ದೇಶಾದ್ಯಂತ 10 ಸರ್ಕಾರಿ ಪ್ರಯೋಗಾಲಯ ಒಕ್ಕೂಟ ಸ್ಥಾಪನೆ: ಕೇಂದ್ರ

ನವದೆಹಲಿ ,ಡಿ.29- ಇನ್‌ಸಾಕೋಗ್ ಎಂದು ಕರೆಯಲ್ಪಡುವ ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ದೇಶಾದ್ಯಂತ 10 ಸರ್ಕಾರಿ ಪ್ರಯೋಗಾಲಯಗಳ ಒಕ್ಕೂಟ ಸ್ಥಾಪಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ಪ್ರಯೋಗಾಲಯಗಳು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ -ಐಸಿಎಂಆರ್, ಬಯೋಟೆಕ್ ಇಂಡಿಯಾ, ಸಿಎಸ್‌ಐಆರ್ ಮತ್ತು ಆರೋಗ್ಯ ಸಚಿವಾಲಯಕ್ಕೆ ಸೇರಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

ಇಂಗ್ಲೆಂಡ್ ನಿಂದ ರೂಪಾಂತರ ಕೊರೋನಾ ಸೋಂಕು ಕಾಣಿಸಿಕೊಳ್ಳುವ ಮುನ್ನ ಸ್ಟ್ರೈನ್ ಹೊರಹೊಮ್ಮುವ ಮೊದಲು ಸರಿಸುಮಾರು 5000 ಜೀನೋಮ್ ಅನುಕ್ರಮಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ಕೊರೋನಾ ಸೋಂಕಿನ ಪೈಕಿ ಶೇ.63 ರಷ್ಟು ಪುರುಷರು ಮತ್ತು ಶೇ. 37 ರಷ್ಡು ಮಹಿಳೆಯರು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ವಯಸ್ಸಿನ ಪ್ರಕಾರ, 17 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇ 8 ಪ್ರಕರಣಗಳು, 18-25 ವರ್ಷ ವಯಸ್ಸಿನವರಲ್ಲಿ ಶೇ 13 ರಷ್ಡು , 26-44 ವರ್ಷ ವಯಸ್ಸಿನವರಲ್ಲಿ ಶೇ 39ರಷ್ಡು 45-60 ವರ್ಷದ ಗುಂಪಿನಲ್ಲಿ ಶೇ 26 ರಷ್ಡು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟ ಶೇ 14 ರಷ್ಡು ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ

ಎಸ್ ಜೀನ್ ಕಡ್ಡಾಯ:

ವಿದೇಶದಿಂದ ಭಾರತಕ್ಕೆ ಆಗಮಿಸುವವರಿಗೆ, ಈಗಾಗಲೇ ಡಿಸೆಂಬರ್ 9ರಿಂದ ಡಿ.22ರವಲ್ಲಿ ಹಿಂದಿರುಗಿದವರಿಗೆ, ಅಲ್ಲದೇ ಕೊರೋನಾ ದೃಢಪಟ್ಟವರಿಗೆ ಎಸ್ ಜೀನ್ ಪರೀಕ್ಷೆ ಕಡ್ಡಾಯ ಎಂಬುದಾಗಿ ಸಚಿವಾಲಯ ಆದೇಶಿಸಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯ ಆದೇಶ ಹೊರಡಿಸಿದ್ದು, ವಿದೇಶದಿಂದ ಬರುವ ಎಲ್ಲ ಪ್ರಯಾಣಿಕರಿಗೂ ಎಸ್ ಜೀನ್ ಪರೀಕ್ಷೆ ಕಡ್ಡಾಯವಾಗಿದೆ.ಭಾರತಕ್ಕೆ ಬಂದವರಿಗೆ ಎಸ್ ಜೀನ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಬ್ರಿಟನ್ ವೈರಸ್ ಪತ್ತೆಗಾಗಿ ಎಸ್ ಜೀನ್ ಪರೀಕ್ಷೆಗೆ ಒಳಪಡುವುದು ಕಡ್ಡಾಯವಾಗಿದೆ ಎಂಬುದಾಗಿ ತಿಳಿಸಿದೆ.

ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊಫೆಸರ್ ಕೆ. ವಿಜಯ್ ರಾಘವನ್ ಮಾತನಾಡಿ ಕೊರೋನಾ ಸೋಂಕಿನ ಲಸಿಕೆಗಳು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ರೂಪಾಂತರಗಳ ಸೋಂಕಿನ ವಿರುದ್ಧ ಅಸಮರ್ಪಕ ಎಂಬುದನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎಂದು ಹೇಳಿದ್ದಾರೆ.