ದೇಶೀಯ ಲಸಿಕೆ ಮತ್ತಷ್ಟು ವಿಳಂಬ

ನವದೆಹಲಿ/ಮುಂಬೈ.ನ.೨೦- ದೇಶದಲ್ಲಿ ಸ್ಥಳೀಯ ಉತ್ಪಾದಕರ ಮೇಲೆ ಮಾತ್ರ ಭಾರತ ಅವಲಂಬಿತವಾಗಿರುವುದರಿಂದ ಕೊರೊನಾ ಲಸಿಕೆ ಲಭ್ಯವಾಗುವುದು ವಿಳಂಬವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ದೇಶಿಯವಾಗಿ ಉತ್ಪಾದನೆಯಾಗುವ ಲಸಿಕೆಯನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ದೇಶವು ೨ ಶತಕೋಟಿ ಡೋಸ್ ಲಸಿಕೆಗಳನ್ನು ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದ್ದು, ದೇಶೀಯವಾಗಿ ಉತ್ಪಾದನೆಯಾಗುವ ಲಸಿಕೆಗಳನ್ನು ಖರೀದಿಸಲು ಮುಂದಾಗಿದ್ದು, ಜಾಗತಿಕ ಮಟ್ಟದ ಔಷಧ ಉತ್ಪಾದಕರಿಂದ ಖರೀದಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ನಿನ್ನೆ ಹೇಳಿಕೆ ನೀಡಿ ಔಷಧ ಕಂಪನಿಗಳ ಜತೆ ಮಾತುಕತೆ ನಡೆಸಿದ್ದು, ೨೦೨೧ರ ವೇಳೆಗೆ ೫೦೦ ದಶಲಕ್ಷ ಡೋಸ್‌ಗಳನ್ನು ಖರೀದಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಈ ಲಸಿಕೆಗಳು ವಿಳಂಬವಗುತ್ತಿರುವುದರಿಂದ ದೇಶೀಯವಾಗಿ ಅಭಿವೃದ್ಧಿಯಾಗುವ ಲಸಿಕೆಯತ್ತ ಕೇಂದ್ರ ಸರ್ಕಾರ ಕಾಯೋನ್ಮುಖವಾಗಿದೆ.
ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್-೫ ಲಸಿಕೆಯನ್ನು ಪಡೆದುಕೊಳ್ಳುವ ಸಂಬಂಧ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ.
ಪಿಫ್ಜರ್ ಮತ್ತು ಮಾಡೆರ್‌ನ ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿದ್ದು, ಈ ವರ್ಷಾಂತ್ಯದ ವೇಳೆಗೆ ಲಭ್ಯವಾಗಲಿದೆ.
ಅಮೆರಿಕ, ಕೆನಡಾ, ಜಪಾನ್ ಹಾಗೂ ಯುರೋಪ್ ಒಕ್ಕೂಟಗಳು ಈ ಕಂಪನಿಗಳಿಂದ ಲಸಿಕೆ ಖರೀದಿಸಲು ಮುಂದಾಗಿವೆ.