ದೇಶಿಯ ಕ್ರೀಡೆಗಳು ವಿದ್ಯಾರ್ಥಿಗಳ ದೈಹಿಕ ಬೆಳವಣಿಗೆಗೆ ಪೂರಕ; ಬಿ.ವಾಮದೇವಪ್ಪ

ಸಂಜೆವಾಣಿ ವಾರ್ತೆ

 ದಾವಣಗೆರೆ ಆ 8; ಪಠ್ಯ ಚಟುವಟಿಕೆಗಳು ಕಲಿಕೆಯಲ್ಲಿ ಎಷ್ಟು ಮುಖ್ಯವೋ ಹಾಗೆಯೇ ಸಹಪಠ್ಯ ಚಟುವಟಿಕೆಗಳೂ ಮುಖ್ಯ. ಆಗಾದಾಗ ಕಲಿಕೆ ಯಲ್ಲಿ ದೃಢತೆಯನ್ನು ಕಾಣಬಹುದು. ಇದರಿಂದಾಗಿಯೇ ಇಂದು ದೇಶಿಯ ಕ್ರೀಡೆಗಳು ವಿದ್ಯಾರ್ಥಿಗಳ ಮಾನಸಿಕ ದೈಹಿಕ ಹಾಗೂ ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಕ ಸಾ ಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.ಅವರು ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ನಡೆದ, ವಿ. ಎಸ್. ಪ್ಯಾರಾ ಮೆಡಿಕಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕಾಲೇಜನ ಕ್ರೀಡೋತ್ಸವದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಭಾರತವು 135 ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ನಮ್ಮ ದೇಶದಲ್ಲಿ ಕ್ರೀಡಾಪಟುಗಳು ವಿಶ್ವದ ಎಲ್ಲಾ ಕ್ರೀಡಾಕೂಟಗಳಲ್ಲಿ  ಭಾಗವಹಿಸಿ ಅಗ್ರಸ್ಥಾನ ಪಡೆಯುವಂತಾಗಬೇಕೆಂದು ಆಶಿಸಿದರು. ಸರ್ಕಾರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳು  ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿದೆ ಎಂದು  ತಿಳಿಸಿದರು. ಮುಖ್ಯವಾಗಿ ನಮ್ಮ ದೇಶದ ಕ್ರೀಡೆಗಳು  ವಿದ್ಯಾರ್ಥಿಗಳ ಮಾನಸಿಕ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರತಿನಿತ್ಯ ಕ್ರೀಡಾ ಅಭ್ಯಾಸದಲ್ಲಿ  ಸ್ವಲ್ಪ ಹೊತ್ತಾದರೂ ತೊಡಗಿಕೊಳ್ಳಬೇಕು. ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯವೇ ವಿನಃ  ಸೋಲು -ಗೆಲುವು ಮುಖ್ಯವಲ್ಲ. ಸೋಲು ಗೆಲುವನ್ನು ಸಮಾನ ಮನಸ್ಸಿನಿಂದ ಸ್ವೀಕರಿಸಬೇಕು. ಇಂದಿನ ಸೋಲು ಮುಂದಿನ ಗೆಲುವಿನ ಮೆಟ್ಟಿಲು ಎಂದು ಭಾವಿಸಿಕೊಂಡು ಮುನ್ನಡೆಯಬೇಕೆಂದು ತಿಳಿಸಿದರು. ಸಂಸ್ಥೆಯ  ಮುಖ್ಯಸ್ಥ ರಂಗನಾಥ್ ಹಾಗೂ ಉಪನ್ಯಾಸಕರಾದ ಶಿಲ್ಪಾಚಾರ್ ಪ್ರಭು ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು, ಮುಂತಾದವರು ಭಾಗವಹಿಸಿದ್ದರು.