ದೇಶಿ ಆಹಾರ ಸಂಸ್ಕøತಿಯಲ್ಲಿದೆ ಆರೋಗ್ಯದ ಗುಟ್ಟು

ಕಲಬುರಗಿ:ಫೆ.4:ನಮ್ಮ ಪೂರ್ವಜರು ಕಷ್ಟಪಟ್ಟು ಬೆವರು ಸುರಿಸಿ ದುಡಿದು ಕೃಷಿ ಕಾಯಕ ಮಾಡುತ್ತಿದ್ದರು. ಅವರಿಗೆ ಆಹಾರ ಸಂಸ್ಕøತಿಯ ಬಗ್ಗೆ ಅಪಾರವಾದ ಜ್ಞಾನವಿತ್ತು. ರಾಸಾಯನಿಕ ವಿಷಮುಕ್ತ ಆಹಾರ ಸೇವೆನ, ಕೆಲಸ ಮಾಡುವುದರಿಂದ ಅವರ ದೇಹ ಗಟ್ಟಿಮುಟ್ಟಾಗಿ ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು. ವಿದೇಶ ಫಾಸ್ಟ್, ಜಂಕ್ ಪುಢ್ ಆಹಾರ ಸೇವನೆ ಮಾಡದೆ, ದೇಶಿಯ ಸಾವಯುವ ಆಹಾರ, ಸಿರಿಧಾನ್ಯಗಳ ಆಹಾರ ಉಪಯೋಗಿಸಬೇಕು. ದೇಶಿಯ ಆಹಾರ ಸಂಸ್ಕøತಿಯಲ್ಲಿ ನಮ್ಮ ಆರೋಗ್ಯದ ಗುಟ್ಟು ಅಡಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಪ್ರಗತಿಪರ ರೈತ ಕಾಶಿನಾಥ ಚೇಂಗಟಿ ಅವರ ಹೊಲದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಸಿಹಿತೆನೆ ಸಂಭ್ರಮ’ ಕಾರ್ಯಕ್ರವ’ದಲ್ಲಿ ಅವರು ಮಾತನಾಡಿದರು.
ರೈತ ದೇಶದ ಬೆನ್ನೆಲುಬು, ಸಮಾಜಕ್ಕೆ ಅನ್ನವನ್ನು ನೀಡಿ ಎಲ್ಲರನ್ನು ಬದುಕಿಸುವ ಅನ್ನದಾತ. ನಗರೀಕರಣ ಮತ್ತು ವಿದೇಶಿ ಸಂಸ್ಕøತಿಗೆ ಮಾರುಹೋಗಿ ದೇಶದ ಮೂಲ ಕಸಬಾದ ಕೃಷಿ ಕಾಯಕದಿಂದ ದೂರ ಸರಿಯುವುದು ಬೇಡ. ರೈತ ಕಷ್ಟಪಟ್ಟು ದುಡಿದು ಅದರ ಫಲ ಕೇವಲ ತಾನಷ್ಟೇ ಅಲ್ಲ, ಜೊತೆಗೆ ಸಮಾಜದೊಂದಿಗೆ ವಿನಿಯೋಗ ಮಾಡುವ ಕೃಷಿ ಸಂಸ್ಕøತಿ ಬಹಳ ದೊಡ್ಡದು. ಜೋಳ ಉತ್ತರ ಕರ್ನಾಟಕದ ಪ್ರಮುಖ ಆಹಾರ ಬೆಳೆಯಾಗಿದೆ. ರೈತರು ವಾಣಿಜ್ಯ ಬೆಳೆಗಳತ್ತ ಮುಖಮಾಡಿದ್ದರಿಂದ ಜೋಳದ ಉತ್ಪಾದನೆ ಕಡಿಮೆಯಾಗುತ್ತಿದೆ. ಇದರಿಂದ ಆಹಾರ, ದನ-ಕರುಗಳಿಗೆ ಮೇವಿನ ಕೊರೆತೆ ಕಂಡುಬರುತ್ತಿದೆ. ಸಿಹಿತೆನೆಯಲ್ಲಿ ಸಾಕಷ್ಟು ಪೌಷ್ಠಿಕಾಂಶಗಳಿದ್ದು ಅದರ ಸೇವನೆ ಅಗತ್ಯವಾಗಿದೆ. ಇಂಥಹ ಅಪರೂಪದ ಆಹಾರ ಸಂಸ್ಕøತಿಯ ಬಗ್ಗೆ ಮುಂದಿನ ಪೀಳಿಗೆಗೆ ಮುಟ್ಟಿಸುವ ಕಾರ್ಯವಾಗಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬಸಯ್ಯಸ್ವಾಮಿ ಹೊದಲೂರ ಅವರು ಕೃಷಿ ಸೊಗಡಿನ ಗೀತೆಗಳನ್ನು ಹಾಡಿದರು. ಪ್ರಗತಿಪರ ರೈತ ಕಾಶಿನಾಥ ಚೇಂಗಟಿ, ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್.ಬಿರಾದಾರ, ಸಮಾಜ ಸೇವಕ ಅಸ್ಲಾಂ ಶೇಖ್, ಉಪನ್ಯಾಸಕ ಅಮರನಾಥ ಶಿವಮೂರ್ತಿ, ರೈತರಾದ ಸುಷ್ಮಾ ಕೆ.ಚೇಂಗಟಿ, ತಿಪ್ಪಣ್ಣ ಚೇಂಗಟಿ, ಪ್ರಕಾಶ ಗುರುಸಿದ್ದಪ್ಪ, ಶಿವಶಂಕರ ಕೆ, ಶಿವಲಿಂಗಪ್ಪ ಟಿ. ಸೇರಿದಂತೆ ಇನ್ನಿತರರಿದ್ದರು.