ದೇಶ ಕಟ್ಟುವ ಛಲಗಾರರೆಂದರೆ ಕಾರ್ಮಿಕರು

ವಿಜಯಪುರ:ಮೇ.2: ಕಠಿಣ ಪರಿಶ್ರಮದಿಂದಲೇ ದೇಶ ಕಟ್ಟುವ ಛಲಗಾರರೆಂದರೆ ಕಾರ್ಮಿಕರಾಗಿದ್ದರಿಂದ ಕಾರ್ಮಿಕರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ ಅದುವೇ ಕಾರ್ಮಿಕ ದಿನಾಚಾರಣೆ ಎಂದು ಹಿರಿಯ ರೈತ ಮುಖಂಡರಾದ ಭೀಮಶಿ ಕಲಾದಗಿ ಹೇಳಿದರು.
ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಜಂಟಿ ಕಾರ್ಮಿಕ ಸಂಘಟನೆಯಿಂದ ಕಾರ್ಮಿರೆಲ್ಲರೂ ಕೆಂಪು ಸಮವಸ್ತ್ರ ಧರಿಸಿ ಬೃಹತ್ ರ್ಯಾಲಿ ಮೂಲಕ ಹಲಗೆ ಭಾರಿಸುವುದರೊಂದಿಗೆ ಮೆರವಣಿಗೆ ಹಮ್ಮಿಕೊಂಡು ಗಾಂಧಿವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಖಾಸಗಿಕರಣಕ್ಕೆ ದಿಕ್ಕಾರ… 8 ಗಂಟೆಯ ದುಡಿಮೆಯನ್ನು 12 ಗಂಟೆ ಮಾಡಿದ ಬಿಜೆಪಿ ಸರ್ಕಾರಕ್ಕೆ ದಿಕ್ಕಾರ, ಬೆಲೆ ಏರಿಕೆ ನೀತಿಗೆ ಧಿಕ್ಕಾರ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಮಿಕ ವಿರೋಧ ನೀತಿಗೆ ದಿಕ್ಕಾರವೆಂದು ಘೋಷಣೆ ಮೂಲಕ ಅಂಬೇಡ್ಕರ್ ವೃತ್ತಕ್ಕೆ ತೆರಳಿ ಬಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಭಿಮಶಿ ಕಲಾದಗಿ ಮಾತನಾಡುತ್ತಾ, ಕೇಂದ್ರ ಸರ್ಕಾರ 2 ಕೋಟಿ ಉದ್ಯೋಗ ಕೊಡುತ್ತೇವೆಂದರೂ ಕೊಡಲಿಲ್ಲ. ಎಮ್.ಎಸ್. ಸ್ವಾಮಿನಾಥನ್ ವರದಿ ಜಾರಿಗೆ ತಂದು ರೈತರ ಬೆಳೆಗಳಿಗೆ ದ್ವಿಗುಣ ಬೆಲೆ ನೀಡುಅತ್ತೇವೆಂದು ಹೇಳಿದರು ಕೊಡಲಿಲ್ಲ ಅದರ ಬದಲಾಗಿ ಹಿಜಾಬ್-ಜಟಕಾ-ಕಟ್ ಮುಂತಾದ ಕೋಮು ಗಲಭೆಗೆ ಕಾರಣವಾದ ಬಿಜೆಪಿ ಸರ್ಕಾರ ನೀತಿಯನ್ನು ಖಂಡಿಸಿದ್ದರು.
ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಅಣ್ಣಾರಾಯ ಈಳಗೇರಿ ಮಾತನಾಡಿ, ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸಿ 8 ಗಂಟೆ ದುಡಿಮೆಯನ್ನು 12 ಗಂಟೆಗೆ ಏರಿಸಿ ಕಾರ್ಮಿಕರನ್ನು ಶೋಷಣೆಗೆ ಅನುವು ಮಾಡಿಕೊಟ್ಟ ಬಿಜೆಪಿ ಸರ್ಕಾರಕ್ಕೆ ದಿಕ್ಕಾರವೆಂದರು.
