ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯ ಏರಿಕೆ

ನವದೆಹಲಿ,ಜ.19-ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆ 2021 ಕ್ಕೆ ಹೋಲಿಸಿದರೆ 2022 ರಲ್ಲಿ 47.05 ರಷ್ಟು ಹೆಚ್ಚಾಗಿದೆ ಎಂದು ಭಾರತೀಯ ನಾಗರಿಕ ವಿಮಾನ ಮಹಾನಿರ್ದೇಶನಾಲಯ ತಿಳಿಸಿದೆ.2022ರಲ್ಲಿ 1232.45 ಲಕ್ಷ ದೇಶೀಯ ವಿಮಾನ ಪ್ರಯಾಣಿಕರ ದೇಶದ ವಿವಿಧ ಭಾಗಗಳಿಗೆ ವಿಮಾನದ ಮೂಲಕ ಸಂಚಾರ ಮಾಡಿದ್ದಾರೆ.2021ಕ್ಕೆ ಹೋಲಿದರೆ ಶೇ.47.05 ರಷ್ಟು ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ ಎಂದು ಡಿಜಿಸಿಎ ತಿಳಿಸಿದೆ.2021ರಲ್ಲಿ 838.14 ಲಕ್ಷ ವಿಮಾನ ಪ್ರಯಾಣಿಕರು ದೇಶಾದ್ಯಂತ ಸಂಚಾರ ಮಾಡಿದ್ದರು. 2022ರಲ್ಲಿ ಈ ಸಂಖ್ಯೆ ಗಣನೀಯ ಎರಿಕೆಯಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.ವಿಮಾನ ಪ್ರಯಾಣಿಕರ ಸಂಖ್ಯೆ ತಿಂಗಳಿಂದ ತಿಂಗಳಿಗೆ ಶೇ.13.69 ರಷ್ಟು ಹೆಚ್ಚಾಗಿದೆ ಎಂದು ವಿಮಾನಯಾನ ಮಹಾ ನಿರ್ದೇಶನಾಲಯ ಹೇಳಿದೆ.ಅದರಲ್ಲಿಯೂ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಏರ್ ಇಂಡಿಯಾ, ಸ್ಪೇಸ್ ಜೆಟ್, ಗೋ ಫಸ್ಟ್, ಇಂಡಿಗೋ ಆಕಾರ್ಶ ಏರ್, ಏರ್ ಏಶಿಯಾ, ವಿಸ್ತಾರ 2022ರ ನವಂಬರ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಶೇ.13.69 ರಷ್ಟು ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ ಎಂದು ಡಿಜಿಸಿಎ ತಿಳಿಸಿದೆ.ಇಂಡಿಗೋ ಏರ್ ಶೇ.56.1 ರಷ್ಟು ಪ್ರಗತಿ ಸಾಧಿಸಿದರ ವಿಸ್ತಾರ ಶೇ.9.2 ಸ್ಪೇಸ್ ಜೆಟ್ ಶೇ.8.7 ಮಾರುಕಟಟೆ ಪಾಲು ತನ್ನದಾಗಿಸಿಕೊಂಡಿವೆ ಎಂದು ತಿಳಿಸಲಾಗಿದೆ.ಇದೇ ವೇಳೆ 408 ಮಂದಿ ಪ್ರಯಾಣಿಕರ ವಿರುದ್ದ ವಿವಿಧ ದೂರುಗಳು ದಾಖಲಾಗಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.