ದೇಶಾದ್ಯಂತ ನಡೆಯುತ್ತಿರುವ ಭಾರತ ಜೋಡೊ ಪಾದಯಾತ್ರೆಯ ಪೂರ್ವಭಾವಿ ಸಭೆ

ವಿಜಯಪುರ, ಸೆ.13-ದೇಶಾದ್ಯಂತ ನಡೆಯುತ್ತಿರುವ “ಭಾರತ ಜೋಡೊ” ಪಾದಯಾತ್ರೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪೂರ್ವಭಾವಿ ಸಭೆ ಜರುಗಿತು.
ಪ್ರಾಸ್ತಾವಿಕವಾಗಿ ಜಿಲ್ಲಾಧ್ಯಕ್ಷರಾದ ರಾಜು ಆಲಗೂರ ರವರು ಮಾತನಾಡಿ ರಾಹುಲ ಗಾಂಧಿಯವರ ಕನಸಿನ ಭಾರತದ “ಭಾರತ ಐಕ್ಯತಾ ಪಾದಯಾತ್ರೆ”ಯು ಇದೇ ಸಪ್ಟೆಂಬರ್ 7 ರಿಂದ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಕಾಶ್ಮೀರವರೆಗೆ ನಡೆಯಲಿದೆ. ಈ ಪಾದಯಾತ್ರೆಯು ನಮ್ಮ ಕರ್ನಾಟಕಕ್ಕೆ ಸಪ್ಟೆಂಬರ್ 30 ರಂದು ಬರಲಿದ್ದು, ಅಕ್ಟೋಬರ್ 21 ರಂದು ರಾಯಚೂರಗೆ ಆಗಮಿಸಲಿದ್ದು, ಪಾದಯಾತ್ರೆಯು ರಾಯಚೂರಿಗೆ ಬಂದಾಗ ವಿಜಯಪುರ ಜಿಲ್ಲೆಯ ಪ್ರತಿ ವಿಧಾನಸಭಾ ಮತಕ್ಷೇತ್ರದಿಂದ ಸುಮಾರು 5000 ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಹೇಳಿದರು. ಹಾಗೂ ಇತರ ರಾಜ್ಯದ ಅತಿಥಿ ಪಾದಯಾತ್ರಿಗಳು, ಕರ್ನಾಟಕದಲ್ಲಿ 21 ದಿನವೂ ಪಾದಯಾತ್ರೆಯಲ್ಲಿ ಭಾಗವಹಿಸುವರು ಮತ್ತು ಸ್ವಯಂಪ್ರೇರಿತರಾಗಿ ಭಾಗವಹಿಸುವವರು ರಾಹುಲ ಗಾಂಧಿಯವರೊಂದಿಗೆ ಹೆಜ್ಜೆ ಹಾಕುತ್ತಾರೆ ಹಾಗೂ ನಡುವೆ ಅಲ್ಲಿ ನಿಗದಿತ ಜನ/ಸಂಸ್ಥೆಗಳ ಪ್ರತಿನಿಧಿಗಳ ಜೊತೆ ರಾಹುಲ ಗಾಂಧಿಯವರು ಸಂವಾದ ನಡೆಸಲಿದ್ದಾರೆ. ಆದುದರಿಂದ, ಸ್ಥಳೀಯ ಮತ್ತು ವಿಜಯಪುರ ಜಿಲ್ಲೆಯ ಪ್ರತಿ ವಿಧಾನಸಭಾ ಮತಕ್ಷೇತ್ರದಿಂದ ಭಾಗವಹಿಸುವ ಪಾದಯಾತ್ರಿಗಳಿಗೆ ಸುಮಾರು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಯಾತ್ರೆಯಲ್ಲಿ ಸೇರಿಕೊಂಡು ದಿನದಂತ್ಯದ ವರೆಗೆ ಹೆಜ್ಜೆ ಹಾಕುವಂತೆ ಎಲ್ಲ ಏರ್ಪಾಟು ಮಾಡಲಾಗಿದೆ ಎಂದು ಹೇಳಿದರು.