ಬ್ಯಾಂಕ್ ನೌಕರರ ಸಂಘದ ಮುಖಂಡ ಜಿ.ಜಿ. ಗಾಂಧಿ, ಪ್ರಭುಗೌಡ ಪಾಟೀಲ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷಣ ಹಂದ್ರಾಳ ಮಾತನಾಡಿ, ಕಾರ್ಮಿಕರ ನೂರಾರು ಸಮಸ್ಯೆಗೆ ಕೇಂದ್ರ ರಾಜ್ಯ ಸರ್ಕಾರ ಅನ್ಯಾಯ ಮಾಡಿದೆ. ಪೆಟ್ರೋಲ್-ಡಿಸೈಲ್ ಮತ್ತು ಅಡುಗೆ ಅನೀಲ ಬೆಲೆ ಏರಿಕೆ ಖಂಡಿಸಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಸಂಘದ ಮುಖಂಡರುಗಳಾದ ಸುನಂದ ನಾಯಕ, ಭಾರತಿ ವಾಲಿ, ಬಿಸಿಯೂಟ ನೌಕರರ ಸಂಘಧ ಅಧ್ಯಕ್ಷೆ ಕಾಳಮ್ಮ ಬಡಿಗೇರ ಮಾತನಾಡಿದರು.
ಈ ಸಂಧರ್ಭದಲ್ಲಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಮುಖಂಡರಾದ ಬಸವರಾಜ ಗುಡಿಮನಿ, ಜನವಾದಿ ಮಹಿಳಾ ಸಂಘದ ಅನುಸೋಯಾ ಹಜಾರೆ, ಲಾರಿ ಹಮಾಲರ ಸಂಘದ ಅಧ್ಯಕ್ಷ ಮೋದಿನಸಾಬ ಜಮಾದಾರ, ಸಾಬು ಗುಗದಡ್ಡಿ, ಬ್ಯಾಂಕನೌಕರರ ಸಂಘದ ಮುಖಂಡ ಗಂಟೆಪ್ಪಗೋಳ, ಸರಸ್ವತಿ ಮಠ, ಜಯಶ್ರೀ, ಸುವರ್ಣ ಹಲಗಣಿ, ಸುರೇಖಾ ವಾಗ್ಮೋಡೆ, ಅನುಸೋಯಾ ಹಜೇರಿ ಕಬಾಡೆ, ಮಳಸಿದ್ದ ನಾಯ್ಕೋಡಿ, ಅಶ್ವಿನಿ ತಳವಾರ, ಹಾಸ್ಟೇಲ್ ನೌಕರರ ಸಂಘದ ಅಧ್ಯಕ್ಷ ಹುಲಿಗೆಪ್ಪ ಚಲವಾದಿ, ಖಾಸೀಂ ಸಾಬ, ಮಿಲಿಂದ ಚಂಚಲಕರ, ಬೀದಿ ವ್ಯಾಪಾರಸ್ಥರಾದ ಲಾಲಸಾಬ ಕೊರಬು, ಡಿವೈಎಫ್‍ಐ ಈರಣ್ಣ ಬೆಳ್ಳುಂಡಗಿ, ಸೋಮಪ್ಪ ಆಯಟ್ಟಿ, ಗ್ರಹ ಕಾರ್ಮಿಕ ಸಂಘಧ ಮಹಾದೇವಿ ಕತ್ನಳ್ಳಿ, ಗ್ರಾಫಂ ನೌಕರರ ಸಂಘದ ವಿಠ್ಠಲ ಹೊನಮೊರೆ, ಮಲ್ಲಪ್ಪ ಹೊಸಕೇರ, ಕಟ್ಟಡ ಕಾರ್ಮಿಕರಾದ ಮುಖಂಡರಾದ ಸಚೀನ ಕಾಳೆ ಮುಂತಾದವರು ಇದ್ದರು.