ದೇಶ ಒಗ್ಗೂಡಿಸುವಲ್ಲಿ ಹಿಂದಿ ಭಾಷೆ ಪಾತ್ರ ಅನನ್ಯಃ ಡಾ.ಎಸ್.ಜೆ.ಜಾಹಗೀರದಾರ

ವಿಜಯಪುರ, ಸೆ.16-ದೇಶದಲ್ಲಿ ಏಕತೆಯನ್ನು ಸಾರಿದ ಅಲ್ಲದೆ ಅತ್ಯಧಿಕವಾಗಿ ಬಳಸಲ್ಪಡುವ ಭಾಷೆ ಅದು ಹಿಂದಿ ಭಾಷೆ. ದೇಶದ ಏಳಿಗೆಗೆ ಶ್ರಮಿಸಿದ ಪ್ರಮುಖ ರಾಷ್ರ್ಟಭಾಷೆ ಅದು ಹಿಂದಿ ಭಾಷೆಯಾಗಿದೆ. ಆಧುನಿಕ ಯುಗದಲ್ಲಿ ಭಾಷೆಯ ಮಹತ್ವವನ್ನು ತಿಳಿದುಕೊಳ್ಳಬೇಕಾಗಿದೆ ಎಂದು ಮುಖ್ಯ ಅತಿಥಿ ಡಾ.ಎಸ್.ಜೆ.ಜಾಹಗೀರದಾರ ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಿಂದಿ ದಿವಸ್ ಕಾರ್ಯಮದಲ್ಲಿ ಮಾತನಾಡಿದ ಅವರು ದೇಶದಲ್ಲಿ ಪ್ರಮುಖ ಭಾಷೆಯಾಗಿ ಬಳಸಲಾಗುತ್ತಿದೆ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶದ ಒಗ್ಗಟ್ಟನ್ನು ಸಾಧಿಸಲು ಹಿಂದಿ ಭಾಷೆಯು ಪ್ರಮುಖ ಪಾತ್ರ ವಹಿಸಿದೆ. ಸಾವಿರಾರು ವರ್ಷಗಳ ಇತಿಹಾಸ ಇರುವ ಈ ಭಾಷೆಗೆ ಸಮಾಜದಲ್ಲಿ ಅತಿ ಹೆಚ್ಚು ಬಳಸಲ್ಪಡುವ ಭಾಷೆಯಾಗಿ ಹೊರಹೊಮ್ಮಿದೆ. ಆಧುನಿಕ ಯುಗದಲ್ಲಿ ಭಾಷೆಯ ಆಧುನೀಕರಣವಾದಂತೆ ಹೊಸತನವನ್ನು ತನ್ನ ದಾಗಿಸಿಕೊಳ್ಳುತ್ತಿದೆ. ಅತ್ಯಂತ ಸರಳಭಾಷೆಯಾಗಿದ್ದು ವ್ಯವಹಾರಿಕ ಅತ್ಯಧಿಕವಾಗಿ ಬಳಸಲಾಗುತ್ತಿದೆ. ದೇಶದ ಅಖಂಡತೆ ಹಾಗೂ ಏಕತೆ ಸಾರುವಲ್ಲಿ ಪ್ರಮುಖ ಪಾತ್ರವಹಸಿದೆ ಎಂದು ಹೇಳಿದರು.
ಹಿಂದಿ ಭಾಷೆಯು ರಾಜ್ಯಗಳನ್ನು ಒಗ್ಗೊಡಿಸುವ ಪ್ರಯತ್ನ ಮಾಡಿದೆ. ವಿದ್ಯಾರ್ಥಿಗಳಿಗೆ ಆಧುನಿಕಯುಗದಲ್ಲಿ ಸರ್ಕಾರದ ಮಟ್ಟದಲ್ಲಿ ಹಿಂದಿ ಭಾಷೆ ಒಳಗೊಂಡಿದೆ ಅದರಂತೆ ವಿವಿಧ ಉದ್ಯೋಗ ಅವಕಾಶಗಳುಂಟು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯರಾದಡಾ. ಯು.ಎಸ್‍ಪೂಜೇರಿ, ಉಪಪ್ರಾಚಾರ್ಯರಾದ ಪ್ರೊ.ಬಿ.ಎಸ್.ಬಗಲಿ, ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಬಿ ಪಾಟೀಲ, ಐಕ್ಯೂಎಸಿ ನಿರ್ದೇಶಕರು ಡಾ.ಪಿ.ಎಸ್.ಪಾಟೀಲ, ಸಂಯೋಜಕರು ಡಾ.ಕೆ.ಮಹೇಶ್ ಕುಮಾರ, ಪ್ರೊ.ಜಿ.ಎಂಗೇಂಡ್, ಪ್ರೊ. ರಶ್ಮಿ ಪಾಟೀಲ, ಡಾ.ಉಷಾದೇವಿ ಹಿರೇಮಠ,ಪ್ರೊ.ಜಯಶ್ರೀ ಬಿರಾದಾರ ಡಾ.ವಾಯ್ ತಮ್ಮಣ್ಣ, ಪ್ರೊ.ಬಿ.ಎಸ್.ಬೆಳಗಲಿ, ಪ್ರೊ.ರಾಜೇಶ್ವರಿ ಪುರಾಣಿಕ, ಪ್ರೊ,ಜೆ.ಬಿ.ಬಿರಾದಾರ. ಮಹಾವಿದ್ಯಾಲಯದ ಎಲ್ಲಬೋಧಕ ಸಿಬ್ಬಂದಿ ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.