ದೇಶಿಯ ಕಲೆ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು:  ಟಿ. ಹೆಚ್. ಎಂ. ಬಸವರಾಜ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.01: ನಗರದ ಆಲಾಪ್ ಸಂಗೀತ ಕಲಾ ಟ್ರಸ್ಟ್  ಇಲ್ಲಿನ  ರಾಘವ ಕಲಾಮಂದಿರದಲ್ಲಿ ಟ್ರಸ್ಟ್ ನ 7ನೇ ವಾರ್ಷಿಕೋತ್ಸವದ ಸಂಭ್ರಮ ಹಾಗೂ ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ
ಸುಗಮ ಸಂಗೀತ  ಕವಿತಾ ಡಿ. ಕಗ್ಗಲ್ ತಂಡದವರಿಂದ. ಸಮೂಹ ನೃತ್ಯ.ತುಂಗ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ
 ವಚನ ಗಾಯನ ಕೆ.ಜಿ .ಶಿವಕುಮಾರ್ ತಂಡದಿಂದ ‘ಕುಮಾರಗೌಡ ಅಮರಾಪುರ . ಪಿ.ಸಣ್ಣ ಹೊನ್ನೂರ್ ಸಾಬ್ ಶಂಕರ ಬಂಡೆ ಇವರಿಂದ ತತ್ವಪದ, 
ಧಾತ್ರಿರಂಗ ಸಂಸ್ಥೆ ಸಿರಿಗೇರಿ ತಂಡದಿಂದ ಸೀತಾಪಹರಣ
ಬಯಲಾಟ ಪ್ರದರ್ಶನ  ಹೆಚ್. ತಿಪ್ಪೇಸ್ವಾಮಿ ನಿರ್ದೇಶನದಲ್ಲಿ ಪ್ರದರ್ಶಿಸಲಾಯಿತು.
ಬಿ .ದೇವಣ್ಣ, ಸಾಯಿಶೃತಿ, ಈ ಹನುಮಾವ ದೂತ, ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷ ಟಿ‌ ನಾಗಭೂಷಣ ಮತ್ತು ಧಾತ್ರಿರಂಗ ಸಂಸ್ಥೆಯ ಮುಖ್ಯಸ್ಥ. ವೈ ಮಂಜುನಾಥ ಇವರನ್ನು ಸನ್ಮಾನಿಸಲಾಯಿತು.
 ಕಾರ್ಯಕ್ರಮದ ಉದ್ಘಾಟನೆಯನ್ನು ಮದ್ದಲೆ ಮೂಲಕ ನೆರವೇರಿಸಿದ . ಇತಿಹಾಸ ಅಕಾಡೆಮಿ ಜಿಲ್ಲಾಧ್ಯಕ್ಷ ಟಿ. ಹೆಚ್. ಎಂ. ಬಸವರಾಜ ಅವರು.  ಬಳ್ಳಾರಿ ಜಿಲ್ಲೆಯಲ್ಲಿ ಮಹಾನ್ ಕಲಾವಿದರು ಸಾಧಕರಿದ್ದು‌  ಎಲೆಮರೆಕಾಯಿಯಂತೆ ಮುಖ್ಯ ವಾಹಿನಿಗೆ ಬಾರದೆ ಇರುವರು ಅಂಥವರನ್ನು ಗುರುತಿಸುವ ಕೆಲಸ ನಗರದಲ್ಲಿ ಅತ್ಯಂತ ಕ್ರಿಯಾಶೀಲ ಸಂಸ್ಥೆ ಆಗಿರುವ ಆಲಾಪ್
ಸಂಗೀತ ಕಲಾ ಟ್ರಸ್ಟ್ ರವರು ಗುರುತಿಸಿ ಸನ್ಮಾನ ಸಲ್ಲಿಸುವುದು ಹೆಮ್ಮೆಯ ಸಂಗತಿ. ಇತ್ತೀಚೆಗೆ ವೀದೇಶಿ ಕಲೆ ಹಾವಳಿ ಹೆಚ್ಚಾಗಿದೆ ನಾವು ನೀವು ದೇಶಿಯ ಕಲೆಗಳನ್ನು ಉಳಿಸುವಲ್ಲಿ ಎಲ್ಲರೂ ಪ್ರಯತ್ನಿಸಬೇಕೆಂದರು.
 ಕಲಾವಿದರ ಮಾಶಾಸನ 2000. ಬದಲು 5000 ಸಾವಿರಕ್ಕೆ ಏರಿಕೆಯಾಗಬೇಕು ಕಲಾವಿದರ ಮಾಶಾಸನ ವಯೋಮಿತಿ ಕಡಿಮೆ ಮಾಡಬೇಕು ಅವರು ಹೇಳಿದರು.
