ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸಿ : ಚಿದಾನಂದ ಸವದಿ

ಅಥಣಿ :ನ.5: ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಅಂತರ ರಾಜ್ಯಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿಗೆ ಬಿಜೆಪಿ ಯುವ ನಾಯಕ ಚಿದಾನಂದ ಸವದಿ ಅವರು ದೀಪ ಪ್ರಜ್ವಲಿಸುವ ಮಾಡುವ ಮೂಲಕ ಚಾಲನೆ ನೀಡಿದರು .
ಈ ವೇಳೆ ಕ್ರೀಡಾಪಟುಗಳನ್ನು ಉದ್ಧೇಶಿಸಿ ಮಾತನಾಡಿದ ಚಿದಾನಂದ ಸವದಿ ಕನ್ನಡ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸಲು, ಕ್ರೀಡಾಪಟುಗಳನ್ನು ಪೆÇ್ರೀತ್ಸಾಹಿಸಿ ಬೆಳೆಸುವ ಉದ್ದೇಶದೊಂದಿಗೆ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವ ಹೆಮ್ಮೆಯ ವಿಷಯ ವಾಗಿದೆ ಎಂದು ಗ್ರಾಮಸ್ಥರ ಕಾರ್ಯವನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿವೇಕ ನಾರಗೊಂಡ, ಅಶೋಕ ಅಮ್ಮಣಗಿ, ಕುಮಾರ ಸತ್ತಿಗೌಡರ, ಲಕ್ಷ್ಮಣ ಆಲೂರ, ಕುಮಾರ ಹೊರಟ್ಟಿ, ಗುರುರಾಜ ಪಾಟೀಲ, ಬ್ರಹ್ಮದೇವ ಹಳ್ಳೂರ ಹಾಗೂ ಉದ್ಯಮಿಗಳಾದ ಮಹಾಂತೇಶ ಠಕ್ಕಣ್ಣವರ, ಅಥಣಿ ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್‍ಐ ಶಿವಶಂಕರ ಮುಕರಿ, ಹಾರೂಗೇರಿ ಪಿಎಸ್‍ಐ ರಾಘವೇಂದ್ರ ಖೋತ ಸೇರಿದಂತೆ ಹಲವು ಗಣ್ಯರು ಹಾಗೂ ಗ್ಗ್ರಾಮಸ್ಥರು, ಕಬಡ್ಡಿ ಪಟುಗಳು ಪಾಲ್ಗೊಂಡಿದ್ದರು.