಾದ ವಿಜಯಕುಮಾರ್ ಅಷ್ಟೂರೆ ಅವರು ಆಜಾದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಅಂಬಿಗರ ಚೌಡಯ್ಯ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ ಭಾವಿಕಟ್ಟಿ, ಚಂದ್ರಶೇಖರ್ ಆಜಾದ ಯುವಕ ಸಂಘದ ಅಧ್ಯಕ್ಷ ವಿಜಯಕುಮಾರ ಭಂಡೆ ಮಾತನಾಡಿದರು.

ಈ ಸಂದರ್ಭದಲ್ಲಿ ಶರದ ಘಂಟೆ, ಸಂತೋಷ ಹೊನ್ನಡ್ಡಿ, ಗಜೇಂದ್ರ ಸೂರ್ಯ, ಅರುಣ ಕೇಳೆಕರ್, ಗೌತಮ ನಿಜಾಂಪೂರೆ, ವಿಕಾಸ್ ಕೋರೆ, ಸುರೇಶ ಏಕಲಾರಕರ್, ಅಜಯ ದೀನೆ, ಹರ್ಷವರ್ಧನ್ ಸಕ್ಪಾಲ್, ದೀಪಕ್ ಸೇರಿದಂತೆ ಇತರರು ಉಪಸ್ಥಿತರಿದ್ದರು.