ಈ ಪೂರ್ವಭಾವಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರು ಮತ್ತು ಮುಖ್ಯ ಸಚೇತಕರಾದ ಪ್ರಕಾಶ ರಾಠೋಡ ರವರು ಮಾತನಾಡಿ ಉದಯಪುರ ಘೋಷಣೆಯಲ್ಲಿ ಅಳವಡಿಸಲಾದ ಭಾರತ ಜೋಡೊ ಪಾದಯಾತ್ರೆಯು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ ಗಾಂಧಿಯವರ ಸಾರಥ್ಯದಲ್ಲಿ ನಡೆಯುತ್ತಿದ್ದು, ಅದರ ಸಂಪೂರ್ಣ ಯಶಸ್ಸಿಗಾಗಿ ತೊಡಗಿಸಿಕೊಳ್ಳುವ ಹುಮ್ಮಸ್ಸಿನಲ್ಲಿ ಕರ್ನಾಟಕ ರಾಜ್ಯದಾದ್ಯಂತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಸನ್ನದ್ಧರಾಗಿರುವುದು ನಮಗೆಲ್ಲಾ ಚೇತೋಹಾರಿ ವಿಚಾರವಾಗಿದೆ. ಪ್ರಸ್ತುತ ದೇಶವು ಎದುರಿಸುತ್ತಿರುವ ಸಂಕಟಗಳನ್ನು ಜನರಿಗೆ ಮನದಟ್ಟು ಮಾಡಿ ಮುರಿದ ಮನಸ್ಸುಗಳನ್ನು ಬೆಸೆದು ಭಾರತವನ್ನು ಒಗ್ಗೂಡಿಸಿ, ಪ್ರಜಾಸತ್ತಾತ್ಮಕ, ಸರ್ವತಂತ್ರ ಸ್ವತಂತ್ರ ಸಮಗ್ರ ಶಾಂತಿ ಸೌಹಾರ್ದತೆಯ ಭಾರತವನ್ನು ಪುನರ್‍ನಿರ್ಮಾಣ ಮಾಡುವ ಹಾಗು ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷದ ಮೇಲಿದೆ. ಈ ಜವಾಬ್ದಾರಿಯನ್ನು ನಿರ್ವಹಿಸುವ ನಿಟ್ಟಿನಲ್ಲಿ ಮತ್ತೆ ಸ್ವಾತಂತ್ರ್ಯ ಸಂಗ್ರಾಮದ ಸ್ಪೂರ್ತಿಯೊಂದಿಗೆ ಕಾಂಗ್ರೆಸ್ ಪಕ್ಷವು ಸರ್ವ ಸನ್ನದ್ಧವಾಗಿದೆ. ಅದರ ಅಂಗವಾಗಿ ಜನ-ಜಾಗೃತಿ ಮೂಡಿಸುವ ಸಲುವಾಗಿ ಭಾರತ ಜೋಡೊ ಪಾದಯಾತ್ರೆ (ಭಾರತ ಐಕ್ಯತಾ ಯಾತ್ರೆ) ನಡೆಯುತ್ತಿದೆ ಎಂದು ಹೇಳಿದರು.
ಈ ಪೂರ್ವಭಾವಿ ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಾಂತಾ ನಾಯಕ, ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ ಮುಶ್ರೀಫ್, ಬಿ.ಎಸ್. ಪಾಟೀಲ (ಯಾಳಗಿ) ಮಾಜಿ ಶಾಸಕ ವಿಠ್ಠಲ ಕಟಕಧೋಂಡ ಮಾತನಾಡಿದರು.
ಈ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ರಾಮನಗೌಡ ಬಗಲಿ, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಮಹ್ಮದರಫೀಕ್ ಟಪಾಲ, ಡಿ.ಎಚ್. ಕಲಾಲ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಲ್ಲಾ ಅಂಗ ಘಟಕಗಳ ಅಧ್ಯಕ್ಷರಾದ ಡಾ.ಗಂಗಾಧರ ಸಂಬಣ್ಣಿ, ಮಲ್ಲನಗೌಡ ಬಿರಾದಾರ, ಆನಂದ ಜಾಧವ, ರಾಜೇಶ್ವರಿ ಚೋಳಕೆ, ಬ್ಲಾಕ್ ಅಧ್ಯಕ್ಷರುಗಳಾದ ಜಮೀರಅಹ್ಮದ ಬಕ್ಷಿ, ಆರತಿ ಶಹಾಪೂರ, ಜಾವೀದ ಮೋಮಿನ್, ಕಲ್ಲನಗೌಡ ಎಸ್. ಬಿರಾದಾರ, ರಫೀಕ ಪಕಾಲಿ, ಎಸ್.ಬಿ. ಹಾರಿವಾಳ, ಆರ್.ಡಿ. ಹಕ್ಕೆ, ಶಾಹಜಾನ ಮುಲ್ಲಾ, ಬಾಳನಗೌಡ ಪಾಟೀಲ, ಕೆಪಿಸಿಸಿ ಸಂಯೋಜಕರಾದ ವಿನೋದ ವ್ಯಾಸ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ತಮ್ಮಣ್ಣ ಮೇಲಿನಕೇರಿ, ಸಲೀಮ್ ಪೀರಜಾದೆ, ಇರ್ಫಾನ ಶೇಖ, ಅಡಿವೆಪ್ಪ ಸಾಲಗಲ್, ರವೀಂದ್ರ ಜಾಧವ, ಆಸ್ಮಾ ಕಾಲೇಬಾಗ, ಸುಜಾತಾ ಸಿಂಧೆ, ಶಮೀಮಾ ಅಕ್ಕಲಕೋಟ, ಬಾಬು ಯಾಳವಾರ, ಬಿ.ಎಸ್. ಗಸ್ತಿ, ಕುಲದೀಪ ಸಿಂಗ, ಅಲ್ಲಾಬಕ್ಷ ಬಾಗಲಕೋಟ, ರಜಾಕ ಕಾಖಂಡಕಿ, ಮಹಾದೇವ ಜಾಧವ, ಅಜಿತ ಸಿಂಗೆ ಪ್ರೇಮಸಿಂಗ ಚವ್ಹಾಣ, ಪಿರೋಜ ಶೇಖ, ಮೀರಾಸಾಬ ಮುಲ್ಲಾ, ಅಕಬರ ನದಾಫ್, ಎಂ.ಎಸ್. ನಾಯಕ, ರಾಜು ಚವ್ಹಾಣ, ರಾಜು ಜಾಧವ, ಬಸೀರಅಹ್ಮದ ಗೌರ, ಸುನೀಲ ನಾಯಕ, ಅಸ್ಫಾಕ ಮನಗೂಳಿ, ಹೈದರ ನದಾಫ್, ಮಹಾದೇವ ರಾಠೋಡ ಮುಂತಾದವರು ಉಪಸ್ಥಿತರಿದ್ದರು.