
ಸಂಜೆವಾಣಿ ವಾರ್ತೆ
ಹೊಸಪೇಟೆ ಆ17: ಪತ್ರಿಯೊಬ್ಬರು ದೇಶಭಕ್ತ ಹಾಗೂ ಧರ್ಮಾಚರಣೆಯ ಮೂಲಕ ವಿದೇಯತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಚಿಂತಾಮಣಿ ಮಠದ ಶ್ರೀ ಶಿವಾನಂದಭಾರತೀ ಸ್ವಾಮಿಜೀಗಳು ಕರೆ ನೀಡಿದರು.
ಅವರು ಹೊಸಪೇಟೆಯ ಚಿಂತಾಮಣಿ ಮಠದಲ್ಲಿ 15 ಆಗಸ್ಟ್ ದಿನಾಚರಣೆಯ ಅಂಗವಾಗಿ ಶ್ರೀ ಚಿಂತಾಮಣಿ ಮಠ ಹೊಸಪೇಟೆಯಲ್ಲಿ ಭಾರತ ಮಾತೆಯ ಪೂಜೆಯನ್ನು ನೆರವೇರಿಸಲಾಯಿತು.
ಶ್ರೀಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಭಕ್ತರನ್ನುದ್ದೇಶಿಸಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಉಪನ್ಯಾಸ ನೀಡಿದರು.ಭಾರತಾಂಬೆ ಬೇರೆಯಲ್ಲ ನಮ್ಮ ಹೆತ್ತ ತಾಯಿ ಬೇರೆಯಲ್ಲ. ನಮ್ಮ ತಾಯಿಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ನಮಗೆ ಸ್ವಾತಂತ್ರ್ಯ ಸುಲಭವಾಗಿ ದಕ್ಕಿರುವುದಲ್ಲ. ಇದರ ಹಿಂದೆ ಅನೇಕರ ಬಲಿದಾನ, ರಕ್ತದಾನ, ಕುಟುಂಬ ತ್ಯಾಗಗಳಿವೆ. ನಮ್ಮ ಹಿರಿಯರ ಹೋರಾಟ ಸಾರ್ಥಕವಾಗಬೇಕಾದರೆ ನಾವು ದೇಶ ಸೇವೆ, ಧರ್ಮಾಚರಣೆ ಎಂದೆಂದಿಗೂ ಬಿಡಬಾರದು.
ನಮ್ಮ ನಡೆ, ನುಡಿ, ವಸ್ತ್ರಧಾರಣೆ, ಚಿಂತನೆಗಳಲ್ಲಿ ಸದಾ ಭಾರತೀಯತೆ ತುಂಬಿರಬೇಕು. ನಮ್ಮ ಮಕ್ಕಳ ಹಣೆಯ ಮೇಲೆ ಕುಂಕುಮವೋ, ತಿಲಕವೋ, ಭಸ್ಮವೋ ಇರಲಿ. ಹೆಚ್ಚುಹೆಚ್ವು ಭಾರತೀಯ ಉಡುಪುಗಳನ್ನು ಧರಿಸಲಿ, ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುವ ಉಡುಪುಗಳನ್ನು ಧರಿಸಲು ಪೋಷಕರು ಸಲಹೆ ಕೊಡಬೇಕು ಎಂದು ಹೇಳುತ್ತಾ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಲೋಕಮಾನ್ಯ ಬಾಲಗಂಗಾಧರ ತಿಲಕ್, ಖುದಿರಾಮ್ ಬೋಸ್, ಬಿರ್ಸಾಮುಂಡ, ಸ್ವಾಮಿ ವಿವೇಕಾನಂದರ, ಭಗವಾನ್ ಶ್ರೀಧರ ಸ್ವಾಮಿಗಳ, ಸ್ವಾಮಿರಾಮ, ಶ್ರೀ ಶಂಕರಾಚಾರ್ಯರ ಬಗ್ಗೆ ಶ್ರೀ ಚಿಂತಾಮಣಿ ಮಠದ ಸ್ವಾಮಿಗಳು ಕಾರ್ಯವಿಧಾನಗಳನ್ನು ತಿಳಿಸಿಕೊಟ್ಟರು.
ಮಕ್ಕಳಿಂದ ದೇಶಭಕ್ತಿ ಗೀತಗಾಯನ, ರಾಷ್ಟ್ರಭಕ್ರರು ಪರಿಚಯ ಸಹ ಈ ಸಂದರ್ಭದಲ್ಲಿ ನಡೆಯಿತು.