ದೇಶ ಕಂಡ ಅಪ್ರತಿಮ ನಾಯಕ ಸರ್ ಸಿದ್ದಪ್ಪ ಕಂಬಳಿ : ದೊಡ್ಡವಾಡ


ಹುಬ್ಬಳ್ಳಿ,ಎ.26: ಭಾರತ ದೇಶವು ಇಂದು ವಿಶ್ವ ಗುರುವಿನಂತೆ ಕಂಗೊಳಿಸುತ್ತಿರುವುದರ ಹಿಂದೆ ಅನೇಕ ಮಹನೀಯರ ಶ್ರಮವಿದೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ವಕ್ತಾರ ಗಂಗಾಧರ ದೊಡ್ಡವಾಡ ಹೇಳಿದರು.
ಅವರು ನಗರದ ಸರ್. ಸಿದ್ದಪ್ಪ ಕಂಬಳಿ ಮಾರ್ಗದಲ್ಲಿ ಮಹಾನಗರಪಾಲಿಕೆ ಆವರಣದಲ್ಲಿರುವ ಸರ್. ಸಿದ್ದಪ್ಪ ಕಂಬಳಿ ಅವರ ಪುಣ್ಯಸ್ಮರಣೆಯ ಅಂಗವಾಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಸರ್ ಸಿದ್ದಪ್ಪ ಕಂಬಳಿ ಅವರು ಅತ್ಯಂತ ಕಡುಬಡತನದಲ್ಲಿ ಹುಬ್ಬಳ್ಳಿಯಲ್ಲಿ ಜನಿಸಿ ದೆಹಲಿಯವರೆಗೆ ತಮ್ಮ ವಿದ್ವತ್ತನ್ನು ವಿಸ್ತರಿಸಿದರು ಎಂದು ಹೇಳಿದರು. ಸ್ವಾತಂತ್ರ್ಯಪೂರ್ವದ ಮುಂಬೈ ಸರ್ಕಾರದಲ್ಲಿ ಅರಣ್ಯ, ಕೃಷಿ ,ಸಹಕಾರ, ಸಚಿವರಾಗಿ ಅನುಪಮ ಸೇವೆಗೈದಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸರ್. ಸಿದ್ದಪ್ಪ ಕಂಬಳಿ ಅವರ ಸಮೀಪದ ಒಡನಾಡಿಯಾಗಿದ್ದರು ಎಂದು ಹೇಳಿದರು.
ಸಮಾರಂಭದ ಸಾನಿಧ್ಯವನ್ನು ಹಳೇಹುಬ್ಬಳ್ಳಿ ರಾಜ ವಿದ್ಯಾಶ್ರಮದ ಷ.ಬ್ರ.ಶ್ರೀ. ಷಡಕ್ಷರಿ ಮಹಾಸ್ವಾಮಿಗಳವರು ವಹಿಸಿದ್ದರು. ಈ ಸಂದರ್ಭದಲ್ಲಿ ರೈತ ಮುಖಂಡರಾದ ವಿರುಪಾಕ್ಷಪ್ಪ ಕಳ್ಳಿಮನಿ, ಯುವ ಮುಖಂಡರಾದ ಶಿವಾನಂದ ಮಾಯಕಾರ, ಕಲ್ಲಪ್ಪ ಶಿಶುವಿನಹಳ್ಳಿ, ಶಿವಶಂಕರ ಗಚ್ಚಿನವರ, ಡಾ. ಬಸವ ಕುಮಾರ ತಲವಾಯಿ ಮುಂತಾದವರು ಭಾಗವಹಿಸಿದ್ದರು.