ದೇಶಾದ್ಯಂತ ಶೇ೨೩ ಲಸಿಕೆ ವ್ಯರ್ಥ

ನವದೆಹಲಿ.ಏ೨೦: ಈಗಾಗಲೇ ಮೂರು ಹಂತದ ಲಸಿಕಾ ಕಾರ್ಯಕ್ರಮ ನಡೆದಿದೆ. ನಾಲ್ಕನೇ ಹಂತವಾಗಿ ಮೇ.೧ರಿಂದ ೧೮ ವರ್ಷ ಮೇಲ್ಪಟ್ಟ ದೇಶದ ಜನರಿಗೆ ಉಚಿತವಾಗಿ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ದೇಶಾದ್ಯಂತ ಕೊರೋನಾ ಲಸಿಕೆ ಜನರಿಗೆ ನೀಡಲಾಗದೇ ವ್ಯರ್ಥವಾಗಿದೆ.
ಏಪ್ರಿಲ್ ೧೧ರವರೆಗೆ ಎಷ್ಟು ಕೊರೋನಾ ಲಸಿಕೆ ವೇಸ್ಟ್ ಆಗಿದೆ ಎನ್ನುವ ಬಗ್ಗೆ ಆರ್ ಟಿ ಐ ಮೂಲಕ ಸಲ್ಲಿಕೆಯಾದಂತ ಅರ್ಜಿಯಿಂದಾಗಿ ಮಾಹಿತಿ ಬಹಿರಂಗಗೊಂಡಿದ್ದು, ಏಪ್ರಿಲ್ ೧೧ರವರೆಗೆ ರಾಜ್ಯಗಳಲ್ಲಿ ಬಳಸಲಾಗುತ್ತಿದ್ದ ಕೋವಿಡ್ ಲಸಿಕೆಯ ಒಟ್ಟು ಡೋಸ್ ಗಳ ಪೈಕಿ ಶೇ.೨೩ರಷ್ಟು ಪ್ರಮಾಣ ವ್ಯರ್ಥವಾಗಿದೆ ಎಂದು ಅವರು ಆರ್ ಟಿಐ ಪ್ರಶ್ನೆಗೆ ನೀಡಿದ ಉತ್ತರದಿಂದ ತಿಳಿದುಬಂದಿದೆ.
ತಮಿಳುನಾಡು, ಹರಿಯಾಣ, ಪಂಜಾಬ್, ಮಣಿಪುರ ಮತ್ತು ತೆಲಂಗಾಣದಲ್ಲಿ ಗರಿಷ್ಠ ಪ್ರಮಾಣದ ವ್ಯರ್ಥ ಆಗಿರುವುದಾಗಿ ಆರ್ ಟಿ ಐ ನಲ್ಲಿ ಕೇಳಲಾದಂತ ಪ್ರಶ್ನೆಯ ಉತ್ತರದ ವರದಿಯಿಂದ ತಿಳಿದು ಬಂದಿದೆ.
ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಾಂ, ಗೋವಾ, ದಮನ್ ಮತ್ತು ದಿಯು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಲಕ್ಷದ್ವೀಪಗಳಲ್ಲಿ ಡೋಸ್ ಗಳ ಶೂನ್ಯ ವ್ಯರ್ಥವಾಗಿರೋದಾಗಿ ವರದಿಯಾಗಿದೆ.