ದೇಶ ನಮಗೇನು ಮಾಡಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಅನ್ನುವುದು ಮುಖ್ಯ: ಶಾಸಕ ಶರಣಗೌಡ ಕಂದಕೂರ

ಗುರುಮಠಕಲ್:ಆ.16: ಅನೇಕ ನಾಯಕರ ಬಲಿದಾನದ ಫಲ. ಅನೇಕ ನಾಯಕರ ಹೋರಾಟದ ಪ್ರತಿಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಸ್ವಾತಂತ್ರ್ಯ ಪಡೆಯಬೇಕೆಂಬ ಕೆಚ್ಚೆದೆಯ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ ಸ್ವಾತಂತ್ರ್ಯ ಪಡೆಯಲು ಅನೇಕ ಸಾಕ್ಷಿಯಾದ ತಾಣಗಳು ನಮ್ಮಲ್ಲಿ ಇವೆ ಇವೆಲ್ಲವೂ ನಮ್ಮ ಹಿರಿಯರ ಹೋರಾಟ ಸ್ವಾತಂತ್ರ್ಯ ಪಡೆಯಲು ಸಾಕ್ಷಿ ಯಾಗಿವೆ ಎಂದು ಕ್ಷೇತ್ರದ ಶಾಸಕರಾದ ಸನ್ಮಾನ್ಯೆ ಶ್ರೀ ಶರಣುಗೌಡ ಕಂದಕೂರ ರವರು ಹೇಳಿದರು. ಸಾರ್ವಜನಿಕ ಧ್ವಜಾರೋಹಣ ಆಚರಣಾ ಸಮಿತಿ 77 ನೇ ಸ್ವಾತಂತ್ರೋತ್ಸವ ದಿನಾಚರಣೆ ಪಟ್ಟಣದ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಾಸಕರು ದೇಶ ನಮಗೇನು ಮಾಡಿದೆ ಅನ್ನುವುದಕ್ಕಿಂತ ದೇಶಕ್ಕಾಗಿ ನಾವೇನು ಮಾಡಿದ್ದೇವೆ ಅನ್ನುವುದು ಬಹಳ ಮುಖ್ಯ. ಕಂದಕೂರ ಮನೆತನ ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ನಿಂತಿದ್ದು ನಮ್ಮ ತಂದೆಯವರು ಶಾಸಕರಾಗಿದ ಅವಧಿಯಲ್ಲಿ ಕ್ಷೇತ್ರದ ಅನೇಕ ದೇವಾಲಯಗಳಿಗು. ಚರ್ಚ ಮಸೀದಿಗಳಿಗು ಅನುದಾನ ಕೊಟ್ಟಿದ್ದಾರೆ ಆದರೆ ಈಗ ನನ್ನ ಅವಧಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು. ಶಿಕ್ಷಣಕ್ಕಾಗಿ ಮತ್ತು ಆರೋಗ್ಯಕ್ಕಾಗಿ ಹೆಚ್ಚಿನ ಮಹತ್ವ ಕೊಡುವುದರ ಜೊತೆಗೆ ಬರುವ ದಿನಗಳಲ್ಲಿ ಮಾದರಿ ಕ್ಷೇತ್ರವಾಗಿ ಮಾಡುತ್ತೇನೆ ಎಂದು ಹೇಳಿದರು. ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರರು ಹಾಗೂ ತಾಲೂಕ ದಂಡಾಧಿಕಾರಿಗಳು ಶ್ರೀ ಮೊಹಮ್ಮದ್ ಮೊಹಸೀನ್ ಅಹಮದ್ ಮಹಾತ್ಮ ಗಾಂಧಿ. