ದೇಶಭಕ್ತರ ಬಲಿದಾನದಿಂದ ನಾವಿಂದು ಸ್ವತಂತ್ರರಾಗಿದ್ದೇವೆ: ಖಾಶೆಂಪೂರ

ಬೀದರ.ಮಾ.24: ಸ್ವಾತಂತ್ರ್ಯ ಚಳುವಳಿಗೆ ನವಶಕ್ತಿ ತುಂಬಿದ ಶಹೀದ್ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನ ನಿಮಿತ್ತ ನವದೆಹಲಿಯ ಜೈ ಭಾರತ ಮಾತಾ ಸೇವಾ ಸಮಿತಿಯವರು ನಗರದ ಅರಮನೆ ಆವರಣದ ತ್ರಿಪುರವಾಸಿನಿ ಸಭಾಂಗಣದಲ್ಲಿ ಹುತಾತ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಫಾಲ್ಗೊಂಡ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿ, ಹುತಾತ್ಮರಾದ ಭಗತ್ ಸಿಂಗ್, ರಾಜಗುರು, ಸುಖದೇವ್ ರವರ ದೇಶ ಪ್ರೇಮ, ಸ್ವಾತಂತ್ರ್ಯ ಪಡೆಯಲೇಬೇಕೆಂಬ ಛಲ, ಅವರ ದೇಶ ಭಕ್ತಿಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಅನೇಕರು ಮಾತನಾಡಿದರು.

ಈ ಸಂದರ್ಭದಲ್ಲಿ ನವದೆಹಲಿಯ ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಶ್ರೀ ಸದ್ಗುರು ಹವಾ ಮಲ್ಲಿನಾಥ ಮಹಾರಾಜ (ನಿರಗುಡಿ ಮುತ್ಯಾ), ಸಮಿತಿಯ ಮುಖಂಡರು, ರಾಜಕೀಯ ನಾಯಕರು, ನೌಕರ ವರ್ಗದವರು ಸೇರಿದಂತೆ ಅನೇಕರಿದ್ದರು.