ದೇಶಾದ್ಯಂತ ಅಮೃತ್ ಭಾರತ್ ಸಂಚಾರ

ನವದೆಹಲಿ,ಡಿ,೨೬- ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಎಸಿ ಮತ್ತು ನಾನ್ ಎಸಿ ಕೋಚ್‌ಗಳನ್ನು ಹೊಂದಿದ್ದು, ದೇಶಾದ್ಯಂತ ಮಾರ್ಗಗಳಲ್ಲಿ ನಿಯೋಜಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ನವದೆಹಲಿ ನಿಲ್ದಾಣದಲ್ಲಿ ಮೊದಲ ಅಮೃತ್ ಭಾರತ್ ರೈಲನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು ನಂತರ ಉತ್ತಮ ವೇಗವರ್ಧನೆಯಿಂದಾಗಿ ಈ ರೈಲುಗಳು ಪ್ರಯಾಣದ ಸಮಯ ಕಡಿಮೆಗೊಳಿಸುತ್ತವೆ ಎಂದು ಹೇಳಿದ್ದಾರೆ.
ಈ ರೈಲುಗಳು “ಪುಶ್-ಪುಲ್ ತಂತ್ರಜ್ಞಾನ ಹೊಂದಿವೆ, ಅಂದರೆ ಎರಡೂ ತುದಿಗಳಲ್ಲಿ ಎರಡು ಎಂಜಿನ್‌ಗಳಿವೆ. ಒಂದು ಎಂಜಿನ್ ಎಳೆಯುವಾಗ, ಇನ್ನೊಂದು ಹಿಂದಿನಿಂದ ತಳ್ಳುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರಿಂದ ಮೊದಲ ರೈಲು ಹಸಿರುನಿಶಾನೆಗೆ ಸಿದ್ಧವಾಗಿದೆ ಎಂದು ಹೇಳಿದ ಅವರು ಅಯೋಧ್ಯೆಯಿಂದ ರೈಲನ್ನು ಫ್ಲ್ಯಾಗ್ ಆಫ್ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಹೊಸ ಅಮೃತ್ ಭಾರತ್ ರೈಲಿನಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ. ೪-೫ ತಿಂಗಳ ಕಾಲ ಈ ರೈಲುಗಳನ್ನು ಓಡಿಸುತ್ತೇವೆ. ಇದುವರೆಗೆ ಈ ರೈಲಿನ ವಿನ್ಯಾಸದ ಸಮಯದಲ್ಲಿ ಯೋಚಿಸಿದ್ದಕ್ಕಿಂತ ಫಲಿತಾಂಶಗಳು ಉತ್ತಮವಾಗಿವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ರಾಜ್ಯಗಳಿಗೆ ವಂದೇ ಭಾರತ್ ರೈಲುಗಳನ್ನು ತೆಗೆದುಕೊಂಡಂತೆ, ಈ ರೈಲುಗಳು ಅವರೆಲ್ಲರನ್ನೂ ವಿಸ್ತರಣೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.