ವೈದ್ಯಕೀಯ ಪ್ರವೇಶ ಕೇಂದ್ರಿಕರಣಕ್ಕೆ ಪ್ರಸ್ತಾವನೆ

ನವದೆಹಲಿ,ಜೂ.೧೦- ದೇಶದಲ್ಲಿ ಸರ್ಕಾರಿ, ಖಾಸಗಿ ಹಾಗು ಡೀಮ್ಡ್ ವಿಶ್ವವಿದ್ಯಾಲಯಗಳ ವೈದ್ಯಕೀಯ ಕಾಲೇಜುಗಳಲ್ಲಿ ಒಂದೇ ಹಂತದಲ್ಲಿ ಕೇಂದ್ರಿಕರಣ ವೈದ್ಯಕೀಯ ಕೋರ್ಸ್ ಪ್ರವೇಶ ಪ್ರಕ್ರಿಯೆ ಕೌನ್ಸೆಲಿಂಗ್ ನಡೆಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.ಪ್ರತಿ ವರ್ಷ ೧ ಲಕ್ಷಕ್ಕೂ ಹೆಚ್ಚು ಎಂಬಿಬಿಎಸ್ ಸೀಟುಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ದೀರ್ಘಾವಧಿಯ ಪ್ರವೇಶ ಪ್ರಕ್ರಿಯೆಯಾಗುವುದರಿಂದ ವಿದ್ಯಾರ್ಥಿಗಳು ಮತ್ತೊ ಪೋಷಕರಲ್ಲಿನ ಆತಂಕ ದೂರ ಮಾಡಲು ಮುಂದಾಗಿದೆ. ನೀಟ್ ಯುಜಿಯ ಅರ್ಹತಾ ಪಟ್ಟಿಯ ಆಧಾರದ ಮೇಲೆ ಭಾರತದ ಎಲ್ಲಾ ವೈದ್ಯಕೀಯ ಸಂಸ್ಥೆಗಳಿಗೆ ಪದವಿ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ಕೌನ್ಸೆಲಿಂಗ್ ನಡೆಯಲಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗ ತಿಳಿಸಿದೆ.ಸಾಮಾನ್ಯ ಕೌನ್ಸೆಲಿಂಗ್‌ಗಾಗಿ ಕೇಂದ್ರ ಸರ್ಕಾರ ಗೊತ್ತುಪಡಿಸಿದ ಪ್ರಾಧಿಕಾರ ನೇಮಿಸುತ್ತದೆ ಮತ್ತು ಎಲ್ಲಾ ಪದವಿಪೂರ್ವ ಸೀಟುಗಳಿಗೆ ಅದರ ವಿಧಾನದ ಮೇಲೆ ನಿರ್ಧರಿಸಲಾಗುತ್ತದ ಎಂದು ಆಯೋಗದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೌನ್ಸೆಲಿಂಗ್‌ಗಾಗಿ ಕೇಂದ್ರೀಕೃತ ವ್ಯವಸ್ಥೆ ಪರಿಚಯಿಸುವ ಹಿಂದಿನ ಉದ್ದೇಶವು ಪ್ರಕ್ರಿಯೆಗೆ ಏಕರೂಪತೆ ತರುವುದಾಗಿದೆ. ಇದರಿಂದ ರಾಜ್ಯಗಳ ಹಕ್ಕುಗಳನ್ನು ಉಲ್ಲಂಘಿಸಲು ಅಥವಾ ಪದವಿಪೂರ್ವ ವೈದ್ಯಕೀಯ ಸೀಟುಗಳ ಹಂಚಿಕೆಗಾಗಿ ವಿವಿಧ ಕೋಟಾಗಳಿಗೆ ಅಡ್ಡಿಪಡಿಸಲು ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಕೌನ್ಸೆಲಿಂಗ್ ವ್ಯವಸ್ಥೆ ಕೇಂದ್ರೀಕೃತವಾಗಿಲ್ಲದ ಕಾರಣ,ವಿಳಂಬ ಮತ್ತು ಅಮೂಲ್ಯವಾದ ವೈದ್ಯಕೀಯ ಸೀಟುಗಳು ಕೊನೆಯಲ್ಲಿ ಖಾಲಿ ಉಳಿದಿರುವ ಬಗ್ಗೆ ಆಗಾಗ್ಗೆ ದೂರುಗಳಿವೆ ಎಂದು ತಿಳಿಸಿದ್ದಾರೆ
ಅರ್ಹತೆ ಮತ್ತು ಪಾರದರ್ಶಕತೆ ಉತ್ತೇಜಿಸುತ್ತದೆ ಮತ್ತು ವೈದ್ಯಕೀಯ ಸೀಟುಗಳನ್ನು ಹರಾಜು ಮಾಡುವ ಏಜೆಂಟ್‌ಗಳು ಮತ್ತು ಸೀಟ್ ಬ್ಲಾಕ್ ಮಾಡುವವರಿಗೆ ಕಡಿವಾಣ ಹಾಕಲಿದೆ. ಪ್ರವೇಶ ಪ್ರಕ್ರಿಯೆಯನ್ನು ಪ್ರಸ್ತುತ ಕೇಂದ್ರ ಸರ್ಕಾರದ ಶೇ.೧೫ ರಷ್ಟು ಅಖಿಲ ಭಾರತ ಕೋಟಾ ಸೀಟುಗಳು ಮತ್ತು ಶೇ.೧೦೦ ಡೀಮ್ಡ್ ವಿಶ್ವವಿದ್ಯಾಲಯದ ಸೀಟುಗಳ ನಡುವೆ ವಿಂಗಡಿಸಲಾಗಿದೆ.ರಾಜ್ಯಗಳು ಸರ್ಕಾರಿ ಕಾಲೇಜುಗಳಲ್ಲಿ ಶೇ.೮೫ ರಷ್ಟು ಸೀಟುಗಳು ಮತ್ತು ಖಾಸಗಿ ವೈದ್ಯಕೀಯ ಶಾಲೆಗಳಲ್ಲಿನ ಎಲ್ಲಾ ಸೀಟುಗಳು. ಭರ್ತಿ ಮಾಡಲು ನಿರ್ಧರಿಸಲಾಗಿದ ಎಂದು ಹೇಳಿದದ್ದಾರೆ.ತಮಿಳುನಾಡಿನಂತಹ ರಾಜ್ಯಗಳು ತಮ್ಮ ಸರ್ಕಾರಿ ಕಾಲೇಜುಗಳಲ್ಲಿ ಸೀಟುಗಳನ್ನು ಸಲ್ಲಿಸುವ ಹಕ್ಕನ್ನು ಕೇಂದ್ರ ಸರ್ಕಾರ ಉಲ್ಲಂಘಿಸುತ್ತಿದೆ.ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಂಶೋಧನಾ ನಿರ್ದೇಶನಾಲಯದ ಅಧಿಕಾರಿಯೊಬ್ಬರು ಅಧಿಸೂಚನೆ ನೋಡಿಲ್ಲ ಎನ್ನಲಾಗಿದೆ.ಮಾಜಿ ಡಿಎಂಇಆರ್ ನಿರ್ದೇಶಕ ಡಾ ಪ್ರವೀಣ್ ಶಿಂಗಾರೆ ಕೇಂದ್ರ ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿದ್ದು ಎಂಬಿಬಿಎಸ್ ಸೀಟುಗಳ ವ್ಯರ್ಥವಾಗುವುದನ್ನು ತಪ್ಪಿಸಿ ಪ್ರತಿಭಾವಂತ ವಿದ್ಯಾರ್ಥಿಗಳು ಬಹು ಸೀಟುಗಳನ್ನು ನಿರ್ಬಂಧಿಸುವುದನ್ನು ತಡೆಯಲಿದೆ ಎಂದು ಹೇಳಿದ್ದಾರೆ.