ದೇಶಿಯ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಕರೆ

ಬಾದಾಮಿ,ಆ6: ಇಂದು ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದೇ ದೇಶಿಯ ಕ್ರೀಡೆಗಳಾದ ಕಬಡ್ಡಿ, ಕುಸ್ತಿ ಸೇರಿದಂತೆ ವಿವಿದ ಕ್ರೀಡೆಗಳಲ್ಲಿ ಭಾಗವಹಿಸಿ ಉಳಿಸಿ, ಬೆಳೆಸುವ ಮೂಲಕ ಸ್ಪರ್ಧಾ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ಯುವ ಮುಖಂಡ, ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಭೀಮಸೇನ ಚಿಮ್ಮನಕಟ್ಟಿ ಯುವಕರಿಗೆ ಮನವಿ ಮಾಡಿದರು.
ಅವರು ಪಟ್ಟಣದ ಹೊರವಲಯದಲ್ಲಿ ನಾಗರ ಪಂಚಮಿ ಹಬ್ಬದ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಹಮ್ಮಿಕೊಂಡಿದ್ದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ನಗರದ ಯುವಕರು ಕುಸ್ತಿಯಲ್ಲಿ ಭಾಗವಹಿಸಿದ್ದರು. ರಾಜ್ಯ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿ ಹನಮಂತ ಅಪ್ಪನ್ನವರ, ನೂರಂದಪ್ಪ ಮುತ್ತಲಗೇರಿ, ಹನಮಂತ ಕಾವಳ್ಳಿ, ಅಡಿವೆಪ್ಪ ಅರಬೂತನವರ, ವಿಠ್ಠಲ ನಾಯಕ, ಮಳಳಿಯಪ್ಪ ಕೆಂಚನ್ನವರ, ಮಲೀಕ ರಾಜೂರ, ರಾಮಣ್ಣ ಕಾವಳ್ಳಿ, ಮುತ್ತಪ್ಪ ವಾಲೀಕಾರ, ಬಸಪ್ಪ ಕಲ್ಲಾಪೂರ, ಯಲ್ಲಪ್ಪ ಶಿರೂರ, ಈರಣ್ಣ ಬಂಡಿವಡ್ಡರ, ಮಹಮ್ಮದಸಾಬ ಕಟಗೊಟ, ವಿಠ್ಠಲ ಕಂಬಾರ, ಶಂಕ್ರಪ್ಪ ಕಳಸದ, ಲಕ್ಷ್ಮಣ ಪೂಜಾರ, ಗೋವಿಂದಪ್ಪ ದಾಸರ, ಸುಲೇಮಾನ ಮುಲ್ಲಾ, ಸೇರಿದಂತೆ ಬಾದಾಮಿ ನಗರದ ಗುರು ಹಿರಿಯರು, ಯುವಕರು ಹಾಜರಿದ್ದರು. ಕಮತಗಿಯ ಯುವಕ ಪ್ರಥಮ, ತುಳಸಿಗೇರಿ ಯುವಕ ದ್ವಿತೀಯ ಸ್ಥಾನ ಪಡೆದುಕೊಂಡರು. ಇವರಿಗೆ ಬಹುಮಾನಗಳನ್ನು ವಿತರಿಸಲಾಯಿತು.