ದೇಶಿ ಕ್ರೀಡೆಗೂ ಆದ್ಯತೆ ನೀಡಿ: ಶಾಸಕ ಶರಣಬಸಪ್ಪಗೌಡ ದರ್ಶನಾಪುರ

ಶಹಾಪುರ : ಮಾ.7: ಶಹಾಪುರ ಕ್ಷೇತ್ರದ ಸುರಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ
ನಡೆದ ಕ್ರಿಕೆಟ್ ಪಂದ್ಯಗಳಿಗೆ ಉಧ್ಘಾಟಿಸಿದ ಮಾಜಿ ಮಂತ್ರಿಗಳು ಹಾಲಿ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು.
ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಯುವಕರು ದೇಶಿ ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದು ಶಾಸಕರು ತಿಳಿಸಿದರು.
ಜೈನಾಪುರ ಗ್ರಾಮದ ಯುವಕರು ಮತ್ತು ಶರಣಬಸಪ್ಪಗೌಡ ದರ್ಶನಾಪುರ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರಿಕೆಟ್ ಜೊತೆಗೆ ದೇಶಿಯ ಆಟಗಳಿಗೂ ಪೆÇ್ರೀತ್ಸಾಹ ನೀಡಬೇಕು, ಇಂತಹ ಕಾರ್ಯಕ್ರಮಗಳು ಅತಿ ಹೆಚ್ಚಾಗಿ ಜರುಗುವುದರಿಂದ ಪ್ರತಿಭೆಗಳನ್ನು ಗುರುತಿಸಬಹುದು ಎಂದು ಹೇಳಿದರು.
ಈಗಿನ ಕಂಪ್ಯೂಟರ್ ಯುಗದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿದೆ. ಯುವಕರು ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಇತರರಿಗೆ ಮಾದರಿಯಾಗಬೇಕು ಕ್ರೀಡಾ ಮನೋಭಾವದಿಂದ ಹಾಡಬೇಕು ಎಂದರು.ಹೇಳಿದರು ಈ ಸಂದರ್ಭದಲ್ಲಿ
ಬಸವರಾಜ ಎಸ್ ಪಾಟೀಲ ಚಿಂಚೋಳಿ, ಬಸನಗೌಡ ಪಾಟೀಲ ಹೊಸಮನಿ ಯಾಳಗಿ, ಕೆಂಭಾವಿ ಪಿಎಸ್‍ಐ ಹಣಮಂತರಾಯ ಬಂಕಲಿಗಿ,ಅಮೀನರೆಡ್ಡಿ ಬಿರಾದಾರ ಕಿರದ್ದಳ್ಳಿ, ಸಿದ್ದಣ್ಣ ಚಾಮನೂರ, ಮಹಾದೇವ ಮಾನಪ್ಪ ಸೂಗೂರಸಾಲಿಮನಿ,ದೊಡ್ಡಪ್ಪಗೌಡ ಬಿರಾದಾರ ಜೈನಾಪುರ ಲಾಳೆಪಟೇಲ್ ಹೆಗ್ಗನದೊಡ್ಡಿ ಶಿವಕಾಂತ ರೈಟರ್, ದೇವೀಂದ್ರಪ್ಪ ದೊರಿ,ಲಾಲು ಚವ್ಹಾಣ, ಧರ್ಮೀಬಾಯಿ ರಾಠೋಡ, ಮಡಿವಾಳಪ್ಪ ಪಾಟೀಲ್ ಹೆಗ್ಗನದೊಡ್ಡಿ ಸಂಗಮೇಶ ಪ್ರಶಾಂತ ಬಿರಾದಾರ, ಕಾರ್ಯಕ್ರಮವನ್ನು ಲೋಹಿತ ಅವರು ನಿರೂಪಿಸಿದರು ಜೈನಾಪುರ ಗ್ರಾಮದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು
ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕ್ರೀಡಾಪಟು ಸೇರಿದಂತೆ ಯುವಕರು, ಮುಖಂಡರು ಹಾಗೂ ಮುಂತಾದವರು ಉಪಸ್ಥಿತರಿದ್ದರು.