ದೇಶಾದ್ಯಂತ ರಂಜಾನ್ ಆಚರಣೆ ಸ್ಟಮಕ್ -ಗಣ್ಯರ ಶುಭಾಶಯ

ನವದೆಹಲಿ,ಏ.೨೨- ಮುಸ್ಲಿಂ ಸಮುದಾದಯ ಪ್ರಮುಖ ಹಬ್ಬಗಳಲ್ಲಿ ಒಂದಾದ ಈದ್-ಉಲ್-ಫಿತರ್ ಸಂದರ್ಭದಲ್ಲಿ ನಮಾಜ್ ಮಾಡಲು ದೇಶದ ಅತಿದೊಡ್ಡ ಮಸೀದಿಗಳಲ್ಲಿ ಒಂದಾದ ದೆಹಲಿಯ ಜಾಮಾ ಮಸೀದಿಯಲ್ಲಿ ಸಾವಿರಾರು ಭಕ್ತರು ಜಮಾಯಿಸಿದರು.ನಮಾಜ್ ಸಲ್ಲಿಸಿದ ನಂತರ ಜನರು ಪರಸ್ಪರ ಅಪ್ಪಿಕೊಂಡಾಗ ರಾಷ್ಟ್ರ ರಾಜಧಾನಿಯ ದೃಶ್ಯಗಳು ನೋಡುವ ದೃಶ್ಯವಾಗಿತ್ತು.ಜಾಮಾ ಮಸೀದಿಯಲ್ಲಿ ಜನಸಂದಣಿ ನಿರ್ವಹಣೆಗಾಗಿ ದೆಹಲಿ ಪೊಲೀಸ್ ಅಧಿಕಾರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆ ಮಾಡಿತ್ತು. ರಂಜಾನ್ ತಿಂಗಳು ಎಲ್ಲರಿಗೂ ಪರಿಶುದ್ಧತೆ ಮತ್ತು ಸಹಾನುಭೂತಿಯಿಂದ ತುಂಬಿತ್ತು ಮತ್ತು ಈಗ ದೇಶಾದ್ಯಂತ ಈದ್-ಉಲ್-ಫಿತರ್ ಹಬ್ಬ ಆಚರಿಸಲಾಗುತ್ತಿದೆ. ಪ್ರತಿ ವರ್ಷ, ಈದ್-ಉಲ್-ಫಿತರ್ ಅನ್ನು ಪ್ರಪಂಚದಾದ್ಯಂತ ಬಹಳ ಉತ್ಸಾಹ ಮತ್ತು ಸಡಗರದಿಂದ ಆಚರಿಸಲಾಗುತ್ತದೆ.ಇದು ಇಸ್ಲಾಮಿಕ್ ಸಮುದಾಯದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ.ಇಸ್ಲಾಮಿಕ್ ಚಂದ್ರನ ಕ್ಯಾಲೆಂಡರ್ ನ೧೦ ನೇ ತಿಂಗಳಾದ ಶವ್ವಾಲ್ನ ಮೊದಲ ದಿನದಂದು ಈದ್ ಅನ್ನು ಆಚರಿಸಲಾಗುತ್ತದೆ.ಈದ್‌ನ ದಿನಾಂಕವನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ. ಚಂದ್ರ ಗೋಚರಿಸುವ ದಿನವನ್ನು ಚಾಂದ್ ಮುಬಾರಕ್ ಎಂದು ಕರೆಯಲಾಗುತ್ತದೆ.

ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಸಮುದಾಯದ ಮಕ್ಕಳು ಇಂದು ಪ್ರಾರ್ಥನೆ ಸಲ್ಲಿಸಿದರು.

ಶುಭಾಶಯ ಕೋರಿದ ರಾಷ್ಡ್ರಪತಿ, ಪ್ರಧಾನಿ
ರಂಜಾನ್ ಹಬ್ಬದ ಅಂಗವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು , ಪ್ರಧಾನಿ ನರೇಂದ್ರ ಮೋದಿ ಈದ್-ಉಲ್-ಫಿತರ್‌ನಲ್ಲಿ ಜನರಿಗೆ ಶುಭಾಷಯ ಕೋರಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಶ ಈದ್-ಉಲ್-ಫಿತರ್ ಸಂದರ್ಭದಲ್ಲಿ ದೇಶಕ್ಕೆ ಶುಭಾಶಯ ಕೋರಿದ್ದಾರೆ ಮತ್ತು ಜನರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದಾರೆ.”ಈದ್-ಉಲ್-ಫಿತರ್ ಶುಭಾಶಯಗಳು ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಹೆಚ್ಚಿಸಲಿ. ಪ್ರತಿಯೊಬ್ಬರಲ್ಲಿಯೂ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಈದ್ ಮುಬಾರಕ್ ” ಎಂದು ಟ್ವೀಟ್ ಮಾಡಿದ್ದಾರೆ.ಅದೇ ರೀತಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಈದ್-ಉಲ್-ಫಿತರ್ ಸಂದರ್ಭದಲ್ಲಿ ನಾಗರಿಕರಿಗೆ ಶುಭಾಶಯ ಕೋರಿದ್ದಾರೆ.”ಈದ್-ಉಲ್-ಫಿತರ್ ಸಂದರ್ಭದಲ್ಲಿ, ಎಲ್ಲಾ ದೇಶವಾಸಿಗಳಿಗೆ, ವಿಶೇಷವಾಗಿ ಮುಸ್ಲಿಂ ಸಹೋದರರಿಗೆ ಶುಭಾಶಯಕೋರುತ್ತೇನೆ. ಪ್ರೀತಿ ಮತ್ತು ಸಹಾನುಭೂತಿಯ ಹಬ್ಬವಾದ ಈದ್ ನಮಗೆ ಇತರರಿಗೆ ಸಹಾಯ ಮಾಡುವ ಸಂದೇಶ ನೀಡುತ್ತದೆ., ಈ ಶುಭ ಸಂದರ್ಭದಲ್ಲಿ ಆಚರಣೆಯ, ಸಮಾಜದಲ್ಲಿ ಸಹೋದರತ್ವವನ್ನು ಉತ್ತೇಜಿಸಲು ಎಲ್ಲರೂ ಒಟ್ಟಾಗಿ ಪ್ರತಿಜ್ಞೆ ಮಾಡೋಣ, ”ಎಂದು ತಿಳಿಸಿದ್ದಾರೆ.