
ರಾಯಚೂರು ಏ ೦೫
ಡಾ.ಬಾಬು ಜಗಜೀವನ್ ರಾಂ ಅವರ ಆದರ್ಶ ತತ್ವ ಸಿದ್ಧಾಂತಗಳು ಇಂದಿನ ಪಿಳಿಗಿಗೆ ಆದರ್ಶ ಪ್ರಯವಾಗಿವೆ, ದೇಶ ಕಂಡ ಮಹಾನ್ ವ್ಯಕ್ತಿ ಸ್ವಂತತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು, ದಿನದಲಿತರ ಪಾಲಿನ ದೇವರು ಎಂದು ಕೆ.ದೇವಣ್ಣ ನಾಯಕ ತಿಳಿಸಿದರು.
ಇಂದು ನಗರದಲ್ಲಿ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಂ ಅವರ ಜನ್ಮದಿನಾಚರಣೆಯ ಪ್ರಯುಕ್ತ ನ್ಯಾಯವಾದಿಗಳು ಸರ್ವೋಚ್ಚ ನ್ಯಾಯಲಯ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರಾದ ಕೆ.ದೇವಣ್ಣ ನಾಯಕ ಅವರು ಡಾ. ಬಾಬು ಜಗಜೀವನ ರಾಂ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.