ದೇಶ ಕಂಡ ಧೀಮಂತ ನಾಯಕ ವಾಜಪೇಯಿ: ಟೆಂಗಿನಕಾಯಿ

ಹುಬ್ಬಳ್ಳಿ,ಡಿ 25: ನಗರದ ದೇಶಪಾಂಡೆನಗರದ ಬಿಜೆಪಿ ಕಛೇರಿಯಲ್ಲಿ ಹು-ಧಾ ಮಹಾನಗರ ಜಿಲ್ಲಾ ಬಿಜೆಪಿ ವತಿಯಿಂದ ಮಾಜಿ ಪ್ರಧಾನಿ, ಅಜಾತಶತ್ರು ದಿ.ಅಟಲ್ ಬಿಹಾರಿ ವಾಜಪೇಯಿಯವರ 98 ನೇ ಜನ್ಮದಿನ ಆಚರಣೆಯನ್ನು ಇಂದು ಬಿಜೆಪಿ ರಾಷ್ಟ್ರಾದ್ಯಂತ ಸುಶಾಸನ ಹಾಗೂ ರೈತ ಸ್ಮರಣೆದಿನ ಎಂದು ಆಚರಿಸಲಾಯಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶಕಂಡ ಅದ್ಬುತ ನಾಯಕ. ಮಾದರಿ ವ್ಯಕ್ತಿತ್ವ ಹೊಂದಿದ್ದ ಅವರು ಆಡಳಿತದಲ್ಲಿ ತಮ್ಮದೇ ಚಾಪು ಮೂಡಿಸಿದ ಧೀಮಂತ ನಾಯಕರಾಗಿದ್ದರು. ದೇಶಾದ್ಯಂತ ಸುವರ್ಣ ಚತುಷ್ಪತ ರಸ್ತೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಹಾಗೂ ಮತ್ತಿತರ ಅಮೋಘ ಸುಧಾರಣೆಗಳನ್ನು ತಂದವರು. ದೇಶವಿದೇಶಗಳಲ್ಲಿ ವಾಜಪೇಯಿಯವರ ಅಭಿಮಾನಿಗಳು ಇದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿಭಾಗ ಪ್ರಭಾರಿ ಲಿಂಗರಾಜ ಪಾಟೀಲ, ಗ್ರಾ.ಜಿಲ್ಲಾಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಜಿ.ಪ್ರ.ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಜಿಲ್ಲಾ ವಕ್ತಾರ ರವಿ ನಾಯಕ, ರಾಜ್ಯ ಮಾಧ್ಯಮ ಸಮಿತಿ ಸದಸ್ಯರಾದ ಸಿದ್ದು ಮೊಗಲಿಶೆಟ್ಟರ, ಕೃಷ್ಣ ಗಂಡಗಾಳೇಕರ, ತೊಟಪ್ಪ ನೀಡಗುಂದಿ, ಪ್ರಶಾಂತ ಹಾವಣಗಿ, ಇರ್ಫನ್ ಶೇಖ್, ಮಲ್ಲಪ್ಪ ಶಿರಕೋಳ, ಮುರಗೇಶ ಹೊರಡಿ, ನಿಂಗರಾಜ ಮುಂದಿನಮನಿ, ಮೊದಲಾದವರು ಉಪಸ್ಥಿತರಿದ್ದರು.