ದೇಶಾದ್ಯಂತ 737 ಜಿಲ್ಲೆಗಳಲ್ಲಿ ಲಸಿಕೆ ಪ್ರಾತ್ಯಕ್ಷಿಕೆ

ನವದೆಹಲಿ ಜ.೮- ದೇಶಾದ್ಯಂತ ಅತಿಶೀಘ್ರದಲ್ಲಿ ಕೊರೊನಾ ಸೋಂಕಿಗೆ ತುರ್ತು ಲಸಿಕೆ ಹಾಕುವ ಬೃಹತ್ ಅಭಿಯಾನ ಆರಂಭವಾಗಲಿರುವ ಹಿನ್ನಲೆಯಲ್ಲಿ ಪೂರ್ವಭಾವಿಯಾಗಿ ಎರಡನೇ ಹಂತದಲ್ಲಿ ೭೩೭ ಜಿಲ್ಲೆಗಳಲ್ಲಿ ಲಸಿಕೆ ತಾಲೀಮು ನಡೆಯಿತು.
ಕರ್ನಾಟಕದ ೨೬೩ ಕೇಂದ್ರಗಳು ಸೇರಿದಂತೆ ದೇಶಾದ್ಯಂತ ಕೊರೋನಾ ಸೋಂಕಿಗೆ ಲಸಿಕೆ ಹಾಕುವ ಮೂರನೇ ಹಂತದ ತಾಲೀಮಿನಲ್ಲಿ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ವೈದ್ಯರು ಪಾಲ್ಗೊಂಡಿದ್ದರು
ದೇಶದ ಎಲ್ಲ ರಾಜ್ಯಗಳಲ್ಲಿ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಸಿಕಾ ತಾಲೀಮು ನಡೆಯಿತು. ಹಂತದಲ್ಲಿ ಡಿಸೆಂಬರ್ ೨೮ ಮತ್ತು ೨೯ರಂದು ೪ರಾಜ್ಯಗಳ ಲಸಿಕಾ ಅಭಿಯಾನ ನಡೆಸಲಾಯಿತು.ಜನವರಿ ೨ ರಂದು ೭೪ ಜಿಲ್ಲೆಗಳಲ್ಲಿ ತಾಲಿಮು ನಡೆಸಲಾಗಿತ್ತು ಇದೀಗ ದೇಶಾದ್ಯಂತ ಲಸಿಕೆ ಅಭಿಯಾನ ಕೈಗೊಳ್ಳಲಾಗಿದೆ.
ಭಾರತೀಯ ಔಷಧ ಮಹಾನಿಯಂತ್ರಕ -ಡಿಸಿಜಿಐ ಭಾರತ್ ಬಯೋಟೆಕ್ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಸೀಯ ಲಸಿಕೆ “ಕೋವಾಕ್ಸಿನ್” ಹಾಗು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಝೆನಾಕಾ ಸಂಸ್ಥೆ ಅಭಿವೃದ್ಧಿ ಪಡಿಸಿರುವ “ಕೋವಿಶೀಲ್ಡ್”ಲಸಿಕೆಗೆ ತುರ್ತು ಅನುಮತಿ ನೀಡಲಾಗಿದೆ.
ಲಸಿಕೆ ಹಾಕುವ ತಾಲೀಮಿನಲ್ಲಿ ಮೂರು ಹಂತದಲ್ಲಿ ಜಿಲ್ಲಾಸ್ಪತ್ರೆ, ವೈದ್ಯಕೀಯ ಕಾಲೇಜು, ಖಾಸಗಿ ಆರೋಗ್ಯ ಸೌಲಭ್ಯ, ನಗರ-ಗ್ರಾಮೀಣ ಆರೋಗ್ಯ ಕೇಂದ್ರ ಸೇರಿದಂತೆ ಇನ್ನಿತರ ಕಡೆ ರಸಿಕ ತಾಲೀಮು ನಡೆಸಲಾಗುತ್ತದೆ.
ಲಸಿಕೆಯನ್ನ ಜನರಿಗೆ ಹಾಕುವ ಯಾವುದೇ ಸಮಸ್ಯೆಗಳು ಎದುರಾಗದಂತೆ ಮತ್ತು ಅಡ್ಡಿ-ಆತಂಕ ಸೃಷ್ಟಿಯಾಗದಂತೆ ನೋಡಿಕೊಳ್ಳಲು ದೇಶಾದ್ಯಂತ ತಾಲೀಮು ನಡೆಸಲಾಗುತ್ತದೆ
ಯುಪಿ,ಎಪಿಯಲ್ಲಿ ಇಲ್ಲ:
ದೇಶಾದ್ಯಂತ ನಡೆಯುತ್ತಿರುವ ಕೊರೋನಾ ಸೋಂಕಿನ ಮೂರನೇ ಹಂತದ ಲಸಿಕಾ ತಾಲೀಮಿನಲ್ಲಿ ಉತ್ತರ ಪ್ರದೇಶ ಹರಿಯಾಣ ಮತ್ತು ಅರುಣಾಚಲ ಪ್ರದೇಶ ಭಾಗಿಯಾಗಿಲ್ಲ. ಈಗಲೇ ಈ ರಾಜ್ಯಗಳ ಎಲ್ಲ ಜಿಲ್ಲೆಗಳಲ್ಲಿ ಲಸಿಕೆ ಹಾಕುವ ಕಾರ್ಯ ಪೂರ್ಣಗೊಂಡಿದೆ.
ಡಿಜಿಟಲ್ ಮೂಲಕ ನೊಂದಾವಣಿ ಮಾಡಿಕೊಂಡ ವೈದ್ಯರು ವೈದ್ಯಕೀಯ ಸಿಬ್ಬಂದಿ ಆರೋಗ್ಯ ಸಿಬ್ಬಂದಿಗೆ ಮೊದಲು ತಪಾಸಣೆ ನಡೆಸಿ ಆನಂತರ ಅವರು ನೀಡುವ ದಾಖಲೆಗಳನ್ನು ಪರಿಶೀಲಿಸಿ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡಿದ ನಂತರ ಅರ್ಧ ಗಂಟೆಗಳ ಕಾಲ ಆಸ್ಪತ್ರೆಗಳಲ್ಲಿ ಅವರ ಮೇಲೆ ನಿಗಾ ಇಟ್ಟು ಯಾವುದೇ ಅಡ್ಡ ಪರಿಣಾಮ ಬೀರದಿದ್ದರೆ ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ

ದೇಶದಿಂದ ಮೂರನೇ ಹಂತದ ಲಸಿಕಾ ಅಭಿಯಾನ ತಾಲೀಮು

737 ಜಿಲ್ಲೆಗಳಲ್ಲಿ ಡ್ರೈ ರನ್

ಅತಿಶೀಘ್ರದಲ್ಲೇ ತುರ್ತು ಲಸಿಕೆ ಅಭಿಯಾನ

ಕೇಂದ್ರ ಆರೋಗ್ಯ ಸಚಿವ ಡಾ ಹರ್ಷ ವರ್ಧನ್ ಮಾಹಿತಿ

ಸದ್ಯದಲ್ಲೇ ದೇಶವಾಸಿಗಳಿಗೆ ಕೋರೋನಾ ಲಸಿಕೆ

ಲಸಿಕಾ ತಾಲೀಮಿನಲ್ಲಿ ಲೋಪದೋಷ ಪತ್ತೆಹಚ್ಚಲು ಈ ವ್ಯವಸ್ಥೆ

ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ಲಸಿಕೆ ತಾಲೀಮಿಗೆ ವ್ಯವಸ್ಥೆ