ದೇಶಾದ್ಯಂತ ರಾಷ್ಟ್ರಪಿತನಿಗೆ ಭಾವಪೂರ್ಣ ನಮನ

೧೫೪ನೇ ಗಾಂಧಿ ಜಯಂತಿ
ಮಹಾತ್ಮ ಗಾಂಧೀಜಿಯವರ ೧೫೪ನೇ ಜನ್ಮಜಯಂತಿ ಪ್ರಯುಕ್ತ ದೆಹಲಿಯ ರಾಜ್ ಘಾಟ್‌ನಲ್ಲ್ಲಿರುವ ಗಾಂಧೀಜಿ ಸಮಾಧಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಪುಷ್ಪನಮನ ಸಲ್ಲಿಸಿದರು.

ನವದಹಲಿ,ಅ.೨- ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ೧೫೪ ನೇ ಜನ್ಮ ವಾರ್ಷಿಕೋತ್ಸವದಂದು ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ನಾಯಕರು ರಾಜ್ ಘಾಟ್‌ನಲ್ಲಿ ಪುಷ್ಟನಮನ ಸಲ್ಲಿಸಿ ಗುಣಗಾನ ಮಾಡಿದ್ದಾರೆ.
ಕರ್ನಾಟಕ ಸೇರಿದಂತೆ ದೇಶಾದ್ಯಂತ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಸಚಿವರು, ಹಲವು ರಾಜಕೀಯ ಪಕ್ಷದ ನಾಯಕರು ಮಹಾತ್ಮಗಾಂಧಿ ಜನ್ಮ ದಿನದ ಅಂಗವಾಗಿ ಪುಷ್ಟನಮನ ಸಲ್ಲಿಸಿ ಗಾಂಧಿಜಿ ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದ್ದಾರೆ
ಈ ವೇಳೆ ಟ್ವೀಟ್ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಹಾತ್ಮ ಗಾಂಧಿ ಅವರ ಆಲೋಚನೆಗಳು ಕೇವಲ ನಿಷ್ಫಲ ಚಿಂತನೆಗಳಾಗಿರಲಿಲ್ಲ, ಅವರ ನಿರಂತರ ಅಭ್ಯಾಸದ ಫಲಿತಾಂಶವಾಗಿದೆ. ಜೀವನದ ಭಾಗವಾಗಿ. ಗಾಂಧೀಜಿ ಅವರ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳು ಪ್ರತಿಧ್ವನಿವೆ ಎಂದು ನಮನ ಸಲ್ಲಿಸಿದ್ದಾರೆ.
ಜಾಗತಿಕ ಪ್ರಭಾವ: ಪ್ರಧಾನಿ
ಬಾಪು ಅವರ ಕಾಲಾತೀತ ಬೋಧನೆಗಳು ಪ್ರತಿಯೊಬ್ಬರಿಗೆ ಮಾದರಿ ಮತ್ತು ಆದರ್ಶ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಮಹಾತ್ಮಾ ಗಾಂಧಿ ಅವರ ಪ್ರಭಾವ ಜಾಗತಿಕವಾಗಿದೆ ಎಂದು ಗುಣಗಾನ ಮಾಡಿದ್ದಾರೆ.ಮಹಾತ್ಮ ಗಾಂಧಿ ಅವರನ್ನು ಬಾಪು ಅಥವಾ ರಾಷ್ಟ್ರಪಿತ ಎಂದು ಪ್ರೀತಿಯಿಂದ ಸ್ಮರಿಸಲಾಗುತ್ತದೆ. ಇಡೀ ಮಾನವಕುಲವನ್ನು ಏಕತೆ ಮತ್ತು ಸಹಾನುಭೂತಿಯ ಮನೋಭಾವ ಹೆಚ್ಚಿಸಲು ಪ್ರೇರೇಪಿಸುತ್ತದೆ ಎಂದು ಎಕ್ಸ್‌ನಲ್ಲಿ ಹೇಳಿದ್ದಾರೆ.“ಗಾಂಧಿ ಜಯಂತಿಯ ವಿಶೇಷ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮಸ್ಕರಿಸುತ್ತೇನೆ.ಅವರ ಕಾಲಾತೀತ ಬೋಧನೆಗಳು ನಮ್ಮ ಮಾರ್ಗವನ್ನು ಬೆಳಗಿಸುತ್ತಲೇ ಇರುತ್ತವೆ.,ಅವರ ಕನಸುಗಳನ್ನು ನನಸಾಗಿಸಲು ನಾವು ಯಾವಾಗಲೂ ಕೆಲಸ ಮಾಡೋಣ ಎಂದು ದೇಶವಾಸಿಗಳಿಗೆ ಮನವಿ ಮಾಡಿದ್ದಾರೆ.ಗಾಂಧೀಜಿ ಅವರ ಆಲೋಚನೆಗಳು ಪ್ರತಿಯೊಬ್ಬ ಯುವಕನು ಅವರು ಕನಸು ಕಂಡ ಬದಲಾವಣೆಯ ಏಜೆಂಟ್ ಆಗಲು ಸಾಧ್ಯವಾಗಲಿ, ಎಲ್ಲೆಡೆ ಏಕತೆ ಮತ್ತು ಸಾಮರಸ್ಯ ಬೆಳೆಸಲಿ ಎಂದು ಹೇಳಿದ್ದಾರೆ.ಇಡೀ ಮಾನವಕುಲವನ್ನು ಏಕತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲು ಪ್ರೇರೇಪಿಸುತ್ತದೆ. ಅವರ ಕನಸುಗಳನ್ನು ನನಸಾಗಿಸಲು ಯಾವಾಗಲೂ ಕೆಲಸ ಮಾಡೋಣ. ಅವರ ಆಲೋಚನೆಗಳು ಪ್ರತಿಯೊಬ್ಬ ಯುವಕರು ಅವರು ಕನಸು ಕಂಡ ಬದಲಾವಣೆಯ ಏಜೆಂಟ್ ಆಗಲು ಸಾಧ್ಯವಾಗಲಿ, ಎಲ್ಲಾ ಕಡೆ ಏಕತೆ ಮತ್ತು ಸೌಹಾರ್ದತೆ ಬೆಳೆಸಿಕೊಳ್ಳಲಿ ಎಂದು ತಿಳಿಸಿದ್ದಾರೆ.
ಸ್ವಚ್ಛತಾ ಅಭಿಯಾನ
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ದೇಶಾದ್ಯಂತ ಭಾನುವಾರ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.ಕಳೆದ ತಿಂಗಳು ’ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲಿ ಪ್ರಧಾನಿ ನರೆಂದ್ರ ಮೋದಿ ಅವರು ದೇಶದ ಎಲ್ಲಾ ನಾಗರಿಕರು “ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನಕ್ಕಾಗಿ ಮನವಿ ಮಾಡಿದ್ದರು. ಮುನ್ನಾದಿನದಂದು ಮಹಾತ್ಮಾ ಗಾಂಧಿಯವರಿಗೆ “ಸ್ವಚ್ಛಾಂಜಲಿ” ಎಂದು ಹೇಳಿದರು.ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ರಾಜ್ ರಾಘ್ ನಲ್ಲಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ ದೀಪ್‌ಸಿಂಗ್.ದೆಹಲಿ ಲೆಫ್ಟಿನೆಂಟ್ ಗೌರ್ನರ್ ವಿಕೆ ಸಕ್ಸೇನಾ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ಮಹಾತ್ಮ ಗಾಂಧಿಯವರ ಜನ್ಮದಿನದಂದು ರಾಜ್‌ಘಾಟ್‌ನಲ್ಲಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.