೧೫೨ ಲಕ್ಷ ಕೋಟಿ ಸಾಲ
ರಾಯಚೂರು,ಏ.೨೮- ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಭರವಸೆಗಳು ರಾಜ್ಯ ಸರ್ಕಾರದ ಮೇಲೆ ಸಾಲದ ಹೊರೆಯಾಗಲಿದೆ ಎಂದು ಆರೋಪಿಸಿರುವ ಬಿಜೆಪಿ ಹೇಳಿಕೆಯನ್ನು ಅಲ್ಲಗಳೆದಿರುವ ಮಾಜಿ ಸಿಎಂ ಸಿದ್ದರಾಮಯ್ಯ ದೇಶವನ್ನು ಸಾಲದ ಕೂಪಕ್ಕೆ ತಳ್ಳಿರುವವರು ಬಿಜೆಪಿಯವರು ಎಂದು ತೀವ್ರ ವಾಗ್ದಾಳಿ ನಡೆಸಿದರು.
ಅವರು ನಗರದ ಖಾಸಗಿ ಹೋಟಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಅಧಿಕಾರವಧಿಯಲ್ಲಿ ೫.೬ ಲಕ್ಷ ಕೋಟಿ ರೂ ಸಾಲ ಮಾಡಲಾಗಿದೆ. ೭೦ ವರ್ಷಗಳಲ್ಲಿದ್ದ ೨.೪೨ ಲಕ್ಷ ಕೋಟಿ ಸಾಲ ನರೇಂದ್ರ ಮೋದಿಯವರ ೯ ವರ್ಷ ಅಧಿಕಾರವಧಿಯಲ್ಲಿ ೧೫೨ ಲಕ್ಷ ಕೋಟಿಗೆ ಏರಿಕೆಯಾಗಿದೆ. ಸ್ವಾತಂತ್ರ್ಯ ಬಂದಾಗಿನಿಂದ ದೇಶದ ಸಾಲ ೫೩.೧೧ ಕೋಟಿಯಷ್ಟು ಮಾತ್ರ ಇತ್ತು ಎಂದು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಭರವಸೆಗಳ ಈಡೇರಿಕೆಗಾಗಿ ೫೦ ರಿಂದ ೬೦ ಸಾವಿರ ಕೋಟಿ ವೆಚ್ಚವಾಗಲಿದೆ. ಈ ಲೆಕ್ಕಾಚಾರದ ಆಧಾರದ ಮೇಲೆಯೇ ಗ್ಯಾರಂಟಿಗಳನ್ನು ಘೋಷಣೆ ಮಾಡಲಾಗಿದೆ. ೧೩ ಬಾರಿ ಬಜೆಟ್ ಮಂಡಿಸಿರುವ ನನಗೆ ಎಲ್ಲಾ ಆರ್ಥಿಕ ವ್ಯವಸ್ಥೆಯ ಬಗ್ಗೆ ಅರಿವು ಇರುವುದರಿಂದ ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ಸರ್ಕಾರಕ್ಕೆ ಹೊರೆಯಾಗುವುದಿಲ್ಲ ಎಂದು ಹೇಳಿದ್ದಾರೆ.
ಇದುವರೆಗೂ ಬಿಜೆಪಿ ನೀಡಿರುವ ಭರವಸೆಗಳಲ್ಲಿ ೬೦೦ ಭರವಸೆಗಳಲ್ಲಿ ಕೇವಲ ೫೬ ಭರವಸೆ ಮಾತ್ರ ಈಡೇರಿವೆ. ಆದರೆ, ಪ್ರತಿಯೊಬ್ಬರ ಖಾತೆಗೆ ೧೫ ಲಕ್ಷ ಹಣ ಹಾಕುವುದು, ಯುವಕರಿಗೆ ೨ ಲಕ್ಷ ಉದ್ಯೋಗ ಸೃಷ್ಠಿಸುವುದು, ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರ ಯಾವ ಭರವಸೆಗಳು ಈಡೇರಿಲ್ಲ ಎಂದು ಮೋದಿಗೆ ಟಾಂಗ್ ನೀಡಿದರು.
