ದೇಶ ಕಂಡ ಮಹಾನ್ ವ್ಯಕ್ತಿ ವಾಜಪೇಯಿ

ರಾಯಚೂರು,ಡಿ.೨೬-ಭಾರತ ದೇಶ ಕಂಡ ಮಹಾನ ವ್ಯಕ್ತಿ ಅಜಾತ ಶತ್ರು ಅಟಲ್‌ಬಿಹಾರಿ ವಾಜಪೇಯಿಯವರು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ ಹೇಳಿದರು.
ಅವರಿಂದು ನಗರದ ಲಲಿತಾ ಹಿರಿಯ ನಾಗರೀಕರ ಮನೆಯಲ್ಲಿ ಪ್ರಧಾನ ಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನದಿಂದ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ, ಭಾರತ ರತ್ನ ದಿ.ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗೆ ಹಣ್ಣು ಹಂಪಲು, ಬ್ರೆಡ್ ಮತ್ತು ಬೆಚ್ಚಗಿನ ಟೊಪ್ಪಿಗೆ, ಸ್ಕಾರ್ಫ್ ವಿತರಿಸಿ ಮಾತನಾಡಿದರು.
ವಾಜಪೇಯಿಯವರು ಅಜಾತ ಶತ್ರುಗಳಾಗಿದ್ದರು ದೇಶದಲ್ಲಿ ಪ್ರಧಾನ ಮಂತ್ರಿಯಾಗಿ ಅನೇಕ ಜನಪರ ಕಲ್ಯಾಣ ಯೋಜನೆ ರೂಪಿಸಿ ಜನ ಮಾನಸಗಳಲ್ಲಿ ಉಳಿದಿರುವ ಅವರ ಜನ್ಮ ದಿನಾಚರಣೆ ದೀನ ದುರ್ಬಲರ ಸೇವೆಗಾಗಿ ಮುಡಿಪಿಟ್ಟಿರುವುದು ಸಂತಸ ಸಂಗತಿಯಾಗಿದೆ ಎಂದರು.
ರಾಜೇಂದ್ರ ಶಿವಾಳೆ ಮಾತನಾಡಿ ಅಟಲ್ ಬಿಹಾರಿಯವರ ಜನ್ಮ ದಿನ ಅಂಗವಾಗಿ ಲಲಿತ ಹಿರಿಯ ನಾಗರಿಕರ ಮನೆಯ ಸದಸ್ಯರಿಗೆ ಸೇವೆ ಒದಗಿಸುವ ಭಾಗ್ಯ ದೊರಕಿದೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜನ ಕಲ್ಯಾಣಕಾರಿ ಪ್ರಚಾರ ಪ್ರಸಾರ ಅಭಿಯಾನದ ಜಿಲ್ಲಾಧ್ಯಕ್ಷ ಸಂದೀಪ ಸಿಂಗನೋಡಿ, ಬಿಜೆಪಿ ಮುಖಂಡರಾದ ಬಂಡೇಶ ವಲ್ಕಂದಿನ್ನಿ, ಶಂಕರ್‌ರೆಡ್ಡಿ, ಭರತ, ಉದಯಕಿರಣ, ಜಯಕುಮಾರ್ ದೇಸಾಯಿ ಕಾಡ್ಲೂರು, ಮಹೇಶ, ಮಾರೆಪ್ಪ, ಶಿವಕುಮಾರ್, ಉದಯ್ ಸೇರಿದಂತೆ ಅನೇಕರಿದ್ದರು.

ಫೋಟೋ:೨೫ಅರ್‍ಸಿಅರ್೧-ನಗರದ ಲಲಿತ ಹಿರಿಯ ನಾಗರಿಕರ ಮನೆಯಲ್ಲಿ ಅಟಲ್‌ಜಿ ಜನ್ಮ ದಿನಾಚರಣೆ ಆಚರಿಸಲಾಯಿತು.