ದೇಶಾದ್ಯಂತ ಲಸಿಕೆ ತಾಲೀಮು

ನವದೆಹಲಿ, ಜ.೨- ಕೊರೋನೋ ಸೋಂಕಿಗೆ ಲಸಿಕೆ ಹಾಕುವ ತಾಲೀಮುಬದೇಶಾದ್ಯಂತ ಇಂದು ನಡೆಯಿತು ದೇಶದ ೧೧೬ ಜಿಲ್ಲೆಗಳ ೨೫೯ ಸ್ಥಳಗಳಲ್ಲಿ ಡ್ರೈ ರನ್ – ಲಸಿಕೆ ತಾಲೀಮು ನಡೆಸಲಾಯಿತು. ಲಸಿಕೆ ಹಾಕುವ ಕಾರ್ಯದಲ್ಲಿ ದೇಶಾದ್ಯಂತ ೯೬ಸಾವಿರ ತರಬೇತಿ ನಿರತ ಸಿಬ್ಬಂದಿ ಪಾಲ್ಗೊಂಡಿದ್ದರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.ಪ್ರತಿಯೊಂದು ಸ್ಥಳದಲ್ಲೂ ಕನಿಷ್ಠ ೨೫ ಮಂದಿಗೆ ಲಸಿಕೆ ಹಾಕಲು ನಿರ್ಧರಿಸಲಾಗಿದ್ದುಈ ಕಾರ್ಯಕ್ರಮಕ್ಕಾಗಿ ೨೯೬೦ ರಾಷ್ಟ್ರೀಯ ತರಬೇತಿ ಸಂಸ್ಥೆ ಸಿಬ್ಬಂದಿಗಳು ಹಾಗು ೭೧೯ ಜಿಲ್ಲೆಗಳಲ್ಲಿ ೫೭೦೦೦ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು ಎಂದು ತಿಳಿಸಿದೆ.ಸೋಂಕಿಗೆ ಲಸಿಕೆ ಹಾಕುವ ತಾಲೀಮು ನಡೆಸುವ ಮೂಲಕ ಲಸಿಕೆ ಹಾಕುವ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ರಾಜ್ಯಗಳಿಗೆ ಸೂಚನೆ:

ಈ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹೃರ್ಷವರ್ಧನ್ ಅವರು, ಎಲ್ಲ ರಾಜ್ಯಗಳಲ್ಲಿ ಅಗತ್ಯ ಮಾರ್ಗಸೂಚಿಗಳಿಗೆ ಅನುಭವವಾಗಿ ಲಸಿಕೆ ಹಾಕಿಸುವಂತೆ ಅವರು ಸೂಚನೆ ನೀಡಿದ್ದಾರೆ.ಲಸಿಕೆ ಹಾಕಿಸಿಕೊಂಡವರನ್ನು ಅರ್ಧಗಂಟೆ ಸ್ಥಳದಲ್ಲಿ ಕೂರಿಸಿಕೊಂಡು ಅವರ ಮೇಲೆ ನಿಗಾ ಇಡುವಂತೆಯೂ ಅವರು ಸೂಚಿಸಿದ್ದಾರೆ.ವಿವಿಏ ಇಲಾಖೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಪ್ರಾಯೋಗಿಕಲಸಿಕೆ ಹಾಕುವ ಅಭಿಯಾನವನ್ನು ಯಶಸ್ವಿಯಾಗಿ ನಡೆಸುವಂತೆ ಅವರು ರಾಜ್ಯಗಳಿಗೆ ಸೂಚಿಸಿದ್ದಾರೆ.

ಪರಿಶೀಲನೆ;
ದೆಹಲಿಯ ಗುರು ತೇಗ್ ಬಹುದ್ದೂರ್ ಆಸ್ಪತ್ರೆಗೆ ಭೇಟಿ ನೀಡಿ ಸಚಿವ ಹರ್ಷವರ್ಧನ್ ಅವರು ಲಸಿಕೆ ಹಾಕುವ ಕಾರ್ಯವನ್ನು ಸ್ವತಃ ಪರಿಶೀಲನೆ ನಡೆಸಿದರು.ಲಕ್ನೋದಲ್ಲಿ ಆರು ಕಡೆ ಪುಣೆಯಲ್ಲಿ ಮೂರುಕಡೆ ನಾಲ್ಕು ಜನ ನಂದುರ್ಬರ್ , ಗುಜರಾತ್ ಪಂಜಾಬ್ ಹರಿಯಾಣ ಕೇರಳ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆ ಹಾಕುವ ಕಾರ್ಯ ನಡೆಯಿತು.