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಇನ್ನೂ ಅನೇಕ ನಾಯಕರ ತ್ಯಾಗ ಬಲಿದಾನಕ್ಕೆ ನಮಗೆ ಅಮೂಲ್ಯವಾದ ಸ್ವಾತಂತ್ರ್ಯವನ್ನು ತಂದು ಕೊಟ್ಟಿದ್ದಾರೆ ನಮ್ಮ ಭಾರತ ಮುಂದಿನ ದಿನಗಳಲ್ಲಿ ಅನೇಕ ನಾಯಕರ ಪರಿಶ್ರಮದಿಂದ ವಿಶ್ವ ಗುರು ಆಗಲಿಕ್ಕೆ ಸಾಧ್ಯವಿದೆ ಆದಕಾರಣ ವಿಧ್ಯಾರ್ಥಿಗಳು ತಾವೆಲ್ಲರೂ ಚೆನ್ನಾಗಿ ಓದಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿಯೊಂದು ಮನೆಯಲ್ಲೂ ಕೂಡ ಸರ್ಕಾರದ ನೌಕರರ ಆಗಬೇಕು ದೇಶದ ಅಭಿಮಾನ ತಮ್ಮಲ್ಲಿ ಬರಬೇಕು ಎಂದು ಹೇಳಿದರು. ಈದೆ ವೇಳೆ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ) ಶ್ರೀ ಶರಣಪ್ಪ ಚಿಂತಕುಂಟಾ ಉಪನ್ಯಾಸಕರು ಉಪನ್ಯಾಸ ನೀಡುವುದರ ಮೂಲಕ ತ್ರೇತಾಯುಗದಲ್ಲಿ ಶ್ರೀರಾಮ ಯುದ್ದ ವೀರ. ದ್ವಾಪರ ಯುಗದಲ್ಲಿ ಕರ್ಣ ದಾನಶೂರ. ಆದರೆ ನಮ್ಮ ಜನಪ್ರಿಯ ಶಾಸಕ ಶರಣಗೌಡ ಕಂದಕೂರರವರು ಕ್ಷೇತ್ರದ ಅಭಿವೃದ್ಧಿಯ ಹರಿಕಾರರು ಎಂದು ಹೇಳುತ್ತ ಅಕ್ಷರ ಮತ್ತು ಸಾಕ್ಷರತೆಯ ಬಗ್ಗೆ ಮತ್ತು ದೇಶಾಭಿಮಾನ ಮಕ್ಕಳಲ್ಲಿ ಯಾವರೀತಿ ಬರಬೇಕು ಭಾರತದ ದಿವ್ಯ ಮಂತ್ರ ಅದುವೇ ಶಾಂತಿ ಮಂತ್ರ ನಮ್ಮಲ್ಲಿ ಯಾವರೀತಿ ಬರಬೇಕು ಮತ್ತು ಸಂಸ್ಕøತಿ ಹಾಗೂ ಸು ಸಂಸ್ಕೃತಿ ಯಾವರೀತಿ ನಮ್ಮ ಭಾರತ ಮಾತೆಯ ಪುಣ್ಯ ಮಣ್ಣಿನಲ್ಲಿ ಇದೆ ಎಂದು ಉದಾಹರಣೆಗಳ ಮೂಲಕ ನೆರೆದಿರುವ ಸಾರ್ವಜನಿಕರಲ್ಲಿ ಗಣ್ಯರ ಸಮ್ಮುಖದಲ್ಲಿ ಅವರ ಮನ ಮುಟ್ಟುವ ಹಾಗೆ ಮಾತನಾಡಿದರು. ವಿವಿಧ ವಿಷಯಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಗೊಂಡವು. ಪರಮಪೂಜ್ಯ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಮಹಾ ಸ್ವಾಮಿಗಳು ಖಾಸಮಠ ಗುರುಮಠಕಲ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಸರ್ಕಾರ ನೌಕರರ ಸಂಘ ಅಧ್ಯಕ್ಷ ಸಂತೋಷ್ ಕುಮಾರ್ ನಿರೇಟಿ.ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಎಸ್ ಕಾದ್ರೊಳ್ಳಿ. ಪುರಸಭೆ ಮುಖ್ಯಾಧಿಕಾರಿ ಶ್ರೀ ಮತಿ ಭಾರತಿ ಎಸ್ ದಂಡೋತಿ. ಪೆÇೀಲಿಸ್ ಠಾಣೆ ಆರಕ್ಷಕ ನಿರೀಕ್ಷಕರು ದೌಲತ್ ಎನ್ ಕೆ. ಸಮಸ್ತ ತಾಲೂಕಿನ ಜನ ಪ್ರತಿನಿಧಿಗಳು. ಸಂಘಸಂಸ್ಥೆಗಳ ಪ್ರತಿನಿಧಿಗಳು. ನಾಗರಿಕರು. ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರ ವೃಂದದವರು.ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಉಪಸ್ಥಿತರಿದ್ದರು.