ದೇಶಾದ್ಯಂತ ಸ್ವಾಮಿ ವಿವೇಕಾನಂದ ಜಯಂತಿ

ನವದೆಹಲಿ, ಜ. ೧೨- ಇಂದು ದೇಶದಾದ್ಯಂತ ಸಡಗರದಿಂದ ಸ್ವಾಮಿ ವಿವೇಕಾನಂದರ ೧೫೮ನೇ ಜನ್ಮದಿನ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು, ವಿವೇಕಾನಂದರ ಚಿಂತನೆಗಳನ್ನು ಒಳಗೊಂಡಿರುವ ನಮೋ ಆಪ್ ಲಿಂಕ್ ಅನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.
ನಮೋ ಆಪ್ ನಲ್ಲಿ ವಿವೇಕಾನಂದರ ಆಲೋಚನೆಗಳು, ತತ್ವ – ಸಿದ್ಧಾಂತಗಳನ್ನು ಹಂಚಿಕೊಳ್ಳುತ್ತಿದ್ದೇವೆ. ವಿವೇಕಾನಂದರ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಲು ಈ ಆಪ್ ಹಂಚಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅತ್ಯುನ್ನತ, ಆಧ್ಯಾತ್ಮಿಕ ತತ್ವಜ್ಞಾನಿ ವಿವೇಕಾನಂದರು ೧೮೬೩ ರಲ್ಲಿ ಕೊಲ್ಕತ್ತಾದಲ್ಲಿ ಜನಿಸಿದ್ದಾರೆ. ಅವರ ವಿಚಾರಗಳು ಎಂದೆಂದಿಗೂ ಪ್ರಸ್ತುತ. ಅವರ ವಿಚಾರಗಳಿಂದಲೇ ಅವರ ಜನಪ್ರಿಯತೆ ಹೆಚ್ಚಾಗುವ ಮೂಲಕ ಜನರ ಕೀರ್ತಿ ಗಳಿಸಿಕೊಂಡಿದ್ದಾರೆ.
ತಮ್ಮ ವಿಚಾರಧಾರೆಗಳ ಮೂಲಕ ವಿವೇಕಾನಂದರು ತನ್ನ ಮೇಲೆ ತೀವ್ರ ಪರಿಣಾಮ ಬೀರಿದ್ದಾರೆ ಎಂದು ಉಲ್ಲೇಖಿಸಿರುವ ಮೋದಿ ಅವರು, ಇತ್ತೀಚೆಗಷ್ಟೇ ಜವಹರ್ ಲಾಲ್ ನೆಹರು ವಿವಿಯಲ್ಲಿ ಸ್ವಾಮಿ ವಿವೇಕಾನಂದರ ಪುತ್ಥಳಿಯನ್ನು ಅನಾವರಣಗೊಳಿಸಿದ್ದರು.