ದೇಶಸೇವೆಗೈದು ತವರಿಗೆ ಮರಳಿದ ವೀರ ಯೋಧರಿಗೆ ಸನ್ಮಾನ

ದಾವಣಗೆರೆ.ಏ.15; ದಾವಣಗೆರೆ ತಾಲೂಕು ಕುರ್ಕಿ ಗ್ರಾಮದ ಶ್ರೀಮತಿ ಕಲ್ಲಮ್ಮ ಬಸವರಾಜಪ್ಪ   ದಂಪತಿಗಳ ಪುತ್ರ  ಕೆ.ಬಿ.ಮಲ್ಲಿಕಾರ್ಜುನರವರು. ಭಾರತ ಸರಕಾರದ ಗಡಿ ಭದ್ರತೆ ಪಡೆ (ಬಿ.ಎಸ್.ಎಫ್.) ಯನ್ನು 2002ರಲ್ಲಿ ಸೇರಿಕೊಂಡು ಜಮ್ಮು ಮತ್ತು  ಕಾಶ್ಮೀರದಲ್ಲಿ ತರಬೇತಿ ಪಡೆದು .ಜಮ್ಮು ಮತ್ತು ಕಾಶ್ಮೀರ. ಪಶ್ಚಿಮ ಬಂಗಾಳದ ಇಂಡೋ-ಬಾಂಗ್ಲ ಗಡಿ ಭಾಗ . ಛತ್ರಿಸ್ ಗಡ್ ದ ರಾಯಪುರದಲ್ಲಿ ಮತ್ತು  ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ ಸೈನಿಕರಿಗೆ ಬೋಧಕರಾಗಿ .ನಂತರ ತ್ರಿಪುರಾದ ಗಡಿ ಭಾಗದಲ್ಲಿ ಭಾರತ ಮಾತೆಗೆ 21 ವರ್ಷ ಸೇವೆ ಸಲ್ಲಿಸಿದ್ದಾರೆ. ತಾಲೂಕಿನ ಕುರ್ಕಿ ಗ್ರಾಮದ ಶ್ರೀಮತಿ ಸರೋಜಮ್ಮ ಷಣ್ಮಖಪ್ಪ ದಂಪತಿಗಳ ಎರಡನೇ ಪುತ್ರ  ಕೆ.ಎಸ್. ವಿನಾಯಕರವರು ಭಾರತ ಸರಕಾರದ ಭಾರತೀಯ ಸೇನೆ ಪಡೆ (ಇಂಡಿಯನ್ ಆರ್ಮಿ.) ಯನ್ನು 2003ರಲ್ಲಿ ಸೇರಿಕೊಂಡು ಉತ್ತರ ಪ್ರದೇಶದ ಲಕ್ನೋದಲ್ಲಿ ತರಬೇತಿ ಪಡೆದು ಪಶ್ಚಿಮ ಬಂಗಾಳದ ಭೂತಾನ ಗಡಿ ಭಾಗ . ಉತ್ತರ ಪ್ರದೇಶದ ಲಕ್ನೋದ ಡಿಪೊ ಎ. ಎಪ್ . ಎಂ.ಎಸ್.ಡಿ ಮತ್ತು  ಜಮ್ಮು ಮತ್ತು ಕಾಶ್ಮೀರ.  ಪಂಜಾಬಿನ ಚಂಡೀಗಡ್ ನಲ್ಲಿ ನಂತರ ಗೋವಾದ ಪಣಜಿಯ ಮಿಲಿಟರಿ ಆಸ್ಪತ್ರೆಯ ಸೇವೆಯೊಂದಿಗೆ ಭಾರತ ಮಾತೆಗೆ 17 ವರ್ಷ ಸೇವೆ ಸಲ್ಲಿಸಿದ್ದಾರೆ.ಈ ಇಬ್ಬರು ಕುರ್ಕಿ ವೀರ ಪುತ್ರ ರರು ಭಾರತ ಮಾತೆ ಸೇವೆ ಸಲ್ಲಿಸಿ ಸುರಕ್ಷಿತವಾಗಿ ತವರಿಗೆ ಬಂದ ಸಂದರ್ಭದಲ್ಲಿ ಅತ್ಮೀಯವಾಗಿ ಬರಮಾಡಿಕೊಂಡು ದೇಶ ಸೇವೆ ಸಲ್ಲಿಸಿದ ವೀರರಿಗೆ ಸಾಹಿತಿಗಳಾದ ಎಸ್.ಸಿದ್ದೇಶ್ ಕುರ್ಕಿಯವರು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕೆ. ಎಸ್.ಹಾಲೇಶ್. ಕೆ.ವಿ. ಓಂಕಾರಪ್ಪ. ಯೋಧರ ತಂದೆ ತಾಯಿಗಳಾದ ಕಲ್ಲಮ್ಮ ಬಸವರಾಜಪ್ಪ. ಸರೋಜಮ್ಮ ಮತ್ತು ಯೋಧರ ಪತ್ನಿಯರಾದ ಶ್ರೀಮತಿ ಶೀಲಾ ವಿನಾಯಕ. ಶ್ರೀಮತಿ ಶ್ವೇತ ಮಲ್ಲಿಕಾರ್ಜುನ ಹಾಗೂ ಯೋಧರ ಮಕ್ಕಳು ಇದ್ದರು.