ದೇಶ ಅಭಿವೃದ್ಧಿ ಆಗಬೇಕಾದರೆ ಮೊದಲು ರೈತರ ಅಭಿವೃದ್ಧಿ ಆಗಬೇಕು: ದಯಾನಂದ ಪಾಟೀಲ್

ಕಲಬುರಗಿ,ಮಾ.3-ಭಾರತ ದೇಶ ಅಭಿವೃದ್ಧಿ ಆಗಬೇಕಾದರೆ ಮೊದಲು ರೈತರ ಅಭಿವೃದ್ಧಿ ಆಗಬೇಕು” ಎಂದು ನವ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷರಾದ ದಯಾನಂದ ಪಾಟೀಲ್ ನುಡಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ನವ ಕರ್ನಾಟಕ ರೈತರ ಸಂಘ ಕೇಂದ್ರ ಕಚೇರಿ ಕಲಬುರ್ಗಿ ಹಾಗೂ ಬೆಂಗಳೂರು ಇವರುಗಳ ಸಂಯೋಗದಲ್ಲಿ ನಡೆದ ಮೂರು ರಾಷ್ಟ್ರೀಯ ಕಿಸಾನ್ ಸಮನ್ವಯ ಸಮೂಹದ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಭಾರತ ದೇಶ ಅಭಿವೃದ್ಧಿ ಆಗಬೇಕಾದರೆ ಮೊದಲು ರೈತರ ಅಭಿವೃದ್ಧಿ ಆಗಬೇಕು” ಆಗ ಗ್ರಾಮ ಕೂಡ ಸ್ವರಾಜ್ಯ ಆಗುವುದೆಂದು ತಿಳಿಸಿದರು
ಮಹಾರಾಷ್ಟ್ರದ ಅಶೋಕ್ ಅವರು ಮಾತನಾಡಿ ಗ್ರಾಮ ಸಭೆಯ ಬಗ್ಗೆ ಗ್ರಾಮ ಸ್ವರಾಜ್ಯದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಗ್ರಾಮ ಪಂಚಾಯಿತಿಯಲ್ಲಿ ರೈತರು ಪ್ರತಿ ದಿನ ಯಾವ ಯಾವ ಬೆಳೆಗಳಿಗೆ ಎಲ್ಲೆಲ್ಲಿ ಏನೇನು ನಿಗದಿತ ಬೆಲೆ ಇದೆ ಎಂದು ರೈತರು ತಿಳಿದುಕೊಳ್ಳಬೇಕು. ಹಾಗೆಯೇ ಪ್ರತಿ ಒಂದು ಗ್ರಾಮ ಪಂಚಾಯಿತಿಯಲ್ಲಿ ಮಾರ್ಕೆಟ್ ಡಿಜಿಟಲ್ ವ್ಯವಸ್ಥೆ ಆಗಬೇಕೆಂದು ತಿಳಿಸಿದರು. ಗ್ರಾಮಸ್ವರಾಜ್ಯ ಜಾರಿಗೆ ಆಗಬೇಕಾದರೆ ಮೊದಲು ಎಲ್ಲಾ ಜನರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಚರಂಡಿಗಳ ವ್ಯವಸ್ಥೆ ಸುವ್ಯಸ್ತಿತವಾಗಿ ಆಗಬೇಕು. ಗ್ರಾಮದಲ್ಲಿ ನಡೆಯುವ ಗ್ರಾಮ ಸಭೆಗೆ ಎಲ್ಲಾ ಜನರು ಭಾಗವಹಿಸಬೇಕು, ಆ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಬರಬೇಕು. ಗ್ರಾಮದಲ್ಲಿ ರೈತ ಮಾರ್ಕೆಟ್ ಬಗ್ಗೆ ಡಿಜಿಟಲ್ ವ್ಯವಸ್ಥೆ ಆಗಬೇಕು. ನೆರೆಗಾ ಯೋಜನೆ ಎಲ್ಲಿ ನಡೆಯುತ್ತದೆಯೊ ಅಲ್ಲಿ ಗ್ರಾಮದ ಅಭಿವೃದ್ಧಿ ಆಗುವುದೆಂದು ತಿಳಿಸಿದರು. ನಂತರ ತಮಿಳುನಾಡಿನಿಂದ ವಿಮಲ್ ಸುಂದರಂ ಅವರು ಮಾತನಾಡಿ ಗ್ರಾಮ ಸಭೆಗೆ ಎಲ್ಲಾ ಸದಸ್ಯರು ಸರಿಯಾಗಿ ಭಾಗವಹಿಸದೆ ಇದ್ದರೆ ಯಾವುದೇ ಕಾರ್ಯಕ್ರಮ ಸರಿಯಾದ ಫಲಾನುಭವಿಗಳಿಗೆ ಹೋಗುವುದಿಲ್ಲ. ಆದ್ದರಿಂದ ಮೊದಲು ಆಯಾ ಗ್ರಾಮಗಳಲ್ಲಿ ಗ್ರಾಮ ಸಭೆಯಲ್ಲಿ ಎಲ್ಲರು ತಪ್ಪದೆ ಭಾಗವಹಿಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಗಾಂಧಿವಾದಿ ಅಮರನಾಥ ಬಾಯಿ , ರಾಷ್ಟ್ರೀಯ ಕಿಸಾನ್ ಸಮನ್ವಯ ಸಮಿತಿ ಅಧ್ಯಕ್ಷ ದಶರಥ್ ಬಾಬು, ಒರಿಸ್ಸಾದ ಡಾ.ವಿಶ್ವಜಿತ್ , ಛತ್ತಿಸಗಡದ ವಿಜಯ ಬಾಬು, ಮಧ್ಯಪ್ರದೇಶದ ವಿರುಪಾನ್ ಶಾಸ್ತ್ರಿ, ಮಹಾರಾಷ್ಟ್ರದ ಅಶೋಕ್ ಶಬ್ಬಾನ್, ಜೈಪುರದ ಗೋಪಾಲ್ ಮೋದಾನಿ , ಹರಿಯಾಣದ ಟಿ ಕೆ ಶರ್ಮಾ, ವಿಕಲ್ ಪುಚಾರ್ , ಕರ್ನಾಟಕದ ಸಿದ್ದರಾಮ ಪಾಟೀಲ್ , ತಮಿಳುನಾಡಿನ ಸುರೇಂದ್ರ ವಿಮಲ್, ಮಹಾರಾಷ್ಟ್ರದ ಶಿವಾಜಿ ಬಾಲೆಕಾರ್, ಪಂಜಾಬ್‍ನ ದಲಿಜಿತ್ ಕೋರೆ, ಬಂಧು ತಾಟಿ, ಪುಷ್ಪ ಯಾದವ್ ಅವರು ಭಾಗವಹಿಸಿದ್ದರು.