 ಕಾರ್ಯಕ್ರಮದಲ್ಲಿ ನಾಡೋಜ ಬೆಳಗಲ್ಲು ವೀರಣ್ಣನವರು ಅತಿಥಿಯಾಗಿ ಭಾಗವಹಿಸಿ.  ಕಲಾವಿದರ ಏಳಿಗೆ ಕಲಾವಿದರು ಉಳಿವಿಗೆ ಸರ್ಕಾರ ಸಂಘ ಸಂಸ್ಥೆಗಳ ಪ್ರೋತ್ಸಾಹ ಸನ್ಮಾನ್ಯ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ  ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೋಟೇಶ್ವರರಾವ್, ರಮೇಶ್ ಗೌಡ ಪಾಟೀಲ್ ಹಿರಿಯ ರಂಗಭೂಮಿ ಕಲಾವಿದರು,  ಎನ್. ಪ್ರಕಾಶ ಗೌರವ ಕಾರ್ಯದರ್ಶಿ ರಾಘವ ಮೆಮೋರಿಯಲ್ ಅಸೋಶೇಷಿಯನ್. ಬಳ್ಳಾರಿ, ಜಿ .ನಾಗನಗೌಡ ಬಯಲಾಟ ಕಲಾವಿದರು ಬಳ್ಳಾರಿ. ಭಾಗವಹಿಸಿದ್ದರು.
  ಅಧ್ಯಕ್ಷತೆ ವಹಿಸಿದ್ದ ಹೆಚ್ ತಿಪ್ಪೇಸ್ವಾಮಿ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯರು ಬಾಗಲಕೋಟೆ ಇವರು .ಬಳ್ಳಾರಿ ಜಿಲ್ಲೆಯ ಬಯಲಾಟ ಸಾಹಿತ್ಯ ಪದ ಬಳಕೆಯಲ್ಲಿ ರಾಜ್ಯದಲ್ಲಿ 23 ಜಿಲ್ಲೆಗಳ ಪೈಕಿ ಉತ್ತಮ ಮಟ್ಟದಲ್ಲಿದೆ.ಕುಡಿತಿನಿ ನರಸಿಂಗರಾಯರು ಸಿಡಿಗಿನ ಮಳೆ ಬೆಳೆಸಿದ್ದಪ್ಪ. ರಾಮಸಾಗರ ಸಾಲಿ ವೆಂಕಣ್ಣಯ್ಯ. ಮುಂತಾದ ಬಯಲಾಟ ಕವಿಗಳ ನೆನೆದು ಅವರು ರಚನೆ ಮಾಡಿದಂತ ಬಯಲಾಟ ಕೃತಿಗಳು. ಮತ್ತು ಪದ ಬಳಕೆಯು ಮಹತ್ವ ವಿವರಿಸಿ. ಇಂತಹ ಕವಿಗಳ ಕೊಡುಗೆ ಬಳ್ಳಾರಿ ಜಿಲ್ಲೆಗೆ ಅಪಾರ ಸಂಪತ್ತು ಎಂದರು.
ಪ್ರಾರ್ಥನೆಯನ್ನು  ಜಡೇಶ ಎಮ್ಮಿಗನೂರು ನಿರ್ವಹಿಸಿದರು.  ರಮಣಪ್ಪ ಭಜಂತ್ರಿ ಟ್ರಸ್ಟ್ ಅಧ್ಯಕ್ಷರು ವಂದನಾರ್ಪಣೆ ಸಲ್ಲಿಸಿದರು .ಟಿ ನಾಗಭೂಷಣ್ ರವರು ನಿರೂಪಣೆ ನಿರ್ವಹಿಸಿದರು.
ಪುರುಷೋತ್ತಮ ಹಂದ್ಯಾಳ್ ,ಡಿ. ಸುಬ್ಬಣ್ಣ ,ಎಂ ರಾಮಾಂಜನೇಯಲು,ಹೆಚ್ ವಿಷ್ಣುವರ್ಧನ್ ರೆಡ್ಡಿ, ವಿ ರಾಮಚಂದ್ರ, ಕೆ ಕೃಷ್ಣ, ಕೆ ರಂಗಸ್ವಾಮಿ,ಅಡವಿ ಸ್ವಾಮಿ, ಇನ್ನೂ ಮುಂತಾದವರು ಉಪಸ್ಥಿತರಿದ್ದರು.