ಸಂಸದ ತೇಜಸ್ವಿ ಸೂರ್ಯ ಸಂವಿಧಾನವನ್ನೇ ಸುಟ್ಟು ಹಾಕುವುದಾಗಿ ಹೇಳಿದ್ದ ರೈತರ ಸಾಮನ್ನಾದಿಂದ ದೇಶ ದಿವಾಳಿಯಾಗುತ್ತದೆ ಎನ್ನುವ ಈ ಸಂಸದನಿಗೆ ಬಿಜೆಪಿ ಸರ್ಕಾರ ಅಂಬಾನಿ, ಆದಾನಿ ಸೇರಿ ಉದ್ಯಮಿಗಳ ೧೨ ಲಕ್ಷ ಕೋಟಿ ಸಾಲ ಮನ್ನಾ ಮಾಡಿರುವುದರಿಂದ ದೇಶ ದಿವಾಳಿಯಾಗುವುದಿಲ್ಲವೇ ಎಂದರು.
ಬಾಕ್ಸ್
ಸಿದ್ದರಾಮನಹುಂಡಿ ಗಲಾಟೆ ಪ್ರಕರಣ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ನಮ್ಮ ಊರಿನಲ್ಲಿ ಬಿಜೆಪಿಯವರೇ ಗಲಾಟೆ ಮಾಡಿಸಿದ್ದಾರೆ. ಇದುವರೆಗೂ ಎಂತಹ ಸಂದರ್ಭದಲ್ಲಿ ನಮ್ಮ ಗ್ರಾಮದಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಯಾವ ಗಲಾಟೆಯೂ ನಡೆದಿರಲಿಲ್ಲ. ಯಾವ ಪಕ್ಷದವರು ರಾಜಕೀಯ ಸಂಘರ್ಷ ನಮ್ಮ ಊರಿನಲ್ಲಿ ಸೃಷ್ಟಿಸಿರಲಿಲ್ಲ, ಕಾಂಗ್ರೆಸ್ ಕಾರ್ಯಕರ್ತರು ನನಗೆ ಜೈಕಾರ ಕೂಗುತ್ತಿದ್ದನ್ನು ಸಹಿಸದೇ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಪಕ್ಷಗಳು ರಾಜಕೀಯ ಪ್ರಚಾರ ಸಂದರ್ಭದಲ್ಲಿ ಅನಗತ್ಯ ಗಲಾಟೆ, ಗಲಭೆ ಸೃಷ್ಟಿಸುವುದು ತಪ್ಪು.
ಪ್ರತಾಪ ಸಿಂಹ ಹಾಗೂ ನಮ್ಮ ಕ್ಷೇತ್ರಕ್ಕೂ ಯಾವುದೇ ಸಂಬಂಧವಿಲ್ಲ ಮೋದಿ ಹತಾಶೆಯಿಂದ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ನೀಡಿದ ಎಲ್ಲಾ ಭರವಸೆಗನ್ನು ಈಡೇರಿಸಲಾಗಿದೆ. ನಮ್ಮ ಊರಿನಲ್ಲಿ ನಡೆದಿರುವ ಗಲಾಟೆಗೆ ಬಿಜೆಪಿಯವರೇ ಕಾರಣ, ಖುದ್ದು ಬಿಜೆಪಿಯವರೇ ಗ್ರಾಮದಲ್ಲಿ ಗಲಾಟೆ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಎನ್‌ಎಸ್ ಬೋಸರಾಜು, ಮಹ್ಮಮದ್ ಶಾಲಂ, ಕೆ.ಶಾಂತಪ್ಪ ಸೇರಿದಂತೆ ಉಪಸ್ಥಿತ್ತರಿದ್ದರು.