ದೇಶ ಕಂಡ ಅತ್ಯುತ್ತಮ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್

ಶಹಾಬಾದ:ಜು.28: ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್ ನಿಜಕ್ಕೂ ದೇಶ ಕಂಡ ಅತ್ಯುತ್ತಮ ದೇಶಭಕ್ತ ಎಂದು ಶಿವಾನಂದ ಪಾಟೀಲ ಹೇಳಿದರು.

ಅವರು ನಗರದ ಚಂದ್ರಶೇಖರ ಆಜಾದ್ ವೃತ್ತದಲ್ಲಿ ಆಯೋಜಿಸಲಾದ ಚಂದ್ರಶೇಖರ ಆಜಾದ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಚಂದ್ರಶೇಖರ್ ಆಜಾದ್ ಅವರ ಜೀವನ ಮಾತ್ರವಲ್ಲ ಅವರ ಮರಣವೂ ಸಹ ಎಲ್ಲರಿಗೂ ಸ್ಪೂರ್ತಿದಾಯಕ

1919ರಲ್ಲಿ ಜಲಿಯಾನ್ ವಾಲಾ ಬಾಗ್ ಹತ್ಯಾಕಾಂಡದ ವಿರುದ್ಧ ಪ್ರತೀಕಾರಕ್ಕೆ ಹಾತೊರೆಯುತ್ತಿದ್ದ ಆಜಾದ್ ಅವರು ಸರ್ಕಾರಿ ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಕೋರ್ಟ್ ಕಟಕಟೆ ಏರಿದಾಗ, ತಮ್ಮ ಹೆಸರು ಆಜಾದ್ ಎಂದು ನ್ಯಾಯಾಧೀಶರ ಮುಂದೆ ಘೋಷಿಸಿದರು. ಹಿಂದೂಸ್ತಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ ಎಂಬ ಸಂಘವನ್ನು ಆರಂಭಿಸಿದ ಅಜಾದ್ ಅವರ ಜತೆಗೆ ಭಗತ್ ಸಿಂಗ್, ಸುಖ್ ದೇವ್, ಬಟುಕೇಶ್ವರ್ ದತ್, ರಾಜ್ ಗುರು ಸಾಥ್ ನೀಡಿದರು.ಸ್ವಾತಂತ್ರ್ಯವನ್ನು ಪಡೆಯಲು ಸಾಕಷ್ಟು ಶ್ರಮಿಸಿದರು.

1925ರ ಕಾಕೋರಿ ರೈಲು ಡಕಾಯತಿಯಲ್ಲಿ ಭಾಗವಹಿಸಿದ ಆಝಾದ್, ಆ ಮೊಕದ್ದಮೆಯಲ್ಲಿ 9 ಆರೋಪಿಗಳಲ್ಲಿ ಪೆÇಲೀಸರ ಕೈಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿ. ಆದರೆ ಮುಂದೊಂದು ದಿನ ತಮಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಆಜಾದ್‍ರನ್ನು ಪೆÇಲೀಸರ ವಾಂಟೆಡ್ ಲಿಸ್ಟ್’ನಲ್ಲಿ ಸೇರಿಸಿ ಬ್ರಿಟಿಷರು, ಜೀವಂತವಾಗಿ ಅಥವಾ ಕೊಂದಾದರೂ ಸರಿ ಅವರನ್ನು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದರು.

1931ರ ಫೆಬ್ರವರಿ 27ರಂದು ಅಲಹಾಬಾದ್‍ನ ಆಲ್‍ಫ್ರೆಡ್ ಪಾರ್ಕ್‍ಗೆ ಆಜಾದ್ ಬರುವ ಸುಳಿವನ್ನು ಪಡೆದ ಬ್ರಿಟಿಷ್ ಪೆÇಲೀಸರು ಪಾರ್ಕನ್ನು ಸುತ್ತುವರಿದು, ಅಜಾದ್‍ಗೆ ತಮ್ಮ ವಶವಾಗುವಂತೆ ಎಚ್ಚರಿಸಿದರು. ಆದರೆ, ಬ್ರಿಟೀಷರ ಎಚ್ಚರಿಕೆಗೆ ಮಣಿಯದ ಆಜಾದ್, ವೀರನಂತೆ ಹೋರಾಡಿ ಮೂವರು ಪೆÇಲೀಸರನ್ನು ಬಲಿ ತೆಗೆದುಕೊಂಡರು. ಏಕಾಂಗಿಯಾಗಿದ್ದರೂ ಎದುರಾಳಿಗಳಿಗೆ ತಕ್ಕ ಉತ್ತರ ನೀಡಿದರು. ಅಜಾದರಿಗೆ ತನ್ನ ಪಿಸ್ತೂಲಿನಲಿದ್ದ ಗುಂಡುಗಳ ಲೆಕ್ಕವಿತ್ತು. ಅಂತಹ ಆತಂಕದ ಪರಿಸ್ಥಿತಿಯಲ್ಲಿಯು ಅವರ ಸಮಯ ಪ್ರಜ್ಞೆ ಕಾರ್ಯ ಪ್ರವೃತವಾಗಿತ್ತು. ಬಾಲ್ಯದಲ್ಲಿ ತಾನೇ ಹೇಳಿದಂತೆ “ನನ್ನ ಜೀವಂತ ದೇಹದ ಮೇಲೆ ಕೈ ಹಾಕುವ ಪೆÇಲೀಸ್ ಇನ್ನೂ ಜನ್ಮ ತಾಳಿಲ್ಲ. ಆಜಾದ್ ಹೀ ರಹೇಂಗೆ.. ಆಜಾದ್ ಹೀ ಮರೇಂಗ್” ಎನ್ನುತ್ತ ತನ್ನ ಪಿಸ್ತೂಲಿನಲಿದ್ದ ಕೊನೆಯ ಗುಂಡನ್ನು ತನ್ನ ತಲೆಗೆ ಗುರಿಯಾಗಿಸಿಟ್ಟುಕೊಂಡರು. ಯಾವ ಪರಕೀಯ ಸೈನಿಕನಿಗೂ ಶರಣಾಗದೆ ತಮ್ಮ ತಲೆಗೆ ಗುಂಡು ಹೊಡೆದುಕೊಂಡು ಭಾರತ ಮಾತೆಯ ಮುಡಿಗೆ ತಮ್ಮ ಪ್ರಾಣ ಅರ್ಪಿಸಿದರು ಎಂದು ಹೇಳಿದರು.

ಶರಣಯ್ಯ ಮಠಪತಿ,ಬಸವರಾಜ ಸಾತ್ಯಾಳ, ಸುಭಾಷ ಜಾಪೂರ,ಔಡಂಬರ ಜವಳೆ,ಬಸವರಾಜ ಕಾಕಡೆ, ಶಿವಾಜಿ ಪವಾರ,ಉದಯಕುಮಾರ, ಶರಣು ತುಂಗಳ, ಸಚಿನ್ ಹಂಚಾಟೆ,ಗೋವಿಂದ ಕುಸಾಳೆ, ಬಾಬುರಾವ ತಳವಾರ,ವಿನಯ ಗೌಳಿ ಇತರರು ಇದ್ದರು.